ತಿರುವನಂತಪುರ: ಸಿರಿಯಾ, ಇರಾಕ್ನಲ್ಲಿ ದಿವಾಳಿಯಾಗಿರುವ ಐಸಿಸ್ ಉಗ್ರ ಸಂಘಟನೆ ಇದೀಗ ಭಾರತ ಹಾಗೂ ಶ್ರೀಲಂಕಾವನ್ನು ಟಾರ್ಗೆಟ್ ಮಾಡಿದೆ ಎಂಬ ವರದಿ ಆತಂಕಕ್ಕೀಡು ಮಾಡಿದೆ.
ಈ ಸಂಬಂಧ ಕೇರಳ ರಾಜ್ಯ ಗುಪ್ತಚರ ದಳವು, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಎರಡು ಪತ್ರಗಳನ್ನು ಬರೆದು ಎಚ್ಚರಿಸಿದೆ. ಕೇರಳದ ಪ್ರಮುಖ ಬಂದರು ಮಾಲ್ ಹಾಗೂ ಮತ್ತಿತರ ಪ್ರದೇಶಗಳನ್ನು ಐಸಿಸ್ ಗುರಿಯಾಗಿಸಿಕೊಂಡಿದೆ. ಈಗಾಗಲೇ ಸೈಬರ್ ಸಂಬಂಧಿ ಕೆಲಸಗಳಲ್ಲಿ ಸಂಘಟನೆ ತೊಡಗಿರುವುದು ದಾಳಿಯ ಮುನ್ಸೂಚನೆ ಎಂದು ಹೇಳಿದೆ.
ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಕಾಶ್ಮೀರ ಈಗಾಗಲೇ ಐಸಿಸ್ ಪ್ರಭಾವಿತ ಪ್ರದೇಶಗಳಾಗಿವೆ. ದಾಳಿ ಕುರಿತಾಗಿ ಟೆಲಿಗ್ರಾಂನಲ್ಲಿ ಉಗ್ರರು ಮಾತುಕತೆ ನಡೆಸಿದ್ದು, ಮಾಹಿತಿ ಸೋರಿಕೆ ದೃಷ್ಟಿಯಿಂದ ಚಾಟ್ಸೆಕ್ಯುರ್, ಸಿಗ್ನಲ್ ಹಾಗೂ ಸೈಲೆಂಟ್ ಟೆಕ್ಸ್ಟ್ಗಳನ್ನು ಬಳಸುತ್ತಿದ್ದಾರೆ. ಕೇರಳದಲ್ಲಿಯೇ ಸುಮಾರು 100 ಯುವಕರು ಈ ಉಗ್ರ ಸಂಘಟನೆ ಸೇರಿದ್ದಾರೆ. ಇವರೆಲ್ಲ ದಕ್ಷಿಣ ಕೇರಳದ ಭಾಗದವರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇರಳದ ಪೊಲೀಸರು ಹನಿಟ್ರ್ಯಾಪ್ಗೆ ಒಳಗಾದ 10-12 ಪ್ರಕರಣಗಳು ವರದಿಯಾಗಿವೆ. ಹಾಗಾಗಿ ಆಂತರಿಕ ಭದ್ರತೆ ಘಟಕಗಳನ್ನು ಸ್ಥಾಪನೆ ಮಾಡಿ, ತನಿಖೆ ನಡೆಸಲಾಗ್ತಿದೆ. ಶ್ರೀಲಂಕಾ ದಾಳಿ ಸಂಬಂಧ 30 ಮಂದಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದಿದ್ದಾರೆ.