ಕ್ರೈಸ್ಟ್‌ಚರ್ಚ್: ಎರಡನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲು ಒಂದೇ ಒಂದು ದಿನ ಬಾಕಿ ಇರುವಾಗಲೇ ಟೀಂ ಇಂಡಿಯಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಪಂದ್ಯದಲ್ಲಿ ವೇಗಿ ಇಶಾಂತ್ ಶರ್ಮಾ ಕಣಕ್ಕಿಳಿಯುವುದು ಡೌಟ್ ಎಂದು ಹೇಳಲಾಗುತ್ತಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಡೆದುಕೊಂಡು ಮಿಂಚಿದ್ದ ಇಶಾಂತ್ ಶರ್ಮಾ, ಎರಡನೇ ಟೆಸ್ಟ್ ಆಡಲು ಕಣಕ್ಕಿಳಿಯುವುದು ಡೌಟ್ ಆಗಿದೆ. ಇಂದಿನ ಅಭ್ಯಾಸದಲ್ಲಿ ಅವರು ಕಾಣಿಸಿಕೊಂಡಿಲ್ಲ. ಅಭ್ಯಾಸ ಮಾಡುತ್ತಿದ್ದ ವೇಳೆ ಬಲ ಪಾದದಲ್ಲಿ ನೋವು ಕಾಣಿಸಿಕೊಂಡಿರುವ ಕಾರಣ ಎರಡನೇ ಟೆಸ್ಟ್ ಪಂದ್ಯದಿಂದ ಅವರು ಹೊರಗೆ ಉಳಿಯಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈಗಾಗಲೇ ಸ್ಕ್ಯಾನ್ ಮಾಡಿಸಿಕೊಂಡಿರುವ ಅವರು ವರದಿಗಾಗಿ ಕಾಯುತ್ತಿದ್ದು, ಒಂದು ವೇಳೆ ಹೆಚ್ಚಿನ ತೊಂದರೆ ಕಾಣಿಸಿಕೊಂಡಿದರೆ ಅವರು ಎರಡನೇ ಟೆಸ್ಟ್ ಆಡಲ್ಲ. ಇಶಾಂತ್ ಶರ್ಮಾ ಎರಡನೇ ಟೆಸ್ಟ್ನಿಂದ ಹೊರಗುಳಿದರೆ ಉಮೇಶ್ ಯಾದವ್ ಅಥವಾ ನವದೀಪ್ ಸೈನಿ ತಂಡ ಸೇರಿಕೊಳ್ಳಲಿದ್ದಾರೆ.
ಈಗಾಗಲೇ ಆರಂಭಿಕ ಆಟಗಾರ ಪೃಥ್ವಿ ಶಾ ಗಾಯಗೊಂಡಿರುವ ಕಾರಣ ಅವರ ಸ್ಥಾನಕ್ಕೆ ಶುಬ್ಮನ್ ಗಿಲ್ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ. ಇದರ ಮಧ್ಯೆ ಇಶಾಂತ್ ಶರ್ಮಾ ಹೊರಗುಳಿದರೆ ತಂಡಕ್ಕೆ ಮತ್ತಷ್ಟು ಹಿನ್ನಡೆಯಾಗಲಿದೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿರುವ ಟೀಂ ಇಂಡಿಯಾ, ಸರಣಿ ಸಮಬಲ ಮಾಡಿಸಿಕೊಳ್ಳುವ ಉದ್ದೇಶದಿಂದ ಎರಡನೇ ಟೆಸ್ಟ್ನಲ್ಲಿ ಗೆಲುವು ಸಾಧಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.