ಹೈದರಾಬಾದ್ (ತೆಲಂಗಾಣ): ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದರೆ, ಹಳೆ ಹೈದರಾಬಾದ್ ಭಾಗದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಲಾಗುವುದು ಎಂದು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಹೇಳಿಕೆ ನೀಡಿದ್ದರು. ಇದಕ್ಕೆ ತೆಲಂಗಾಣ ಐಟಿ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ.ರಾಮ ರಾವ್ ತಿರುಗೇಟು ನೀಡಿದ್ದಾರೆ.
ಓದಿ: ಅಸಾದುದ್ದೀನ್ ಓವೈಸಿ ಮಹಮ್ಮದ್ ಅಲಿ ಜಿನ್ನಾರ ಇನ್ನೊಂದು ಅವತಾರ: ತೇಜಸ್ವಿ ಸೂರ್ಯ ಟೀಕಾ ಪ್ರಹಾರ
ಹೈದರಾಬಾದ್ ಪಾಕಿಸ್ತಾನದಲ್ಲಿದೆಯೇ? ನೀವು ನಿಮ್ಮ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿದ್ದೀರಾ? ಸರ್ಕಾರದಲ್ಲಿರುವವನು ಬಡತನ, ನಿರುದ್ಯೋಗ, ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆಸುವವರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು. ಹೈದರಾಬಾದ್‌ಗೆ ಏನಾಗಿದೆ? ಇಲ್ಲಿ ಜನರು ಒಟ್ಟಿಗೆ ವಾಸಿಸುತ್ತಿರುವುದರಿಂದ ಸರ್ಜಿಕಲ್ ಸ್ಟ್ರೈಕ್ ಮಾಡಲು ಬಯಸಿದ್ದೀರಾ? ಗೆಲುವಿಗಾಗಿ ನೀವು ಹೈದರಾಬಾದ್‌ನಲ್ಲಿ ಬೆಂಕಿ ಹಚ್ಚಲು ಬಯಸುತ್ತೀರಾ ಎಂದು ಕೆ.ಟಿ. ರಾಮ ರಾವ್ ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿ ವಿವಿಧ ಧರ್ಮದ ಜನರು ಹಲವು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಓದಿ:ಹದಗೆಟ್ಟ ದೆಹಲಿ ಹವಾಮಾನ: ಗೋವಾದಲ್ಲಿ ಸೋನಿಯಾ ಗಾಂಧಿ ಸೈಕಲ್ ಸವಾರಿ - ವಿಡಿಯೋ
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ಡಿಸೆಂಬರ್ 1 ರಂದು ನಡೆಯಲಿದ್ದು, ಡಿಸೆಂಬರ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.