ಟೆಹರಾನ್(ಇರಾನ್): ಇರಾನ್ನಲ್ಲಿ ಇಂದು 121 ಕೊರೊನಾದಿಂದ ಸಾವನ್ನಪ್ಪಿದ್ದು, ಇದುವರೆಗೆ ಇಲ್ಲಿ 3,933 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ 1,997 ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 64, 586ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆಯ ವಕ್ತಾರ ಕಿಯಾನೌಶ್ ಜಹಾನ್ಪೌರ್ ಸ್ಪಷ್ಟಪಡಿಸಿದ್ದಾರೆ.
ಇರಾನ್ ಮೊದಲ ಕೊರೊನಾ ಪ್ರಕರಣ ಫೆಬ್ರವರಿ 19ರಂದು ಪತ್ತೆಯಾಗಿದ್ದು, ಈಗ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ತೀವ್ರ ಉಪಟಳ ನೀಡುತ್ತಿದೆ. ಬೇರೆ ರಾಷ್ಟ್ರಗಳಲ್ಲಿ ಇರಾನ್ ನಲ್ಲಿ ಸಂಭವಿಸಿರುವ ಸಾವು-ನೋವುಗಳ ಬಗ್ಗೆ ಊಹೆಗಳಿವೆ ಎಂದಿರುವ ಅವರು ಸುಮಾರು 9,956 ಮಂದಿ ಸ್ಥಿತಿ ಗಂಭೀರವಾಗಿದೆ. ಸುಮಾರು 26 ಸಾವಿರ ಮಂದಿ ಇಲ್ಲಿಯವರೆಗೂ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈವರೆಗೂ 2,20,975 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದ್ದು, ಲಾಕ್ಡೌನ್ ವಿಧಿಸುವ ಮೂಲಕ ಸೋಂಕು ಹರಡದಂತೆ ಇರಲು ಕ್ರಮ ಕೈಗೊಳ್ಳಲಾಗಿದೆ. ಕಡಿಮೆ ಅಪಾಯವಿರುವ ವ್ಯವಹಾರಗಳನ್ನು ಶನಿವಾರದಿಂದ ಮತ್ತೆ ಆರಂಭಿಸಲಾಗಿದೆ.