ಅನಂತಪುರ(ಆಂಧ್ರ ಪ್ರದೇಶ): ಐಪಿಎಸ್ ಅಧಿಕಾರಿಯೊಬ್ಬರು ಡಿಎಸ್ಪಿ ಅವರ ಜೊತೆ ಸರಳವಾಗಿ ಸಪ್ತಪದಿ ತುಳಿದಿರುವ ಮದುವೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.
ಭಾನುವಾರ ಪುಟ್ಟಪರ್ತಿಯಲ್ಲಿ ಅನಂತಪುರ ಜಿಲ್ಲೆಯ ಹರ್ಷಿತಾ (ಡಿಎಸ್ಪಿ) ಜೊತೆ ಗುಂಟೂರಿನ ಮಣಿಕಂಠ (ಐಪಿಎಸ್) ಸಪ್ತಪದಿ ತುಳಿದರು.
ಈ ಸರಳ ಕಲ್ಯಾಣೋತ್ಸವದಲ್ಲಿ ಜಿಲ್ಲಾ ಎಸ್ಪಿ ಸತ್ಯ ಎಸುಬಾಬು, ಪುಟ್ಟಪರ್ತಿಯ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ರತ್ನಾಕರ್ ಸೇರಿದಂತೆ 40 ಜನರು ಭಾಗಿಯಾಗಿದ್ದರು.