ETV Bharat / bharat

ಲಸಿಕಾ ಸಂಶೋಧನೆಯೇ ಕೊರೊನಾ ನಿಗ್ರಹಕ್ಕೆ ಅತ್ಯುತ್ತಮ ಪರಿಹಾರ:  ಡಾ. ಸುಜಿತ್ ಕುಮಾರ್ - ಡಾ. ಸುಜಿತ್ ಕುಮಾರ್ ಭಟ್ಟಾಚಾರ್ಯ

ಪ್ರಖ್ಯಾತ ವೈದ್ಯ, ರೋಗನಿರೋಧಕ ಶಾಸ್ತ್ರ (ಇಮ್ಯೂನಾಲಜಿ) ಹಾಗೂ ಮೈಕ್ರೋಬಯೋಲಜಿ ತಜ್ಞ ಡಾ. ಸುಜಿತ್ ಕುಮಾರ್ ತಜ್ಞ ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್)ಯ ಹೆಚ್ಚುವರಿ ಮಹಾ ನಿರ್ದೇಶಕರಾಗಿ, ರಾಷ್ಟ್ರೀಯ ಕಾಲರ ಹಾಗೂ ಆಹಾರ ಸಂಬಂಧಿ ರೋಗಗಳ ಸಂಸ್ಥೆ (ಎನ್‍ಐಸಿಇಡಿ)ಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಎಚ್‍ಐವಿ/ ಏಡ್ಸ್, ಕಾಲಾ-ಅಝರ್, ಹಾಗೂ ಸಾಂಕ್ರಾಮಿಕ ರೋಗಗಳ ತಜ್ಞರಾಗಿರುವ ಇವರು, ನ್ಯಾಷನಲ್ ಅಕಾಡಮಿ ಆಫ್ ಸೈನ್ಸಸ್ (ಭಾರತ)ನ ಫೆಲಫ ಆಗಿ ಕೂಡಾ ಸೇವೆ ಸಲ್ಲಿಸಿದ್ದಾರೆ. ಈಟಿವಿ ಭಾರತದ ಅವರೊಂದಿಗೆ ನಡೆಸಿದ ಸಂದರ್ಶನದಲ್ಲಿ ಅವರು ಕೋವಿಡ್-19 ಸಾಂಕ್ರಾಮಿಕ ರೋಗ ಹಾಗೂ ಭಾರತದ ಮೇಲೆ ಅದರ ಪರಿಣಾಮದ ಕುರಿತು ಚರ್ಚಿಸಿದ್ದಾರೆ. ಈ ಸಂದರ್ಶನದ ವರದಿ ಇಲ್ಲಿದೆ.

vaccine
ಲಸಿಕೆ
author img

By

Published : May 4, 2020, 1:20 PM IST

ಪ್ರಶ್ನೆ: ಆಕ್ಸ್​ಫರ್ಡ್ ವಿಶ್ವವಿದ್ಯಾನಿಲಯದ ತಜ್ಞರು ಕೊರೊನಾ ವೈರಸ್‍ಗೆ ಹೊಸ ಲಸಿಕೆ ಕಂಡು ಹುಡುಕುವ ಪ್ರಯತ್ನದಲ್ಲಿದ್ದಾರೆ. ಇದು ಯಶಸ್ವಿಯಾದರೆ, ಇದು ಈ ಸಾಂಕ್ರಾಮಿಕ ರೋಗದಿಂದ ನಮಗೆ ರಕ್ಷಣೆ ಕೊಡುತ್ತದೆ. ಎಸ್‍ಎಆರ್‍ಎಸ್-ಸಿಒವಿ-2 ನ ಜೀವಾಣು ಅನುಕ್ರಮ ಈಗಾಗಲೇ ನಮಗೆ ದೊರೆತಿದೆ ಎಂದು ತಿಳಿಸಿದ್ದಾರೆ ಹಾಗೂ ಡಿಎನ್‍ಎ ತಂತ್ರಜ್ಞಾನವನ್ನು ಪ್ರತಿಜನಕದ ಉತ್ಪಾದನೆಗೆ ಬಳಸುತ್ತಿರುವುದಾಗಿ ತಿಳಿಸಿದ್ದಾರೆ. ಇದು ನಿಮಗೆ ಭರವಸೆದಾಯಕ ಎಂದು ಅನಿಸುತ್ತಿದೆಯೆ?

ಉತ್ತರ: ಹೌದು. ಆಕ್ಸ್​ಫರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು, ಕೋವಿಡ್ 19ಕ್ಕೆ ಲಸಿಕೆ ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೆ ಅವರು ಇಬ್ಬರು ಆರೋಗ್ಯಶಾಲಿ ವ್ಯಕ್ತಿಗಳಿಗೆ ಈ ಲಸಿಕೆ ಪ್ರಯೋಗ ಮಾಡಿದ್ದು, ಅವರ ದೇಹದ ಪ್ರತಿಕ್ರಿಯೆಗೆ ಕಾಯುತ್ತಿದ್ದಾರೆ. ಇದು ಈ ಲಸಿಕೆಯ ಮೊದಲ ಹಂತ. ಇಲ್ಲಿ ಸುರಕ್ಷತೆ ಹಾಗೂ ಲಸಿಕೆಯ ಕಾರ್ಯಕ್ಷಮತೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ದೊಡ್ಡ ಪ್ರಮಾಣದ ಸ್ವಯಂ ಸೇವಕರು ಮುಂದಿನ ಹಂತದ ಕ್ಲಿನಿಕಲ್ ಟ್ರಯಲ್​ಗಳಿಗೆ ಸಿದ್ಧರಿದ್ದಾರೆ. ಈ ಟ್ರಯಲ್‍ನ ನಿರ್ವಾಹಕರು ಅಥವಾ ಪ್ರಧಾನ ತಜ್ಞರು ಈ ಲಸಿಕೆ ಯಶಸ್ವಿಯಾಗುವ ಶೇ 80ರಷ್ಟು ಆಶಾಭಾವನೆ ಹೊಂದಿದ್ದಾರೆ. ಒಮ್ಮೆ ಈ ಕ್ಲಿನಿಕಲ್ ಟ್ರಯಲ್ಸ್ ಯಶಸ್ವಿಯಾದ ಕೂಡಲೇ, ಅದನ್ನು ದೊಡ್ಡ ಮಟ್ಟದಲ್ಲಿ ತಯಾರು ಮಾಡಬೇಕಿದೆ. ಈ ಕ್ಲಿನಿಕಲ್ ಟ್ರಯಲ್ಸ್​ಗೆ ಭಾರತ ಒಂದು ಭಾಗಿದಾರ ರಾಷ್ಟ್ರ. ಈ ಲಸಿಕೆ ಯಶಸ್ವಿಯಾದ ಬಳಿಕ ಮೊದಲಿಗೆ ಬ್ರಿಟನ್‍ನ ನಾಗರಿಕರಿಗೆ ನೀಡಲಾಗುತ್ತದೆ. ಬಳಿಕ ಉಳಿದ ರಾಷ್ಟ್ರಗಳಿಗೆ ನೀಡಲಾಗುತ್ತದೆ. ಇದಕ್ಕಿಂತ ಮೊದಲು ಖಚಿತ ಫಲಿತಾಂಶಕ್ಕೆ ನಾವು ಕಾಯಬೇಕಿದೆ.

ಪ್ರಶ್ನೆ: ಭಾರತದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು 4.5 ಪ್ರತಿಶತದಷ್ಟು ಹಾಗೂ ಇದರ ಹೆಚ್ಚಳವಾಗುವ ರೇಖೆಯು ಕಡಿಮೆಯಾಗುತ್ತಿದೆ ಎಂದು ಐಸಿಎಂಆರ್ ಅಭಿಪ್ರಾಯಪಟ್ಟಿದೆ. ಇದನ್ನು ನೀವು ಒಪ್ಪುವಿರಾ?

ಉತ್ತರ: ಹೌದು. ಈ ವಾದವನ್ನು ಒಪ್ಪದೇ ಇರಲು ಕಾರಣವಿಲ್ಲ. ಆದರೆ, ನಾವು ಗಮನಿಸಬೇಕಾದ ಅಂಶವೆಂದರೆ, ಈ ಮಾದರಿ ಗಾತ್ರ ಎಲ್ಲವನ್ನೂ ಪ್ರತಿನಿಧಿಸುತ್ತದೆಯೆ ಎಂಬುದನ್ನು ತಿಳಿದುಕೊಳ್ಳಬೇಕು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ನಾವು ಒಂದು ಉಪಸಂಹಾರಕ್ಕೆ ಬರಬಹುದು. ಊಹಾತ್ಮಕವಾಗಿ ಏನೂ ಹೇಳಲು ಸಾಧ್ಯವಿಲ್ಲ.

ಪ್ರಶ್ನೆ: ಹೆಚ್ಚಿನ ಸಂಖ್ಯೆಯ ಪರೀಕ್ಷೆಗಳನ್ನು ದೇಶಾದ್ಯಂತ ಮಾಡಬೇಕಿತ್ತು ಎಂದು ನಿಮಗೆ ಅನ್ನಿಸುತ್ತದೆಯೆ? ಅದರಲ್ಲೂ ಮುಖ್ಯವಾಗಿ ಹಳ್ಳಿಗಳಲ್ಲಿ. ಏಕೆಂದರೆ, ಹಳ್ಳಿಗಳಲ್ಲಿ ಈ ಪರೀಕ್ಷೆಯ ಪ್ರಮಾಣ ಹೆಚ್ಚು ನಡೆದಿಲ್ಲ. ಹಾಗೂ ಇದರಿಂದ ನಮಗೆ ನೈಜ ಚಿತ್ರಣ ದೊರಕುತ್ತಿಲ್ಲವೆ?

ಉತ್ತರ: ಹೌದು; ಇದು ಸರಿ. ಪರೀಕ್ಷಾ ಕಿಟ್‍ಗಳ ಲಭ್ಯತೆ, ಜನಸಂಖ್ಯೆಯ ದೊಡ್ಡ ಪ್ರಮಾಣಕ್ಕೆ ಅದರ ಲಭ್ಯತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ, ಇಂತಹ ಅಂಶಗಳನ್ನು ನಾವು ಗಣನೆಗೆ ತೆಗೆದುಕೊಳ್ಳಬೇಕಿದೆ. ಹೆಚ್ಚಿನ ಸಂಖ್ಯೆಯ ಪರೀಕ್ಷೆಗಳು ನಡೆಯಬೇಕು ಅನ್ನುವುದರಲ್ಲಿ ಸಂಶಯವಿಲ್ಲ. ಈ ಪರೀಕ್ಷೆಗಳನ್ನು ಆಧರಿಸಿದ ದತ್ತಾಂಶ ನಮಗೆ ನಿಖರ ಸ್ಥಿತಿಯನ್ನು ತಿಳಿಸುತ್ತವೆ.

ಪ್ರಶ್ನೆ: ಚೀನಾದಿಂದ ಆಮದು ಮಾಡಿಕೊಳ್ಳಲಾದ ಶೀಘ್ರಗತಿಯ ಪ್ರತಿಕಾಯ (ಆಂಟಿ ಬಾಡಿ) ಆಧರಿತ ರಕ್ತ ಪರೀಕ್ಷಾ ಕಿಟ್‍ಗಳು ದೋಷಪೂರಿತವಾಗಿದ್ದವು ಹಾಗೂ ಅವುಗಳನ್ನು ಐಸಿಎಂಆರ್ ತಿರಸ್ಕರಿಸಿದೆ ಎಂಬ ವರದಿಗಳಿವೆ. ಸದ್ಯ ಚಾಲ್ತಿಯಲ್ಲಿರುವ ಆರ್​ಟಿ-ಪಿಸಿಆರ್ ಪರೀಕ್ಷೆಯಿಂದ ಫಲಿತಾಂಶ ಪಡೆಯಲು ದೀರ್ಘ ಸಮಯ ಬೇಕಿದೆ. ಈ ಹಿನ್ನೆಲೆಯಲ್ಲಿ ರೋಗಿಗಳ ಮಾದರಿ ಪರೀಕ್ಷೆಗೆ ಮುಂದಿರುವ ಆಯ್ಕೆಗಳೇನು?

ಉತ್ತರ: ನೋಡಿ, ಪರೀಕ್ಷೆಯೊಂದೇ ಸಂಪರ್ಕ ಪತ್ತೆ ಹಾಗೂ ಈ ರೋಗ ಹರಡುವಿಕೆಯನ್ನು ಕಡಿಮೆ ಮಾಡಲು ಇರುವ ಏಕೈಕ ಮಾರ್ಗ. ಈಗ ಹೊಸ ಮಾರ್ಗ ಹುಡುಕುವ ಪ್ರಶ್ನೆ ಇದಲ್ಲ. ಬದಲಿಗೆ ಈ ಸಮಸ್ಯೆಗೆ ಪರಿಹಾರ ಕಂಡು ಹುಡುಕಲು ನಾವು ಪ್ರಯತ್ನಿಸಬೇಕಿದೆ. ಇತ್ತೀಚಿನ ಬೆಳವಣಿಗೆಯಾದ ಐಐಟಿ, ದೆಹಲಿಯ ತಜ್ಞರು, ಇಂತಹ ಶೀಘ್ರ ಪರೀಕ್ಷಾ ಕಿಟ್‍ಗಳನ್ನು ದೇಶಿಯವಾಗಿ ಉತ್ಪಾದಿಸಲು ಮುಂದಾಗಿರುವುದು ಆಶಾದಾಯಕ ಸಂಗತಿ. ಇದರ ಜತೆಗೆ, ಇಂತಹ ಹಲವಾರು, ಎಲ್ಲರಿಗೂ ಸಿಗಬಹುದಾದ ಟೆಸ್ಟಿಂಗ್ ಕಿಟ್‍ಗಳು ಮಾರುಕಟ್ಟೆಗೆ ಲಗ್ಗೆ ಇಡಬಹುದು ಎಂದು ನಾನು ಭಾವಿಸುತ್ತೇನೆ. ಈ ಟೆಸ್ಟಿಂಗ್ ಕಿಟ್‍ಗಳ ಬಗ್ಗೆ ವಿಶ್ವಾದ್ಯಂತ ಸಂಶೋಧನೆಗಳು ದೊಡ್ಡ ಮಟ್ಟದಲ್ಲಿ ಸಾಗುತ್ತಿದ್ದು, ಅತಿ ಶೀಘ್ರದಲ್ಲಿ ಇಂತಹ ಕಿಟ್‍ಗಳು ನಮ್ಮ ಮಾರುಕಟ್ಟೆಯಲ್ಲಿ ದೊರೆಯಬಹುದು ಎಂದು ನಾನು ಭಾವಿಸುತ್ತೇನೆ.

ಪ್ರಶ್ನೆ: ಈ ಕೊರೊನಾ ವೈರಸ್ ಹಬ್ಬುವಿಕೆ ತಡೆಗಟ್ಟಲು ಐಸಿಎಂಆರ್ ಹಾಗೂ ಇತರ ಸರಕಾರಿ ಇಲಾಖೆಗಳಿಗೆ ನಿಮ್ಮ ಸಲಹೆ ಏನು?

ಉತ್ತರ: ಐಸಿಎಂಆರ್ ಕೋವಿಡ್-19ರ ವಿರುದ್ಧದ ಭಾರತದ ಹೋರಾಟದಲ್ಲಿ ಇಂಜಿನ್‍ನ ಪಾತ್ರವಹಿಸುತ್ತಿದೆ. ಈ ನಿರ್ಣಾಯಕ ಘಟ್ಟದಲ್ಲಿ ಐಸಿಎಂಆರ್​ಗೆ ನನ್ನ ಒಂದೆರಡು ಸಲಹೆಗಳಿವೆ. ಮೊದಲನೆಯದಾಗಿ ನಿಖರ ಟೆಸ್ಟಿಂಗ್ ಕಿಟ್ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು. ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸಬೇಕು ಹಾಗೂ ನಿಶ್ಚಿತ ಚಿಕಿತ್ಸಾ ಪ್ರೊಟೊಕಾಲ್ ಅಭಿವೃದ್ಧಿಪಡಿಸಬೇಕು. ನಾವು ಈ ಹಂತದಲ್ಲಿ ದಾರಿ ತಪ್ಪಬಾರದು. ಐಸಿಎಂಆರ್​ನ ಹೊರಗಿರುವ ತಜ್ಞರ ಜತೆಗೆ ನಿರಂತರ ಸಂಪರ್ಕ, ಸಲಹೆ, ಚರ್ಚೆ ನಡೆಸುತ್ತಿರಬೇಕು. ಏಕೆಂದರೆ ಇದು ಅತ್ಯಂತ ಹೆಚ್ಚಿನ ಮಾಹಿತಿ ವಿನಿಮಯಕ್ಕೆ ಅವಕಾಶ ಒದಗಿಸುತ್ತದೆ. ದೇಶಿಯವಾಗಿ ಲಸಿಕೆ ಅಭಿವೃದ್ಧಿಗೆ ಪ್ರಯತ್ನ ನಡೆಸಬೇಕು. ಇಂತಹ ವಿಷಯಗಳ ಬಗ್ಗೆ ನಿರಂತರ ಸಂಶೋಧನೆ ನಡೆಯಲು ಅಗತ್ಯವಾದ ಹಣಕಾಸಿನ ನೆರವು ನೀಡುತ್ತಿರಬೇಕು. ಕೋವಿಡ್-19 ನಿರ್ವಹಿಸಲು ಹಾಗೂ ಚಿಕಿತ್ಸೆಯನ್ನು ಬರೀ ಘೋಷಣೆಗಳಿಂದ ನಡೆಸಲು ಸಾಧ್ಯವಿಲ್ಲ. ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಎಲ್ಲ ಮೂಲೆಗಳನ್ನು ತಲುಪಲು, ಎಲ್ಲರಿಗೂ ಅಗತ್ಯವಾದ ತರಬೇತಿಯ ಮಾದರಿ ಅಭಿವೃದ್ಧಿ ಪಡಿಸಬೇಕು. ಏಕೆಂದರೆ, ಇದರಿಂದ ಮಾತ್ರ ಜನಸಾಮಾನ್ಯರು ಲಾಭ ಪಡೆಯಲು ಸಾಧ್ಯವಿದೆ. ಒಬ್ಬ ಸಂಶೋಧಕನಾಗಿ ಹೇಳುವುದಾದರೆ, ಐಜೆಎಂಆರ್​ನಲ್ಲಿ ಪ್ರಕಟವಾಗುವ ಅತ್ಯಂತ ಶ್ರೇಷ್ಠ ದರ್ಜೆಯ ಸಂಶೋಧನಾ ಲೇಖನಗಳನ್ನು ಮಾಹಿತಿ ಹಂಚಿಕೊಳ್ಳುವಿಕೆಗೆ ಪ್ರಕಟಿಸಬೇಕು. ಅಂತಿಮವಾಗಿ ಕೋವಿಡ್-19 ಬಗೆಗಿನ ಎಲ್ಲಾ ಸಂಶೋಧನೆಗಳನ್ನು ಕೋವಿಡ್-19 ಕಾರ್ಯಪಡೆ ಪ್ರೋತ್ಸಾಹಿಸಿ, ಮಾರ್ಗದರ್ಶನ ನೀಡಬೇಕು.

ಪ್ರಶ್ನೆ: ಬಿಸಿಜಿ ಪರೀಕ್ಷೆ ಹಾಗೂ ಮಲೇರಿಯಾ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್, ಕೊರೊನಾ ವೈರಸ್ ವಿರುದ್ಧದ ಬಳಕೆಯಲ್ಲಿ ಹೆಚ್ಚಿನ ಫಲಿತಾಂಶ ತೋರಿಸಿಲ್ಲ. ನಿಮ್ಮ ಪ್ರಕಾರ ಇದಕ್ಕೆ ಕಾರಣ ಏನು?

ಉತ್ತರ: ಬಿಸಿಜಿ ಕೆಲವು ಪ್ರತಿಜನಕಗಳ ವಿರುದ್ಧ ತಡವಾಗಿ ಪ್ರತಿಕ್ರಿಯೆ ನೀಡುತ್ತದೆ. ನನಗೆ ಇದು ಕೋವಿಡ್-19ರ ವಿರುದ್ಧ ಯಾವುದೇ ರೀತಿಯಲ್ಲಿ ಲಾಭದಾಯಕ ಎಂದು ಅನ್ನಿಸುವುದಿಲ್ಲ. ಹೈಡ್ರಾಕ್ಸಿಕ್ಲೋರೋಕ್ವಿನ್ ಕೂಡಾ ಹಲವು ಅಡ್ಡ ಪರಿಣಾಮಗಳನ್ನು ಹೊಂದಿದೆ. ಇದು ಕೋವಿಡ್-19ಕ್ಕೆ ಪರಿಣಾಮಕಾರಿಯಲ್ಲ ಎಂದು ಇತ್ತೀಚಿನ ಸಂಶೋಧನೆಗಳು ಹೇಳುತ್ತಿವೆ. ಇದಕ್ಕೆ ಪರ್ಯಾಯವಾದ ಕಾರ್ಯತಂತ್ರಗಳನ್ನು ನಾವು ಹುಡುಕಬೇಕಿದೆ. ಲಸಿಕೆ ಸಂಶೋಧನೆಯೇ ಇದಕ್ಕೆ ಶಾಶ್ವತ ಪರಿಹಾರ.

ಪ್ರಶ್ನೆ: ಲಾಕ್‍ಡೌನ್ ಮತ್ತೆ ಮತ್ತೆ ವಿಸ್ತರಣೆಗೊಳ್ಳುತ್ತಿದೆ. ಒಮ್ಮೆ ಲಾಕ್‍ಡೌನ್ ಮುಗಿದ ಬಳಿಕ, ಹಿರಿಯ ನಾಗರಿಕರು ಮಾತ್ರ ದುರ್ಬಲ ಗುಂಪಾಗಿ ಉಳಿದು ಕೋವಿಡ್-19ರ ಅಪಾಯಕ್ಕೆ ಸಿಲುಕುತ್ತಾರೆಯೆ ಅಥವಾ ಎಲ್ಲರೂ ಅಪಾಯ ಎದುರಿಸುತ್ತಾರೆಯೆ?

ಉತ್ತರ: ಎಲ್ಲರೂ ಸಂಭಾವ್ಯ ಅಪಾಯ ಎದುರಿಸುವವರೇ ಆಗಿರುತ್ತಾರೆ. ಏಕೆಂದರೆ, ಹಲವಾರು ಮಂದಿ ಮತ್ತೆ ಮತ್ತೆ ಕೋವಿಡ್-19 ಸೋಂಕಿಗೆ ತುತ್ತಾಗುತ್ತಿರುವುದು ವರದಿಯಾಗುತ್ತಿದೆ. ಆರ್ಥಿಕ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ಹಂತ ಹಂತವಾಗಿ ಈ ಲಾಕ್‍ಡೌನ್ ಅನ್ನು ಹಿಂತೆಗೆಯಲೇ ಬೇಕಾಗುತ್ತದೆ. ಯುರೋಪ್ ಹಾಗೂ ಇತರ ದೇಶಗಳಲ್ಲಿ ಇದೇ ಮಾದರಿ ಅನುಸರಿಸಲಾಗುತ್ತಿದೆ. ಏಕಾಏಕಿ ಲಾಕ್‍ಡೌನ್ ಹಿಂತೆಗೆಯುವುದು ಅಪಾಯಕಾರಿ. ಏಕೆಂದರೆ ನಾವು ದೊಡ್ಡ ಪ್ರಮಾಣದ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.