ETV Bharat / bharat

ಇಂದು ಅಂತಾರಾಷ್ಟ್ರೀಯ ಆಹಾರ ನಷ್ಟದ ಅರಿವು ದಿನ: ಏನಿದರ ವಿಶೇಷ

ಪ್ರಪಂಚದಾದ್ಯಂತದ ಒಟ್ಟು ಆಹಾರದಲ್ಲಿ ಶೇಕಡಾ 50ರಷ್ಟು ವ್ಯರ್ಥವಾಗುತ್ತಿದೆ. ಪ್ರಸ್ತುತ ವ್ಯರ್ಥವಾದ ಆಹಾರದ ನಾಲ್ಕನೇ ಒಂದು ಭಾಗವನ್ನು ನಾವು ಉಳಿಸಬಹುದಾದರೆ, 870 ಮಿಲಿಯನ್ ಹಸಿದ ಜನರಿಗೆ ಆಹಾರವನ್ನು ನೀಡಬಹುದು. ಭಾರತದಲ್ಲಿ ಉತ್ಪಾದನೆಯಾಗುವ ಆಹಾರದ ಶೇಕಡಾ 40ರಷ್ಟು ವ್ಯರ್ಥವಾಗುತ್ತಿದೆ

International Day of Awareness of food loss and waste

author img

By

Published : Sep 29, 2020, 7:03 AM IST

ಹೈದರಾಬಾದ್: ಜಾಗತಿಕವಾಗಿ ಆಹಾರ ತ್ಯಾಜ್ಯವು ಪ್ರಮುಖ ಸಮಸ್ಯೆಯಾಗಿದೆ. ಪ್ರಪಂಚದಾದ್ಯಂತ ಒಟ್ಟು ಆಹಾರದಲ್ಲಿ ಶೇಕಡಾ 50ರಷ್ಟು ವ್ಯರ್ಥವಾಗುತ್ತಿದೆ ಮತ್ತು ಅಗತ್ಯವಿರುವವರನ್ನು ತಲುಪುವುದಿಲ್ಲ. ಮಾನವ ಬಳಕೆಗಾಗಿ ಸುಮಾರು ಮೂರನೇ ಒಂದು ಭಾಗದಷ್ಟು ಆಹಾರವು ಜಾಗತಿಕವಾಗಿ ಕಳೆದು ಹೋಗುತ್ತದೆ ಅಥವಾ ವ್ಯರ್ಥವಾಗುತ್ತದೆ.

ಪ್ರಸ್ತುತ ವ್ಯರ್ಥವಾದ ಆಹಾರದ ನಾಲ್ಕನೇ ಒಂದು ಭಾಗವನ್ನು ನಾವು ಉಳಿಸಬಹುದಾದರೆ, 870 ಮಿಲಿಯನ್ ಹಸಿದ ಜನರಿಗೆ ಆಹಾರವನ್ನು ನೀಡಬಹುದು.

ಯುರೋಪ್ ಮತ್ತು ಉತ್ತರ ಅಮೆರಿಕದಲ್ಲಿ ವರ್ಷಕ್ಕೆ ಒಬ್ಬ ವ್ಯಕ್ತಿಗೆ ಸರಾಸರಿ 95-115 ಕೆ.ಜಿ ತ್ಯಾಜ್ಯ ವ್ಯರ್ಥವಾಗುತ್ತಿದೆ. ವ್ಯರ್ಥವಾದ ಆಹಾರವನ್ನು ಉತ್ಪಾದಿಸಲು ಬಳಸುವ ನೀರಿನ ಪ್ರಮಾಣವು ಜಿನೀವಾ ಸರೋವರದ ಮೂರು ಪಟ್ಟು ಹೆಚ್ಚಾಗಿದೆ.

ಭಾರತದಲ್ಲಿ ಆಹಾರ ತ್ಯಾಜ್ಯ:

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಪ್ರಕಾರ, ಭಾರತದಲ್ಲಿ ಉತ್ಪಾದನೆಯಾಗುವ ಆಹಾರದ ಶೇಕಡಾ 40ರಷ್ಟು ವ್ಯರ್ಥವಾಗುತ್ತಿದೆ ಮತ್ತು ವಾರ್ಷಿಕವಾಗಿ ಸುಮಾರು 21 ದಶಲಕ್ಷ ಟನ್ ಗೋಧಿ ವ್ಯರ್ಥವಾಗುತ್ತಿದೆ.

ಇಡೀ ಯುನೈಟೆಡ್ ಕಿಂಗ್‌ಡಮ್ ಸೇವಿಸುವಷ್ಟು ಆಹಾರವನ್ನು ಭಾರತ ವ್ಯರ್ಥ ಮಾಡುತ್ತದೆ. ಆಹಾರ ವ್ಯರ್ಥವು ಭಾರತದಲ್ಲಿ ಆತಂಕಕಾರಿ ವಿಷಯವಾಗಿದೆ.

ಭಾರತದ ಶ್ರೇಣಿ: ಜಾಗತಿಕ ಹಸಿವು ಸೂಚ್ಯಂಕದಲ್ಲಿ 119 ದೇಶಗಳ ಪೈಕಿ ಭಾರತ 103ನೇ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ. ವೆಲ್ತುಂಗರ್‌ಹಿಲ್ಫ್ ಮತ್ತು ಕನ್ಸರ್ನ್ ವರ್ಲ್ಡ್‌ವೈಡ್ ಸಿದ್ಧಪಡಿಸಿದ ವರದಿಯ ಪ್ರಕಾರ, ಗಂಭೀರ ಮಟ್ಟದ ಹಸಿವು ಹೊಂದಿರುವ 45 ದೇಶಗಳ ಪಟ್ಟಿಯಲ್ಲಿಯೂ ಭಾರತ ಸೇರಿದೆ.

ಆಹಾರ ತ್ಯಾಜ್ಯ ಕಡಿಮೆ ಮಾಡಲು ಸಲಹೆಗಳು:

  • ತಯಾರಾದ / ತಿನ್ನಲು ಸಿದ್ಧವಾಗಿರುವ ಆಹಾರ ತ್ಯಾಜ್ಯವನ್ನು ಪ್ರತ್ಯೇಕ ಕಾಂಪೋಸ್ಟೇಬಲ್ ತೊಟ್ಟಿಯಲ್ಲಿ ಇರಿಸಿ ಮತ್ತು ಬಿನ್‌ನಲ್ಲಿ ಹೆಚ್ಚಾಗಿ ಏನು ಸಿಗುತ್ತದೆ ಎಂಬುದರ ಕುರಿತು ಟಿಪ್ಪಣಿ ಮಾಡಿ.
  • ಅತಿಯಾಗಿ ಖರೀದಿ ಮಾಡಬೇಡಿ
  • ಬೇಕಾದುದನ್ನು ಮಾತ್ರ ಖರೀದಿಸಿದರೆ, ಕಡಿಮೆ ಆಹಾರ ವ್ಯರ್ಥವಾಗುತ್ತದೆ
  • ಆಹಾರದ ಎಲ್ಲಾ ಭಾಗಗಳನ್ನು ತಿನ್ನಿ.
  • ಹಲವರು ಸಿಪ್ಪೆಗಳು, ಎಲೆಗಳು ಮತ್ತು ಕಾಂಡಗಳನ್ನು ಖಾದ್ಯವಾಗಿ ಎಸೆಯುತ್ತಾರೆ, ಆದರೆ ಹಣ್ಣು ಅಥವಾ ತರಕಾರಿಗಳ ಹೆಚ್ಚಿನ ಪೋಷಕಾಂಶ ಆ ಭಾಗದಲ್ಲಿಯೇ ಇರುತ್ತವೆ.
  • ಆಹಾರವನ್ನು ಸರಿಯಾಗಿ ಸಂಗ್ರಹಿಸಿ. ಆಹಾರವನ್ನು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಸಂಗ್ರಹಿಸುವುದರಿಂದ ಅದು ಹೆಚ್ಚು ಕಾಲ ಉಳಿಯುತ್ತದೆ.

ಅತ್ಯುತ್ತಮ ಆಹಾರ ಸುಸ್ಥಿರ ದೇಶಗಳು:

  • ಫ್ರಾನ್ಸ್
  • ನೆದರ್ಲ್ಯಾಂಡ್ಸ್
  • ಕೆನಡಾ
  • ಫಿನ್ಲ್ಯಾಂಡ್
  • ಜಪಾನ್
  • ಜೆಕ್ ಗಣರಾಜ್ಯ
  • ಡೆನ್ಮಾರ್ಕ್
  • ಸ್ವೀಡನ್
  • ಆಸ್ಟ್ರಿಯಾ
  • ಹಂಗೇರಿ

ಆಹಾರ ತ್ಯಾಜ್ಯ ಕಡಿತ ಏಕೆ ಮುಖ್ಯ?

ಇಂದು ಪ್ರಪಂಚದಲ್ಲಿ ಉತ್ಪತ್ತಿಯಾಗುವ ಎಲ್ಲ ಆಹಾರದ ಮೂರನೇ ಒಂದು ಭಾಗದಷ್ಟು ವ್ಯರ್ಥವಾಗುತ್ತಿದ್ದು, ಅದು ಸುಮಾರು 1.8 ಶತಕೋಟಿ ಟನ್ ಹಣ್ಣುಗಳು, ತರಕಾರಿಗಳು, ಮಾಂಸ, ಡೈರಿ ಉತ್ಪನ್ನಗಳು, ಸೀ ಫುಡ್ ಮತ್ತು ಧಾನ್ಯಗಳನ್ನು ಹೊಂದಿದೆ.

ಅವುಗಳು ಜಮೀನಲ್ಲಿಯೇ ಉಳಿದು, ವಿತರಣೆಯ ಸಮಯದಲ್ಲಿ ಹಾಳಾಗಿ ಅಥವಾ ಹೋಟೆಲ್‌ಗಳು, ಕಿರಾಣಿ ಅಂಗಡಿಗಳು, ರೆಸ್ಟೋರೆಂಟ್‌ಗಳು, ಶಾಲೆಗಳು ಅಥವಾ ಮನೆಗಳಲ್ಲಿ ವ್ಯರ್ಥವಾಗುತ್ತವೆ.

ಆಹಾರ ನಷ್ಟ ಮತ್ತು ತ್ಯಾಜ್ಯ ಪರಿಸರ ಕಾಳಜಿಯಾಗಿದೆ. ಇಡೀ ಪ್ರಪಂಚದ ಒಟ್ಟು ಆಹಾರ ತ್ಯಾಜ್ಯ ಚೀನಾ ಮತ್ತು ಭಾರತದ ಮೇಲ್ಮೈ ವಿಸ್ತೀರ್ಣಕ್ಕಿಂತಲೂ ಅಧಿಕವಾಗಿದೆ. ಜಿನೀವಾ ಸರೋವರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.

ಆಹಾರ ತ್ಯಾಜ್ಯ ಅಥವಾ ವ್ಯರ್ಥವಾಗಿರುವ ಆಹಾರ ನೀರಿನ ಸಂಪನ್ಮೂಲಗಳು, ಪರಿಸರ ವ್ಯವಸ್ಥೆ ಮತ್ತು ಜೀವವೈವಿಧ್ಯತೆಯ ಮೇಲೆಯೂ ಪರಿಣಾಮ ಬೀರುತ್ತವೆ.

ನಾವು ಆಹಾರವನ್ನು ಉತ್ಪಾದಿಸುವ ಮತ್ತು ಸೇವಿಸುವ ವಿಧಾನವನ್ನು ಪುನರ್ ​ವಿಮರ್ಶಿಸಲು ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯ. ಆಹಾರ ನಷ್ಟ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡಲು ಆಹಾರ ಉತ್ಪಾದಕರು, ಆಹಾರ ಪೂರೈಕೆ ಸರಪಳಿ ಪಾಲುದಾರರು, ಆಹಾರ ಕೈಗಾರಿಕೆಗಳು, ಚಿಲ್ಲರೆ ವ್ಯಾಪಾರಿಗಳು ಮತ್ತು ಗ್ರಾಹಕರ ಕೊಡುಗೆ ಅತ್ಯಗತ್ಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.