ಹೈದರಾಬಾದ್: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮರೆಡ್ಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್‌ನನ್ನು ಅವರ ಸಹಚರರೊಂದಿಗೆ ಬಂಧಿಸಲಾಗಿದೆ.
ದೂರುದಾರರ ಬಳಿ ಇನ್ಸ್‌ಪೆಕ್ಟರ್ ಜಗದೀಶ್ ತಮ್ಮ ಸಹಚರ ಎಂ.ಸುಜಯ್ ಮೂಲಕ 5 ಲಕ್ಷ ರೂ. ಬೇಡಿಕೆ ಇಟ್ಟಿದ್ದರಂತೆ. ಬಂಧನದ ನಂತರ ಜಗದೀಶ್ ಮತ್ತು ಸುಜಯ್ ಅವರನ್ನು ಕರೀಂನಗರ ವಿಶೇಷ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸ್ಥಳಗಳಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.