ETV Bharat / bharat

ಭೂಕಂಪದಂತೆ ಮೂಲ ಸೌಕರ್ಯ ನಾಶವಾಗಿಲ್ಲ, ಕೋವಿಡ್ ಬಳಿಕ ಶೀಘ್ರ ಚೇತರಿಕೆ ಸಾಧ್ಯ: ಡಿ ಸುಬ್ಬರಾವ್

author img

By

Published : Apr 27, 2020, 11:35 AM IST

ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ದುವ್ವುರಿ ಸುಬ್ಬರಾವ್ ಅವರು ಈನಾಡುಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತಾ ಸದ್ಯ ನಾವು ಎದುರಿಸುತ್ತಿರುವ ಕೋವಿಡ್-19 ಬಿಕ್ಕಟ್ಟು ಆರ್ಥಿಕತೆಗೆ ಹೊರತಾದುದ್ದಾಗಿದ್ದು ಯಾವುದೇ ಭೌತಿಕ ಮೂಲ ಸೌಕರ್ಯಕ್ಕೆ ಧಕ್ಕೆಯನ್ನುಂಟು ಮಾಡಿಲ್ಲದಿರುವುದರಿಂದ ಬಹುಬೇಗನೇ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಚಂಡಮಾರುತ, ಭೂಕಂಪ ಇತ್ಯಾದಿಗಳು ಸಂಭವಿಸಿದಾಗ ದೇಶದ ಮೂಲ ಸೌಕರ್ಯಗಳೇ ನಾಶವಾಗುತ್ತವೆ. ಆದರೆ ಈಗ ಆ ರೀತಿಯೇನೂ ಆಗಿಲ್ಲ ಎಂದು ಹೇಳಿದ್ದಾರೆ.

D Subbarao with Eenadu
ಡಿ ಸುಬ್ಬರಾವ್

ಹೈದರಾಬಾದ್: ಜಾಗತಿಕ ಆರ್ಥಿಕತೆ ಸ್ಥಗಿತತೆಯಲ್ಲಿದೆ. ಉತ್ಪಾದನಾ ಚಟುವಟಿಕೆಗಳು ಹಾಗೂ ಸರ್ಕಾರಗಳ ಹಣಕಾಸು ವ್ಯವಸ್ಥೆಯ ಮೇಲೆ ಕೊವಿಡ್ -19 ಸಾಂಕ್ರಾಮಿಕ ರೋಗ ಎಷ್ಟರ ಮಟ್ಟಿಗೆ ಆಳವಾದ ಪರಿಣಾಮ ಬೀರಬಹುದು ಎಂಬ ಕುರಿತು ಸರಿಯಾದ ಅಂದಾಜು ಮಾಡಲು ಪ್ರಪಂಚದಾದ್ಯಂತ ನೀತಿ ನಿರೂಪಕರು ತಲೆಕೆಡಿಸಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ RBI ಮಾಜಿ ಗವರ್ನರ್ ದುವ್ವುರಿ ಸುಬ್ಬರಾವ್ ಅವರು ಈನಾಡು ವಿಶೇಷ ಪ್ರತಿನಿಧಿ ಎಂ.ಎಲ್.ನರಸಿಂಹ ರೆಡ್ಡಿ ಅವರೊಂದಿಗೆ ನೀಡಿದ ಸಂದರ್ಶನದಲ್ಲಿ ಕೋವಿಡ್-19 ಭಾರತದ ಆರ್ಥಿಕತೆಯ ಮೇಲೆ ಬೀರಲಿರುವ ಪರಿಣಾಮ, ಸರ್ಕಾರದ ಎದುರಿಗಿರುವ ಸವಾಲುಗಳು, ವಲಸೆ ಕಾರ್ಮಿಕರ ವಿಷಯ, ಹೆಲಿಕಾಪ್ಟರ್ ಮನಿಯ ಉಪಯುಕ್ತತೆ ಇತ್ಯಾದಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಸುಬ್ಬರಾವ್ ಅವರು RBIನ ಗವರ್ನರ್ ಆಗಿ 2008ರಲ್ಲಿ ಆಡಳಿತ ವಹಿಸಿಕೊಂಡರು. ಆಗ ಜಾಗತಿಕ ಹಣಕಾಸು ಬಿಕ್ಕಟ್ಟು ಇಡೀ ಜಗತ್ತನ್ನೇ ಕಂಗೆಡಿಸಿತ್ತು. ಅಂತಹ ಸಂದರ್ಭದಲ್ಲಿ ಭಾರತದ ಆರ್ಥಿಕತೆಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದ ಸಂಗತಿಯನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಅವರೊಂದಿಗಿನ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಜಾಗತಿಕ ಆರ್ಥಿಕತೆ ಮತ್ತು ನಿರ್ದಿಷ್ಟವಾಗಿ ಭಾರತದ ಆರ್ಥಿಕತೆಯ ಮೇಲೆ ಕೋವಿಡ್-19ರ ಪರಿಣಾಮ ಯಾವ ರೀತಿ ಉಂಟಾಗಲಿದೆ?

ಕೊರೊನಾ ವೈರಸ್ ಪಿಡುಗು ಇಡೀ ಪ್ರಪಂಚದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು IMF (ಅಂತರರಾಷ್ಟ್ರೀಯ ಹಣಕಾಸು ನಿಧಿ) ಎಚ್ಚರಿಸಿದೆ. ಪ್ರಸ್ತುತ ಬಿಕ್ಕಟ್ಟು 2008ರ ಜಾಗತಿಕ ಬಿಕ್ಕಟ್ಟಿಗಿಂತಲೂ ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದಾಗಿದೆ. ಕೋವಿಡ್-19 ಆರ್ಥಿಕತೆಗೆ ಹೊರಗಿನಿಂದ ಬಾಧಿಸಲಿರುವ ಅಪಾಯ. ಹಿಂದೆಲ್ಲಾ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಬೇಡಿಕೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು. ಈಗ ಬಡ್ಡಿ ದರವನ್ನು ಕಡಿತಗೊಳಿಸಿ ಹಣದ ಹರಿವನ್ನು ಹೆಚ್ಚಿಸಲು ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದರೂ ಜಾರಿಯಲ್ಲಿರುವ ಲಾಕ್‍ಡೌನ್‍ನಿಂದಾಗಿ ಆರ್ಥಿಕತೆ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಕೋವಿಡ್-19ಕ್ಕಿಂತಲೂ ಮುಂಚಿತವಾಗಿಯೇ ಭಾರತದ ಆರ್ಥಿಕತೆ ಕ್ಷೀಣಗೊಂಡಿತ್ತು. 2019-20ರ ಮೂರನೇ ತ್ರೈಮಾಸಿಕದಲ್ಲಿ ಶೇ.5 ರಷ್ಟು ದಾಖಲಾಗಿತ್ತು. ನಾಲ್ಕನೇ ತ್ರೈಮಾಸಿಕದಲ್ಲಿ ಇನ್ನೂ ಕಡಿಮೆಯಾಗುವುದೆಂದು ನಿರೀಕ್ಷಿಸಲಾಗಿತ್ತು. ಅಲ್ಲಿಂದ ಅದು ಇನ್ನೂ ಎಷ್ಟು ಕೆಟ್ಟ ಸ್ಥಿತಿ ತಲುಪಿರಬಹುದು?

2020ನೇ ಸಾಲಿನ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ದರ ಶೇಕಡಾ 4.2 ಇರಲಿದೆ ಎಂದು IMF ಅಂದಾಜಿಸಿತ್ತು. 2020-21ರ ಹಣಕಾಸು ವರ್ಷಕ್ಕೆ ಅದು ಶೇಕಡಾ 1.9 ರಷ್ಟಿರಲಿದೆ. ಮುಂದುವರೆದ ದೇಶಗಳ ಆರ್ಥಿಕತೆಯ ಸಂಭಾವ್ಯ ಕುಸಿತದ ದರಕ್ಕೆ ಹೋಲಿಸಿದರೆ ಭಾರತದಲ್ಲಿ ಆರ್ಥಿಕ ಕುಸಿತದ ಪ್ರಮಾಣ ಅಷ್ಟೇನೂ ಕೆಟ್ಟ ಸ್ಥಿತಿಯಾಗುವುದಿಲ್ಲ. ಆದರೆ ಅದರಲ್ಲಿ ಖುಷಿಪಡುವುದೇನೂ ಇಲ್ಲ. ಭಾರತದಲ್ಲಿ ತೀವ್ರ ಪ್ರಮಾಣದ ಬಡತನವಿದೆ. ಹೀಗಾಗಿ ಆರ್ಥಿಕ ಕುಸಿತದ ಪರಿಣಾಮವೂ ತೀವ್ರವಾಗಿರುತ್ತದೆ. ಆರ್ಥಿಕತೆಯನ್ನು ಕೆಳಕ್ಕೆ ಜಗ್ಗುತ್ತಿರುವ ಸಂಗತಿಗಳೆಂದರೆ ಸುಸ್ತಿ ಸಾಲಗಳು (NPA) ಮತ್ತು ಸಾಲಗಳು. ಇನ್ನೂ ಹೆಚ್ಚಿನ ಸಾಲವನ್ನು ನಾವು ಪಡೆದುಕೊಳ್ಳಲಾಗದ ಒಂದು ಬಿಕ್ಕಟ್ಟಿನ ಹಂತವನ್ನು ನಾವು ತಲುಪಿದ್ದೇವೆ.

ಕೊರೊನಾ ದೇಶದ ಭೌತಿಕ ಮೂಲಸೌಕರ್ಯಗಳನ್ನು ನಾಶ ಮಾಡಿಲ್ಲ ಎಂಬ ಸಂಗತಿಯನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಭೂಕಂಪವೋ, ಪ್ರವಾಹವೋ ಸಂಭವಿಸಿದಾಗ ಅದರಿಂದ ಹಾನಿಗೊಳಗಾಗುವ ಆಸ್ತಿಪಾಸ್ತಿಗಳನ್ನು ಪುನರ್ ನಿರ್ಮಿಸಲು ಸಾಕಷ್ಟು ಹಣವನ್ನು ವ್ಯಯಿಸಬೇಕಾಗುತ್ತದೆ. ಆದರೆ ಕೊರೊನಾ ವಿಷಯದಲ್ಲಿ ಪರಿಸ್ಥಿತಿ ಹಾಗಿಲ್ಲ. ಹೀಗಾಗಿ ಒಮ್ಮೆ ಕೋವಿಡ್-19 ಕಾಯಿಲೆ ಕಡಿಮೆಯಾಗುತ್ತಿದ್ದಂತೆ ನಾವು ಬಹುಬೇಗನೇ ಚೇತರಿಸಿಕೊಳ್ಳಲು ಸಾಧ್ಯವಿದೆ.

ಅನೇಕ ದೇಶಗಳು ಹಣಕಾಸು ಪ್ಯಾಕೇಜ್​​ಗಳನ್ನು ಘೋಷಿಸಿವೆ. ಭಾರತವೂ ಅದನ್ನೇ ಅನುಸರಿಸುತ್ತಿದೆ. ಇಂತಹ ಬೆಂಬಲ ಪ್ಯಾಕೇಜುಗಳು ಆರ್ಥಿಕತೆಗೆ ಎಷ್ಟರ ಮಟ್ಟಿಗೆ ಸಹಾಯಕ?

ಭಾರತದ ಶ್ರಮಶಕ್ತಿಯ ಶೇಕಡಾ 83 ರಷ್ಟಿರುವುದು ಅಸಂಘಟಿತ ವಲಯದ ಕಾರ್ಮಿಕರು. ಹಾಲಿ ಲಾಕ್ ಡೌನ್ ಅವರೆಲ್ಲರ ಬದುಕನ್ನು ಅಪಾಯಕ್ಕೆ ದೂಡಿದೆ. ಅವರಿಗೆ ಬೆಂಬಲ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕಳೆದ ತಿಂಗಳು ಕೇಂದ್ರ ಹಣಕಾಸು ಸಚಿವರು ಜಿಡಿಪಿಯ ಶೇಕಡಾ 0.8ರಷ್ಟು ಮೊತ್ತದ ಬೆಂಬಲ ಪ್ಯಾಕೇಜನ್ನು ಘೋಷಿಸಿದರು. ಆದರೆ ಇತರೆ ದೇಶಗಳು ನೀಡಿರುವ ಬೆಂಬಲ ಮೊತ್ತಕ್ಕೆ ಹೋಲಿಸಿದರೆ ಇದು ಬಹಳ ಸಣ್ಣ ಮೊತ್ತವಾಗುತ್ತದಲ್ಲದೇ ಭಾರತ ಗಂಭೀರ ಸ್ಥಿತಿಗೆ ಹೋಲಿಸಿದಾಗ ಇದು ಯಾವ ರೀತಿಯಿಂದಲೂ ಸಾಲುವುದಿಲ್ಲ.

ಸರ್ಕಾರದ ಬಳಿ ಸಾಕಷ್ಟು ಹಣವಿಲ್ಲ ಎಂಬುದನ್ನೂ ನಾವು ಅರ್ಥಮಾಡಿಕೊಳ್ಳಬೇಕು. ಹಣಕಾಸು ಕೊರತೆ ಈಗಾಗಲೇ ಹೆಚ್ಚಿನ ಮಟ್ಟದಲ್ಲಿದೆ. ಲಾಕ್ ಡೌನ್ ನಿಂದಾಗಿ ತೆರಿಗೆ ಮೂಲಕ ಬರುವ ಆದಾಯವೂ ಕುಸಿದಿದೆ. ಕೋವಿಡ್-19ಕ್ಕೆ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರ ಒಟ್ಟು ಹಣಕಾಸು ಕೊರತೆಯ ಪ್ರಮಾಣ ಜಿಡಿಪಿಯ ಶೇ.6.5ರಷ್ಟಿತ್ತು, ಅದೀಗ ಶೇ.10ನ್ನು ದಾಟಲಿದೆ. ಈಗ ಬೆಂಬಲ ಪ್ಯಾಕೇಜುಗಳಿಗಾಗಿ ಹೆಚ್ಚು ಹಣವನ್ನು ಸಾಲ ಮಾಡಿದರೆ ಅದು ಮತ್ತಷ್ಟು ಹೊರೆಯಾಗಲಿದೆ. ಕೇಂದ್ರವು ಜಿಡಿಪಿಯ ಶೇಕಡಾ 2 ರಿಂದ 2.5ರಷ್ಟನ್ನು ಕೊರೊನಾ ಪರಿಹಾರ ಕಾರ್ಯಗಳಿಗೆ ಖರ್ಚುಮಾಡಲು ತೀರ್ಮಾನಿಸಿದರೆ ಅದಕ್ಕೆ ಅನುಗುಣವಾಗಿ ಸಾಲ ಪಡೆಯಬೇಕಾಗುತ್ತದೆ; ಹಾಗೆ ಮಾಡುವುದು ಸಮಸ್ಯೆಗಳನ್ನು ತರುತ್ತದೆ.

ಸಾಲದ ಪ್ರಮಾಣ ಹೆಚ್ಚಾದರೆ ರೇಟಿಂಗ್ ಏಜೆನ್ಸಿಗಳು ನಮ್ಮ ಕ್ರೆಡಿಟ್ ರೇಟಿಂಗನ್ನು ಕಡಿಮೆ ಮಾಡಿ ತೋರಿಸಬಹುದು. ವಿದೇಶಿ ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಹಿಂಪಡೆಯಲಿದ್ದಾರೆ. ಇದರಿಂದ ವಿದೇಶಿ ವಿನಿಮಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸಬಹುದು. ಹಣದುಬ್ಬರವೂ ಹೆಚ್ಚಾಗಬಹುದು. ಕೇಂದ್ರವು ಒಂದು ದೋಷರಹಿತ ಯೋಜನೆಯನ್ನು ರೂಪಿಸಬೇಕಿದೆ. ಹಾಲಿ ಬಿಕ್ಕಟ್ಟನ್ನು ನಿಭಾಯಿಸಲು ಪಡೆಯಲಾಗುವ ಸಾಲವನ್ನು ಮುಂದಿನ ಎರಡು ಮೂರು ವರ್ಷಗಳಲ್ಲೇ ತೀರಿಸುವ ಖಾತ್ರಿ ಇರಬೇಕು; ಆಗ ಮಾತ್ರ ಮಾರುಕಟ್ಟೆಯ ವಿಶ‍್ವಾಸವನ್ನು ಗೆಲ್ಲಲು ಸಾಧ್ಯವಾಗುತ್ತದೆ.

ಲಾಕ್ ಡೌನ್ ನಂತರದಲ್ಲಿ ನೀತಿನಿರೂಪಣೆಯಲ್ಲಿ ಆದ್ಯತೆ ಏನಾಗಿರಬೇಕು?

RBI ಸಾಲ ಮರುಪಾವತಿಗೆ ತಾತ್ಕಾಲಿಕ ವಿನಾಯಿತಿ ನೀಡಿಬಿಟ್ಟರೆ, ಹಣಕಾಸಿನ ಹರಿವು ಹೆಚ್ಚಿಸಿದರೆ ಇಲ್ಲವೇ ಬಡ್ಡಿದರ ಕಡಿತಗೊಳಿಸಿಬಿಟ್ಟರೆ ಸಾಲದು. ಸರ್ಕಾರವು ರಿಯಲ್ ಎಸ್ಟೇಟ್ (ವಸತಿ ಕ್ಷೇತ್ರ) ಮತ್ತಿತರ ಕೈಗಾರಿಕೆಗಳಿಗೆ ನೆರವಿನ ಹಸ್ತ ಚಾಚಬೇಕಾಗುತ್ತದೆ. ದೊಡ್ಡ ಕಂಪನಿಗಳ ಬಾಕಿ ಸಾಲವನ್ನು ಸರ್ಕಾರ ಪಾವತಿಸಬೇಕು. ಈ ಕಂಪನಿಗಳು ಮಧ್ಯಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಸಕಾಲದಲ್ಲಿ ಪಾವತಿಸಬೇಕು. ಇದರಿಂದ ಆರ್ಥಿಕತೆಯಲ್ಲಿ ಹಣಕಾಸಿನ ಹರಿವು ಸಾಧ್ಯವಾಗುತ್ತದೆ. ಆದರೆ ಇದನ್ನು ಸಾಧ್ಯಗೊಳಿಸಲು ಸಾಲ ಪಡೆದುಕೊಳ್ಳುವ ಅವಶ್ಯಕತೆಯಿದೆ. RBI ಈಗ ಬಡ್ಡಿ ದರವನ್ನು ಕಡಿತಗೊಳಿಸುತ್ತಿದ್ದರೂ, ಬ್ಯಾಂಕುಗಳು ಭಾರೀ ಪ್ರಮಾಣದ ಸುಸ್ತಿ ಸಾಲಗಳ ಕಾರಣದಿಂದಾಗಿ ಸಾಲ ನೀಡುವುದನ್ನು ನಿಲ್ಲಿಸಲಿವೆ. ಅಂತಹ ಸಂದರ್ಭ ಎದುರಾದರೆ ಸರ್ಕಾರ ಖಾತ್ರಿ ನೀಡಬೇಕಾಗುತ್ತದೆ. 2008ರ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕವು ಬಾಧಿತ ಕಂಪನಿಗೆಳಿಗೆ ತೆರಿಗೆ ಕಡಿತವನ್ನೊಳಗೊಂಡ ಬೆಂಬಲ ಪ್ಯಾಕೇಜನ್ನು ಒದಗಿಸಿತ್ತು. ಈಗ ಕೇಂದ್ರ ಸರ್ಕಾರ ಅಂತಹುದೇ ಕ್ರಮಗಳನ್ನು ಘೋಷಿಸಬೇಕಿದೆ.

ಪರಿಸ್ಥಿತಿ ಎದುರಿಸಲು ಹೆಲಿಕಾಪ್ಟರ್ ಮನಿ, ಹೆಚ್ಚುವರಿ ಹಣ ಪೂರೈಕೆಯಂತಹ (QE) ನೀತಿಗಳ ಸಲಹೆಗಳು ಬರುತ್ತಿವೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಭಾರತದ ಸ್ಥಿತಿ ಇನ್ನೂ ಅಷ್ಟೊಂದು ಹದಗೆಟ್ಟಿಲ್ಲ. 2008-09ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕ ಮತ್ತು ಯೂರೋಪ್​​ ದೇಶಗಳು ಹೆಚ್ಚುವರಿ ಹಣ ಪೂರೈಕೆ (Quantitative Easing) ತಂತ್ರವನ್ನು ಅನುಸರಿಸಿದ್ದವು. ಎಲ್ಲಾ ದೇಶಗಳ ಕೇಂದ್ರ ಬ್ಯಾಂಕುಗಳು ನಿರಂತರವಾಗಿ ಹಣದ ಲಭ್ಯತೆಯ ಕುರಿತು ನಿಗಾವಹಿಸುತ್ತವೆ. ಬ್ಯಾಂಕುಗಳು ಮತ್ತು ಮ್ಯೂಚುಯಲ್ ಫಂಡ್ ಕಂಪನಿಗಳು ಸರ್ಕಾರದ ಬಾಂಡ್‍ಗಳನ್ನು ಇಟ್ಟುಕೊಂಡಿರುತ್ತವೆ. ಕೇಂದ್ರ ಬ್ಯಾಂಕುಗಳು ಈ ಬಾಂಡ್ ಖರೀದಿಸುವ ಮೂಲಕ ಆರ್ಥಿಕತೆಯಲ್ಲಿ ಹಣಕಾಸು ಲಭ್ಯವಾಗುವಂತೆ ನೋಡುಕೊಳ್ಳುತ್ತದೆ. ಇದು ಸರ್ವೇಸಾಮಾನ್ಯವಾಗಿ ಅನುಸರಿಸುವ ಕ್ರಮ. ಹೆಚ್ಚುವರಿ ಹಣ ಪೂರೈಕೆಯಲ್ಲಿ ಅನುಸರಿಸಲಾಗುವ ಕ್ರಮವಿದು.

2008-09ರ ಬಿಕ್ಕಟ್ಟಿನ ಸಂದರ್ಭದಲ್ಲಿ ಬಾಂಡ್‍ಗಳನ್ನು ಖರೀದಿಸಿದ ಮೇಲೂ ಹಣದ ಲಭ್ಯತೆ ಕಡಿಮೆಯಾಗಿತ್ತು. ಬ್ಯಾಂಕುಗಳು ಕಾರ್ಪೊರೇಟ್ ಬಾಂಡ್ ಮತ್ತಿತರ ಸೆಕ್ಯುರಿಟಿಗಳನ್ನು ಖರೀದಿಸುವ ಮೂಲಕ ಮಾರುಕಟ್ಟೆಯಲ್ಲಿ ಹಣದ ಲಭ್ಯತೆ ಉಂಟಾಗುವಂತೆ ಮಾಡಲಾಗಿತ್ತು. ಇಂತಹ ಕ್ರಮಗಳು ಸಾಮಾನ್ಯವಾಗಿ ಜರುಗುವುದಿಲ್ಲ. ಭಾರತದಲ್ಲಿ ಸರ್ಕಾರಿ ಬಾಂಡ್ ಹೊರತುಪಡಿಸಿದಂತೆ ಇತರೆ ಬಾಂಡ್‍ ಗಳನ್ನು ಖರೀದಿಸಲು RBIಗೆ ಅಧಿಕಾರವಿಲ್ಲ. ಅಂತಹ ಅಗತ್ಯತೆ ತಲೆದೋರಿದರೆ ಕಾನೂನನ್ನು ತಿದ್ದುಪಡಿ ಮಾಡಬೇಕಾಗಬಹುದು. ಆದರೆ ಸಧ್ಯಕ್ಕಂತೂ ನಾವು ಅಂತಹ ಸ್ಥಿತಿ ತಲುಪಿಲ್ಲ.

ಹೆಲಿಕಾಪ್ಟರ್ ಮನಿ ವಿಧಾನದಲ್ಲಿ ಕೇಂದ್ರ ಬ್ಯಾಂಕುಗಳು ಹೊಸ ಕರೆನ್ಸಿ ನೋಟುಗಳನ್ನು ಮುದ್ರಿಸಿ ಸರ್ಕಾರಕ್ಕೆ ನೀಡುತ್ತವೆ. ಇದು ಸರ್ಕಾರಕ್ಕೆ ನೀಡುವ ಸಾಲದ ಹಣವಾಗಿರುವುದಿಲ್ಲ. ಈ ಹಣವನ್ನು ಸರ್ಕಾರ ಅನೇಕ ಯೋಜನೆಗಳ ಮುಖಾಂತರ ಜನಗೆ ಹಂಚುತ್ತದೆ. ಇದರಿಂದ ಸಾರ್ವಜನಿಕರು ಹೆಚ್ಚು ವೆಚ್ಚ ಮಾಡಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಸರಕು ಸೇವೆಗಳಿಗೆ ಬೇಡಿಕೆ ಹೆಚ್ಚುತ್ತದೆ. ಹೀಗಾಗಿ ಹೆಚ್ಚುವರಿ ಹಣ ಪೂರೈಕೆ ಮತ್ತು ಹೆಲಿಕಾಪ್ಟರ್ ಮನಿ ಎರಡೂ ವಿಧಾನಗಳಲ್ಲಿ ಸ್ಪಷ್ಟ ವ್ಯತ್ಯಾಸವಿದೆ. ಹೆಚ್ಚುವರಿ ಹಣ ಪೂರೈಕೆಯಲ್ಲಿ ವ್ಯವಸ್ಥೆಯೊಳಗೆ ಹೆಚ್ಚಿಸಲಾದ ಹಣದ ಲಭ್ಯತೆಯನ್ನು ಬೇಕೆಂದರೆ ಹಿಂಪಡೆಯಬಹುದಾಗಿದೆ. ಆದರೆ ಹೆಲಿಕಾಪ್ಟರ್ ಮನಿ ವಿಧಾನದಲ್ಲಿ ಇದು ಸಾಧ್ಯವಿಲ್ಲ. ಒಮ್ಮೆ ಜಾರಿಗೊಳಿಸದರೆ ಮುಗಿಯಿತು. 2002ರಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕಿನ ಅಧ್ಯಕ್ಷ ಬೆನ್ ಬೆರ್ನಾಕೆ ಅವರು ಜಪಾನ್ ದೇಶಕ್ಕೆ ಹೆಲಿಕಾಪ್ಟರ್ ಮನಿ ವಿಧಾನವನ್ನು ಅನುಸರಿಸಲು ಸಲಹೆ ನೀಡಿದ್ದರು. ಆದರೆ ಜಪಾನ್ ಅದನ್ನು ಅನುಸರಿಸಲಿಲ್ಲ. 2008ರ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಸಹ ಅಮೆರಿಕ ಹೆಲಿಕಾಪ್ಟರ್ ಮನಿ ವಿಧಾನವನ್ನು ಅನುಸರಿಸಿರಲಿಲ್ಲ. ಹೀಗಾಗಿ ಭಾರತ ಇಂತಹ ನೀತಿಯನ್ನು ಅನುಸರಿಸುವ ಸಾಧ್ಯತೆ ಕಡಿಮೆ. ಒಮ್ಮೆ ಹೆಲಿಕಾಪ್ಟರ್ ಮನಿ ಮೂಲಕ ಹಣ ಹರಿಸಿದ್ದೇ ಆದರೆ ಹಣದುಬ್ಬರವು ಅಂಕೆ ಮೀರಿ ಹೆಚ್ಚಳವಾಗುತ್ತದೆ.

ವಲಸೆ ಕಾರ್ಮಿಕರ ಸಮಸ್ಯೆಗಳನ್ನು ನಾವು ಹೇಗೆ ಪರಿಹರಿಸಬಹುದು?

ಭಾರತದ ಆರ್ಥಿಕತೆಯ ಅತ್ಯವಶ್ಯಕ ಭಾಗ ವಲಸೆ ಕಾರ್ಮಿಕರು. ಅಸಂಘಟಿತ ವಲಯದ ಸಮಸ್ಯೆಗಳನ್ನು ಈ ಕ್ಷಣದಲ್ಲಿ ಪರಿಹರಿಸಲು ಕಷ್ಟಸಾಧ್ಯ. ಅಂತರ್ ರಾಜ್ಯ ವಲಸೆಗಳು ಮುಂದುರೆಯಲಿವೆ. ಆದರೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿರುತ್ತದೆ. ವಲಸೆ ಕಾರ್ಮಿಕರಿಗೆ ಸೂಕ್ತ ವಸತಿ ವ್ಯವಸ್ಥೆ ಮತ್ತು ಆರೋಗ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು.

ಈಗಿನ ಬಿಕ್ಕಟ್ಟನ್ನು 2008-09ರ ಹಣಕಾಸು ಬಿಕ್ಕಟ್ಟಿಗೆ ಹೋಲಿಸುವುದು ಸರಿಯೇ? ನಿಮ್ಮ ಪ್ರಕಾರ ಯಾವುದು ದೊಡ್ಡ ಬಿಕ್ಕಟ್ಟು?

2008ರ ಜಾಗತಿಕ ಹಣಕಾಸು ಹಿಂಜರಿತವು ಹಣಕಾಸು ಸೇವಾ ವಲಯದಲ್ಲಿ ಶುರುವಾಗಿತ್ತು. ಮುಂದುವರಿದ ದೇಶಗಳಲ್ಲಿನ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ತರತರದ ಡಿರೇವೇಟಿವ್ ಉತ್ಪನ್ನಗಳನ್ನು ಸೃಷ್ಟಿಸಿ ಇಡೀ ವಲಯ ಕುಸಿದು ಬೀಳಲು ಕಾರಣವಾಗಿದ್ದವು. ಪರಿಣಾಮವಾಗಿ ಜನರು ತಮ್ಮ ಸಂಪತ್ತು ಮತ್ತು ಉಳಿತಾಯಗಳನ್ನು ಕಳೆದುಕೊಂಡರು, ಇದರಿಂದ ಬೇಡಿಕೆಯಲ್ಲಿ ಕುಸಿತವುಂಟಾಯಿತು. ನಂತರ ಈ ಬಿಕ್ಕಟ್ಟು ನೈಜ ಆರ್ಥಿಕತೆಗೂ ಅಂದರೆ ಉತ್ಪಾದನಾ ವಲಯಕ್ಕೂ ವ್ಯಾಪಿಸಿಕೊಂಡಿತು. ಪ್ರಸ್ತುತ ಕೊರೊನಾ ಬಿಕ್ಕಟ್ಟು 2008-09ರ ಬಿಕ್ಕಟ್ಟಿಗೆ ಸ್ಪಷ್ಟ ವ್ಯತಿರಿಕ್ತ ಗತಿಯಲ್ಲಿದೆ. ಸಾಂಕ್ರಾಮಿಕ ಪಿಡುಗಿನಿಂದ ಉಂಟಾಗಿರುವ ಈ ಬಿಕ್ಕಟ್ಟು ಮೊದಲು ನೈಜ ಆರ್ಥಿಕತೆಯನ್ನೇ ಭಾಧಿಸಿ ನಂತರದಲ್ಲಿ ಹಣಕಾಸು ವಲಯಕ್ಕೆ ವ್ಯಾಪಿಸಲಿದೆ.

ಈಗಾಗಲೇ ಪೂರೈಕೆ ಸರಪಳಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿರುವುದಲ್ಲದೆ ಬೇಡಿಕೆಯೂ ಪಾತಾಳಕ್ಕೆ ಕುಸಿದಿದೆ. ಎರಡು ಬಿಕ್ಕಟ್ಟುಗಳ ಮೂಲಗಳು ಬೇರೆ ಬೇರೆಯೇ ಆಗಿದ್ದರಿಂದ ಇವುಗಳಿಗೆ ಪರಿಹಾರವೂ ಬೇರೆಬೇರೆಯೇ ಆಗಿರಬೇಕಾಗುತ್ತದೆ. ಹಿಂದೆ, ಹಣಕಾಸು ವಲಯಕ್ಕೆ ಬೆಂಬಲ ಒದಗಿಸುವುದು ಅಗತ್ಯವಾಗಿತ್ತು. ಹಣಕಾಸು ಸಂಸ್ಥೆಗಳನ್ನು ರಕ್ಷಿಸುವುದು ಆಗ ಅತ್ಯಗತ್ಯವಾಗಿತ್ತು. ಆರ್ಥಿಕ ಪುನಶ್ಚೇತನಕ್ಕೆ ನೈಜ ಆರ್ಥಿಕತೆಯನ್ನು ಅಂದರೆ ಉತ್ಪಾದನಾ ಕ್ಷೇತ್ರವನ್ನು ಪುನಶ್ಚೇತನಗೊಳಿಸಬೇಕಾಗಿತ್ತು. ಈಗ ಉತ್ಪಾದನಾ ವಲಯವನ್ನು ಉತ್ತೇಜಿಸಲು ಕೊರೊನಾ ಸಾಂಕ್ರಾಮಿಕ ಪಿಡುಗನ್ನು ಹತೋಟಿಗೆ ತರುವುದು ಅವಶ್ಯವಾಗಿದೆ.

ಮತ್ತೊಂದು ವ್ಯತ್ಯಾಸವೇನೆಂದರೆ 2008-09ರ ಹಣಕಾಸು ಬಿಕ್ಕಟ್ಟು ಅಮೆರಿಕದ ಗೃಹಸಾಲ ಕ್ಷೇತ್ರದಿಂದ ಶುರುವಾಗಿ ನಂತರ ಅದು ವಿಶ್ವವನ್ನೇ ವ್ಯಾಪಿಸಿಕೊಂಡಿತ್ತು. ಈಗ ನಾವೆಲ್ ಕೊರೊನಾವೈರಸ್ ಪಿಡುಗು ಮೊದಲು ಚೀನಾದ ವುಹಾನ್‍ನಲ್ಲಿ ಕಾಣಿಸಿಕೊಂಡು ನಂತರ ಪ್ರಪಂಚದಾದ್ಯಂತ ಕಾಣಿಸಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.