ಲಕ್ನೋ: ಇಂಡೋ-ನೇಪಾಳ ಗಡಿ ವಿವಾದದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ನಿರ್ದೇಶನದಂತೆ ಉತ್ತರ ಪ್ರದೇಶದ ಏಳು ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಜಗಂಜ್, ಸಿದ್ಧಾರ್ಥನಗರ, ಶ್ರಾವಸ್ತಿ, ಬಲರಾಂಪುರ್, ಬಹ್ರೈಚ್, ಲಖಿಂಪುರ್ ಖೇರಿ, ಪಿಲಿಭಿತ್ ಜಿಲ್ಲೆಗಳಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದೆ. ಇಂಡೋ-ನೇಪಾಳ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಪ್ರಸ್ತುತ, ಸೀಮಾ ಸುರಕ್ಷ ಬಾಲ್ (ಎಸ್‌ಎಸ್‌ಬಿ) ಮತ್ತು ಸ್ಥಳೀಯ ಪೊಲೀಸ್ ಲಾಲ್‌ಬಂಡಿ ನಾರಾಯಣಪುರ ಗಡಿಯಲ್ಲಿ ನೇಪಾಳ ಸೇನೆಯು ಕಾಂಪೇನ್ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಓದಿ:ರಾಜಕೀಯ ನಕ್ಷೆಯನ್ನು ಪುನಃ ರಚಿಸುವ ಮಸೂದೆ ಅಂಗೀಕರಿಸಿದ ನೇಪಾಳ ಸಂಸತ್ತು..
ಮೇ 8 ರಂದು ಉತ್ತರಾಖಂಡದ ಧಾರ್ಚುಲಾದೊಂದಿಗೆ ಲಿಪುಲೆಖ್ ಪಾಸ್‌ನ ಸಂಪರ್ಕಿಸುವ 80 ಕಿ.ಮೀ ಉದ್ದದ ಕಾರ್ಯತಂತ್ರದ ನಿರ್ಣಾಯಕ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ ನಂತರ ಭಾರತ ಮತ್ತು ನೇಪಾಳ ನಡುವಿನ ಸಂಬಂಧ ಬಿಗಡಾಯಿಸಿತು. ಅಲ್ಲದೇ ನಿನ್ನೆ ಭಾರತದ ವಿರೋಧದ ನಡುವೆಯೂ ನೂತನ ನಕ್ಷೆ ತಿದ್ದುಪಡಿಗೆ ನೇಪಾಳ ಅನುಮೋದನೆ ನೀಡಿದೆ. ನೇಪಾಳ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ದೇಶದ ರಾಜಕೀಯ ನಕ್ಷೆ ಪರಿಷ್ಕರಿಸಲು ಸರ್ಕಾರವು ಮಂಡಿಸಿದ ಪ್ರಮುಖ ಸಂವಿಧಾನ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದೆ.