ETV Bharat / bharat

ಪೃಥ್ವಿ-2 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ - ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪೃಥ್ವಿ- 2 ಕ್ಷಿಪಣಿ

ಭಾರತವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಅಣ್ವಸ್ತ್ರ ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.

Indigenously developed Prithvi-II missile testfired
ಪೃಥ್ವಿ- 2 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
author img

By

Published : Sep 24, 2020, 10:13 AM IST

ಬಾಲಸೋರ್ (ಒಡಿಶಾ): ಭಾರತೀಯ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಲಾದ ಅಣ್ವಸ್ತ್ರ ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಅತ್ಯಾಧುನಿಕ ಕ್ಷಿಪಣಿಯನ್ನು ಇಲ್ಲಿಗೆ ಸಮೀಪವಿರುವ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್)ನಿಂದ ರಾತ್ರಿ ಪರೀಕ್ಷಿಸಲಾಯಿತು. ಪ್ರಯೋಗ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

350 ಕಿ.ಮೀ. ದೂರಕ್ಕೆ ಜಿಗಿಯುವ ಸಾಮರ್ಥ್ಯ ಹೊಂದಿರುವ ಪೃಥ್ವಿ-2 ಕ್ಷಿಪಣಿಯನ್ನು ಮೊಬೈಲ್ ಲಾಂಚರ್‌ನಿಂದ ಐಟಿಆರ್‌ನ ಉಡಾವಣಾ ಸಂಕೀರ್ಣ-3ರಿಂದ ಪರೀಕ್ಷೆ ನಡೆಸಲಾಗಿದೆ ಎಂದು ಡಿಆರ್‌ಡಿಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಿಂದೆ ಕೂಡ ಇದರ ಪ್ರಯೋಗ ನಡೆಸಲಾಗಿತ್ತು. ಈ ಕ್ಷಿಪಣಿ 500ರಿಂದ 1,000 ಕೆಜಿ ಸಾಮರ್ಥ್ಯದ ಸಿಡಿತಲೆಗಳನ್ನು ಹೊತ್ತು ಸಾಗಬಲ್ಲದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.