ETV Bharat / bharat

ಕೋವಿಡ್ -19 ನಿರ್ವಹಣೆಗೆ ಸ್ಥಳೀಯ ಪರೀಕ್ಷಾ ಕಿಟ್‌ಗಳನ್ನು ಬಿಡುಗಡೆಗೊಳಿಸಿದ ಜಗನ್​

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ, ಆಂಧ್ರಪ್ರದೇಶದ ಮೆಡ್‌ಟೆಕ್ ವಲಯದಿಂದ ತಯಾರಿಸಿದ ಕೋವಿಡ್ -19 ಪರೀಕ್ಷಾ ಕಿಟ್‌ಗಳನ್ನು ಬಿಡುಗಡೆ ಮಾಡಿದರು.

ap
ap
author img

By

Published : Apr 9, 2020, 8:12 AM IST

ಅಮರಾವತಿ (ಆಂಧ್ರ ಪ್ರದೇಶ): ಸ್ಥಳೀಯ ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಉತ್ತೇಜನ ನೀಡಿದ್ದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ, ಆಂಧ್ರಪ್ರದೇಶದ ಮೆಡ್‌ಟೆಕ್ ವಲಯ ತಯಾರಿಸಿದ ಕೋವಿಡ್ -19 ಪರೀಕ್ಷಾ ಕಿಟ್‌ಗಳನ್ನು ಬಿಡುಗಡೆ ಮಾಡಿದರು.

ಏಪ್ರಿಲ್ 15ರಿಂದ ಪರೀಕ್ಷಾ ಕಿಟ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸಲು ಸಜ್ಜಾಗಿರುವ ಮೆಡ್‌ಟೆಕ್ ದಿನಕ್ಕೆ 2,000 ಕಿಟ್‌ಗಳನ್ನು ತಯಾರಿಸಲಿದ್ದು, ಕ್ರಮೇಣ ಉತ್ಪಾದನೆಯನ್ನು ಹೆಚ್ಚಿಸಲಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಕೈಗಾರಿಕಾ ಸಚಿವ ಮೆಕಪತಿ ಗೌತಮ್ ರೆಡ್ಡಿ, "ಮೆಡ್‌ಟೆಕ್ ಈಗ ದಿನಕ್ಕೆ 2,000 ಪರೀಕ್ಷಾ ಕಿಟ್‌ಗಳನ್ನು ತಯಾರಿಸುತ್ತಿದ್ದು, ಲೇಸರ್ ವೆಲ್ಡಿಂಗ್ ಉಪಕರಣಗಳನ್ನು ಪಡೆದ ನಂತರ ಉತ್ಪಾದನೆಯನ್ನು ದಿನಕ್ಕೆ 25,000 ಯುನಿಟ್‌ಗಳವರೆಗೆ ಏರಿಸಲಾಗುವುದು. ಮೆಡ್‌ಟೆಕ್ ವೆಂಟಿಲೇಟರ್‌ಗಳನ್ನು ತಯಾರಿಸಲಿದ್ದು, ಪ್ರಾರಂಭದಲ್ಲಿ ತಿಂಗಳಿಗೆ 3,000 ವೆಂಟಿಲೇಟರ್‌ಗಳನ್ನು ತಯಾರಿಸಲಿದೆ. ರಾಜ್ಯದ ಅವಶ್ಯಕತೆಗಳನ್ನು ಪೂರೈಸಿ, ದೇಶದ ಉಳಿದ ಭಾಗಗಳಿಗೂ ಪೂರೈಸಲಿದೆ" ಎಂದು ಹೇಳಿದರು.

ಪ್ರತಿ ಟೆಸ್ಟ್ ಕಿಟ್ ಮೂಲಕ 1,200 ರೂಪಾಯಿ ವೆಚ್ಚದಲ್ಲಿ 20 ಪರೀಕ್ಷೆಗಳನ್ನು ನಡೆಸಬಹುದಾಗಿದೆ. ಮೇ ವೇಳೆಗೆ 7.5 ಲಕ್ಷ ಕಿಟ್‌ಗಳನ್ನು ತಯಾರಿಸಿ, ಇತರ ರಾಜ್ಯಗಳಿಗೂ ಕಿಟ್​ಗಳನ್ನು ತಲುಪಿಸುವ ಗುರಿ ಮೆಡ್‌ಟೆಕ್ ಹೊಂದಿದೆ.

ರಾಜ್ಯದಲ್ಲಿ ದಿನಕ್ಕೆ 4,000 ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಕಿಟ್‌ಗಳನ್ನು ಪೂರೈಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಕಿಟ್‌ಗಳನ್ನು ಬಳಸಿಕೊಂಡು ಡಿಎನ್‌ಎ, ಆರ್‌ಎನ್‌ಎ, ಪಿಸಿಆರ್ ಪರೀಕ್ಷೆಗಳನ್ನು ಸಹ ಮಾಡಬಹುದಾಗಿದ್ದು, 55 ನಿಮಿಷಗಳಲ್ಲಿ ಫಲಿತಾಂಶ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.