ನವದೆಹಲಿ: ನೇರ, ದಿಟ್ಟ ಮಾತು, ಯುದ್ಧಕ್ಕಿಂತ ಮಿಗಿಲಾದ ಬುದ್ಧಿವಂತಿಕೆ, ಬರೀ ಕೌಶಲ್ಯಗಳಿಂದಲ್ಲೇ ಶತ್ರು ರಾಷ್ಟ್ರಗಳಿಗೆ ನಡುಕ ಹುಟ್ಟಿಸಬಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ 75ನೇ ಜನ್ಮದಿನ.
ಅಜಿತ್ ದೋವಲ್ ಬಗ್ಗೆ ನಿಮಗೆ ತಿಳಿಯದ ಐದು ಇಂಟರ್ಸ್ಟಿಂಗ್ ಸಂಗತಿಗಳು
* 'ಸೈಲೆಂಟ್ ಕಿಲ್ಲರ್' ಎಂದೇ ಹೆಸರುವಾಸಿಯಾದ ದೋವಲ್ ಸರ್ಜಿಕಲ್ ಸ್ಟ್ರೈಕ್‌ನಲ್ಲಷ್ಟೇ ಅಲ್ಲದೆ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಬೇಹುಗಾರಿಕಾ ಮತ್ತು ರಾಜತಾಂತ್ರಿಕ ವಿದ್ಯಮಾನಗಳಲ್ಲಿ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ. ನೆರೆಯ ರಾಷ್ಟ್ರಗಳಿಂದ ದೇಶಕ್ಕೆ ಆಪತ್ತು ಬಂದಾಗಲೂ, ಸಾಗರೋತ್ತರ ರಾಷ್ಟ್ರಗಳಲ್ಲಿ ಭಾರತೀಯರ ಸಂಕಷ್ಟದಲ್ಲಿ ಸಿಲುಕಿಕೊಂಡಾಗಲೂ ದೋವಲ್ ತೆರೆಮರೆಯಲ್ಲಿ ನಿಂತು ಶ್ರಮಿಸಿದ್ದರು.
* 1945ರ ಜನವರಿ 20ರಂದು ಓರ್ವ ಮಿಲಿಟರಿ ಅಧಿಕಾರಿಯ ಮಗನಾಗಿ ಉತ್ತರಖಂಡದ ದೋವಲ್ ಎಂಬಲ್ಲಿ ಜನಿಸಿದ್ದರು. 1968ರಲ್ಲಿ ಭಾರತೀಯ ಪೊಲೀಸ್ ಸೇವೆಯಲ್ಲಿ ಕೇರಳ ಕೇಡರ್ ಆಗಿ ಅಧಿಕಾರ ವಹಿಸಿಕೊಂಡರು. ಪಂಜಾಬ್, ಮಿಜೋರಾಂ ಹಾಗೂ ಜಮ್ಮು-ಕಾಶ್ಮೀರದಲ್ಲಿ ಭುಗಿಲೆದ್ದ ಆಂತರಿಕ ದಂಗೆಗಳನ್ನು ಶಮನ ಮಾಡುವಲ್ಲಿ ಇವರು ಮುಖ್ಯ ಪಾತ್ರವಹಿಸಿದ್ದರು.
* ನೆರೆಯ ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ತೆರಳಿ ಕಠಿಣ ಸಂದರ್ಭದಲ್ಲಿ ಗೂಢಾಚಾರಿಕೆ ನಡೆಸಿ ಹಲವು ರಹಸ್ಯಗಳನ್ನು ಭಾರತೀಯ ರಿಸರ್ಚ್ ಆ್ಯಂಡ್ ಅನಾಲಿಸಸ್ ವಿಂಗ್ (ರಾ) ಗಮನಕ್ಕೆ ತಂದರು. ಇಸ್ಲಾಮಾಬಾದ್‌ನಲ್ಲಿ ಭಾರತೀಯ ಹೈ ಕಮಿಷನ್‌ನಲ್ಲಿ 7 ವರ್ಷ ಕಳೆದ ದೋವಲ್ ವೇಷ ಮರೆಸಿಕೊಂಡು ಗುಪ್ತ ಮಾಹಿತಿಗಳನ್ನು ಕಲೆ ಹಾಕಿದ್ದು, ಇಂಡಿಯನ್ ರಿಯಲ್ ಜೇಮ್ಸ್.
* ಅತ್ಯಂತ ಧೈರ್ಯಶಾಲಿಯಾದ ದೋವಲ್ ತಮ್ಮ ಚಾಣಾಕ್ಷ್ಯ ಬುದ್ಧಿಯಿಂದಲೇ ದೇಶದ ಭದ್ರತೆ ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. 2016ರಲ್ಲಿ ಉರಿ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್ ಸ್ಟ್ರೈಕ್ ಮತ್ತು 2019ರಲ್ಲಿ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್ ಮೇಲೆ ನಡೆಸಿದ್ದ ವೈಮಾನಿಕ ದಾಳಿಯ ಹಿಂದೆಯೂ ದೋವಲ್ ಮಾಸ್ಟರ್‌ಮೈಂಡ್ ಕೆಲಸ ಮಾಡಿತ್ತು.
* ದೋವಲ್ ಸೇವೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರವು 'ಕೀರ್ತಿ ಚಕ್ರ' ಪ್ರಶಸ್ತಿ ನೀಡಿ ಗೌರವಿಸಿದೆ. ಕೀರ್ತಿ ಚಕ್ರ ಪಡೆದ ಮೊದಲ ಪೊಲೀಸ್ ಅಧಿಕಾರಿ ಎಂಬ ಖ್ಯಾತಿಗೆ ದೋವಲ್ ಪಾತ್ರವಾಗಿದ್ದಾರೆ. ಮಲ್ಟಿ ಏಜೆನ್ಸಿ ಸೆಂಟರ್ ಮತ್ತು ಜಾಯಿಂಟ್ ಟಾಸ್ಕ್ ಫೋರ್ಸ್ ಆನ್ ಇಂಟೆಲಿಜೆನ್ಸ್‌ನ ಮುಖ್ಯಸ್ಥ ಹಾಗೂ ಸ್ಥಾಪಕರು ಸಹ ಆಗಿದ್ದಾರೆ. ಪ್ರಧಾನಿ ಮೋದಿಯ ಬಲಗೈ ಬಂಟ ಆಗಿರುವುದುರಿಂದಲೇ ದಶಕದಿಂದ ದೊಡ್ಡ ತಲೆನೋವಾಗಿದ್ದ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆಯುವಲ್ಲಿ ದೋವಲ್ ಬುದ್ಧಿವಂತಿಕೆಯೂ ಇತ್ತು.