ETV Bharat / bharat

ಭಾರತದ ಮೊದಲ ಮತದಾರ ಶ್ಯಾಮ್ ಸರನ್ ನೇಗಿಗೆ 104 ನೇ ವರ್ಷದ ಸಂಭ್ರಮ.. - ಭಾರತದ ಮೊದಲ ಮತದಾರ ಎಂಬ ಹೆಗ್ಗಳಿಕೆ

1951 ರಲ್ಲಿ ನಡೆದ ಸ್ವತಂತ್ರ ಭಾರತದ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದವರಲ್ಲಿ ಒಬ್ಬರಾದ ಶ್ಯಾಮ್ ಸರನ್ ನೇಗಿ ಜುಲೈ 1 ರಂದು 104ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

Shyam Saran Negi
ಶ್ಯಾಮ್ ಸರನ್ ನೇಗಿ
author img

By

Published : Jul 2, 2020, 6:11 PM IST

ಶಿಮ್ಲಾ(ಹಿಮಾಚಲ ಪ್ರದೇಶ): ಭಾರತದ ಮೊದಲ ಮತದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶ್ಯಾಮ್ ಸರನ್ ನೇಗಿ ಅವರು ಜುಲೈ 1 ರಂದು 104ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಭಾರತದಲ್ಲಿ ನಡೆದ ಮೊದಲ ಚುನಾವಣೆಯಿಂದ ಈವರೆಗಿನ ಚುನಾವಣೆಯವರೆಗೆ ಮತ ಚಲಾಯಿಸುವ ಅವಕಾಶವನ್ನು ಎಂದಿಗೂ ತಪ್ಪಿಸಿಕೊಳ್ಳದ ನೇಗಿ, 1951 ರಲ್ಲಿ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು.

ಈ ಬಗ್ಗೆ 'ಈಟಿವಿ ಭಾರತ' ಜೊತೆ ಮಾತನಾಡಿದ ಅವರು, ನಾನು 1951ರಲ್ಲಿ ಮೊದಲ ಮತ ಚಲಾಯಿಸಿದ್ದೆ. ಮತದಾನ ಎಂಬುದು ನಮ್ಮೆಲ್ಲರ ಮೂಲಭೂತ ಹಕ್ಕು ಹಾಗೂ ಮತ ಚಲಾಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅಂದಿನಿಂದ ಇಂದಿನವರೆಗೂ ಸಹ ನಾನು ಯಾವುದೇ ಚುನಾವಣೆಯಲ್ಲಿಯೂ ಮತದಾನದಿಂದ ದೂರ ಉಳಿದಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

104ನೇ ಜನ್ಮದಿನ ಆಚರಿಸಿಕೊಂಡ ಶ್ಯಾಮ್ ಸರನ್ ನೇಗಿ

ಇದುವರೆಗೂ ನಾನು ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ ಎಂಬುದು ನನಗೆ ಸಂತಸದ ವಿಷಯವಾಗಿದೆ ಹಾಗೂ ಇದು ನನ್ನ ಅದೃಷ್ಟ. ನನ್ನ ಕುಟುಂಬವು ಸಹ ನನ್ನ ಬಗ್ಗೆ ಕಾಳಜಿ ವಹಿಸುತ್ತಿದೆ ಮತ್ತು ನಾನು ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಎಂದು ನೇಗಿ ತಿಳಿಸಿದರು.

ಪ್ರಸ್ತುತ ನಾನು ನನ್ನ ಜೀವನದ 103 ವರ್ಷಗಳನ್ನು ಪೂರೈಸಿದ್ದೇನೆ. ಆದರೆ ನನ್ನ ಜನ್ಮದಿನವನ್ನು ಆಚರಣೆ ಮಾಡಲು ಎಂದಿಗೂ ಆದ್ಯತೆ ನೀಡುವುದಿಲ್ಲ ಎಂದು ನೇಗಿ ಹೇಳಿದ್ದಾರೆ.

ನೇಗಿಗೆ 100 ವರ್ಷ ತುಂಬಿದಾಗ ಗ್ರಾಮಸ್ಥರೆಲ್ಲರೂ ಅವರ ಹುಟ್ಟುಹಬ್ಬವನ್ನು ಬಹು ಸಡಗರದಿಂದ ಆಚರಿಸಿದ್ದರು. ಈ ವರ್ಷವೂ ಸಹ ನೇಗಿಯವರ ಜನ್ಮದಿನವನ್ನು ಆಚರಿಸಬೇಕು ಎಂದುಕೊಂಡಿದ್ದ ಗ್ರಾಮಸ್ಥರಿಗೆ ಕೊರೊನಾ ಅಡ್ಡಗಾಲು ಹಾಕಿದೆ.

ಕೊರೊನಾ ವೈರಸ್​​ ಸಾಂಕ್ರಾಮಿಕ ರೋಗದ ನಡುವೆ ಜನರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಮತ್ತು ಫೋನ್ ಕರೆಗಳ ಮೂಲಕ ಶುಭಾಶಯಗಳನ್ನು ಕಳುಹಿಸಿದರೆ ಸಾಕು. ಅದರ ಹೊರತಾಗಿ ನನ್ನನ್ನು ಭೇಟಿ ಮಾಡುವ ಅಗತ್ಯವಿಲ್ಲವೆಂದು ನೇಗಿ ಹುಟ್ಟುಹಬ್ಬದ ಹಿಂದಿನ ದಿನ ಮನವಿ ಮಾಡಿದ್ದರು.

1951 ರಲ್ಲಿ ನಡೆದ ಸ್ವತಂತ್ರ ಭಾರತದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದವರಲ್ಲಿ ಶ್ಯಾಮ್ ಸರನ್ ಮೊದಲಿಗರಾಗಿದ್ದಾರೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ. 2010 ರಲ್ಲಿ ನಡೆದಿದ್ದ ಚುನಾವಣಾ ಆಯೋಗದ ವಜ್ರ ಮಹೋತ್ಸವದ ಸಂದರ್ಭದಲ್ಲಿ ನೇಗಿ ಅವರನ್ನು ಅಂದಿನ ಮುಖ್ಯ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಸನ್ಮಾನಿಸಿ ಗೌರವಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.