ETV Bharat / bharat

ಮಹಾರಾಷ್ಟ್ರದಿಂದ ಹೊರಟ ಭಾರತದ ಮೊದಲ 'ಕಿಸಾನ್ ರೈಲು'..! - ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್

ಕಿಸಾನ್ ರೈಲಿಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಚಾಲನೆ ನೀಡಿದರು. ಇದು ಮಹಾರಾಷ್ಟ್ರದ ದೇವಲಾಲಿ ಮತ್ತು ಬಿಹಾರದ ದಾನಾಪುರ ನಡುವೆ 1,519 ಕಿಲೋ ಮೀಟರ್ ಅಂತರದಲ್ಲಿ 32 ಗಂಟೆಗಳ ಅವಧಿಯಲ್ಲಿ ವಾರಕ್ಕೊಮ್ಮೆ ಸಂಚರಿಸಲಿದೆ.

ಭಾರತದ ಮೊದಲ ಕಿಸಾನ್ ರೈಲಿಗೆ ವಿಡಿಯೋ ಕಾನ್ಫರೆನ್ಸ್​  ಮೂಲಕ ಚಾಲನೆ

author img

By

Published : Aug 7, 2020, 6:14 PM IST

ನವದೆಹಲಿ: ರೈತರ ಆದಾಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ರೈಲ್ವೆಯು 'ಕಿಸಾನ್ ರೈಲು' ಸೇವೆಯನ್ನು ಪ್ರಾರಂಭಿಸಿದೆ. ಭಾರತದ ಮೊಟ್ಟಮೊದಲ ಕಿಸಾನ್ ರೈಲು ಇದಾಗಿದ್ದು, ಮಹಾರಾಷ್ಟ್ರದಿಂದ ಬಿಹಾರಕ್ಕೆ ಹಣ್ಣು, ತರಕಾರಿ, ಮಾಂಸ ಮತ್ತು ಹಾಲಿನಂತಹ ಬೇಗ ಹಾಳಾಗುವ ಪದಾರ್ಥಗಳನ್ನು ಸಾಗಿಸಲಿದೆ.

ಕಿಸಾನ್ ರೈಲಿಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಚಾಲನೆ ನೀಡಿದರು. ಇದು ಮಹಾರಾಷ್ಟ್ರದ ದೇವಲಾಲಿ ಮತ್ತು ಬಿಹಾರದ ದಾನಾಪುರ ನಡುವೆ 1,519 ಕಿಲೋ ಮೀಟರ್ ಅಂತರದಲ್ಲಿ 32 ಗಂಟೆಗಳ ಅವಧಿಯಲ್ಲಿ ವಾರಕ್ಕೊಮ್ಮೆ ಸಂಚರಿಸಲಿದೆ.

ಭಾರತದ ಮೊದಲ ಕಿಸಾನ್ ರೈಲಿಗೆ ವಿಡಿಯೋ ಕಾನ್ಫರೆನ್ಸ್​  ಮೂಲಕ ಚಾಲನೆ
ಭಾರತದ ಮೊದಲ ಕಿಸಾನ್ ರೈಲಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಚಾಲನೆ

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಿಯೂಷ್ ಗೋಯಲ್, ಕಿಸಾನ್ ರೈಲು ಸೇವೆಯು ಭಾರತೀಯ ರೈತರ ಆದಾಯ ಮಟ್ಟವನ್ನು ಹೆಚ್ಚಿಸುತ್ತದೆ. ಭಾರತೀಯ ರೈಲ್ವೆಯು ದೇಶದ ಬೆಳವಣಿಗೆಯನ್ನು ವೃದ್ಧಿಸುವ ಎಂಜಿನ್ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಏಕಾಏಕಿ ಕೊರೊನಾ ತಂದಿಟ್ಟ ಸಮಸ್ಯೆಗಳ ನಡುವೆಯೂ ರೈತರು ಮತ್ತು ರೈಲ್ವೆ ಇಲಾಖೆ ಆಹಾರ ಪೂರೈಕೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಂಡರು. 2020 ರ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸಾರ್ವಜನಿಕ -ಖಾಸಗಿ ಸಹಭಾಗಿತ್ವದಲ್ಲಿ ರೈಲು ಸ್ಥಾಪಿಸಲು ಘೋಷಿಸಿದ್ದರು. ಈ ನಿಟ್ಟಿನಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.