ETV Bharat / bharat

ಹೊಸ ಆಶಾಭಾವ: ಭಾರತದಲ್ಲಿ ಶೇ.85ರಷ್ಟು ಜನರು ಕೋವಿಡ್​ನಿಂದ ಗುಣಮುಖ

ಭಾರತದಲ್ಲಿ ಶೇ.85ರಷ್ಟು ಜನರು ಅಂದರೆ, 69 ಲಕ್ಷ ಸೋಂಕಿತರ ಪೈಕಿ 59,06,070 ಮಂದಿ ಮಹಾಮಾರಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ.

India's COVID tally crosses 69-lakh mark
ಭಾರತದಲ್ಲಿ ಶೇ.85ರಷ್ಟು ಜನರು ಕೋವಿಡ್​ನಿಂದ ಗುಣಮುಖ
author img

By

Published : Oct 9, 2020, 10:33 AM IST

ನವದೆಹಲಿ: ದೇಶದಲ್ಲಿ ಸತತ ಮೂರು ವಾರಗಳಿಂದ ಹೊಸ ಕೋವಿಡ್​ ಸೋಂಕಿತರ ಸಂಖ್ಯೆಗಿಂತ ಗುಣಮುಖರ ಸಂಖ್ಯೆಯಲ್ಲೇ ಹೆಚ್ಚಳ ಕಂಡುಬರುತ್ತಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಟ್ವೀಟ್​ ಮಾಡಿದೆ. ದಾಖಲೆ ಪ್ರಮಾಣದಲ್ಲಿ ಚೇತರಿಕೆ ಕಂಡು ಬರುತ್ತಿರುವುದರಿಂದ ಜನರಲ್ಲಿ ಹೊಸ ಆಶಾಭಾವನೆ ಮೂಡಿದೆ.

India's COVID tally crosses 69-lakh mark
ಗುಣಮುಖರ ಸಂಖ್ಯೆಯಲ್ಲಿ ಏರಿಕೆ

ಕಳೆದ 24 ಗಂಟೆಗಳಲ್ಲಿ 70,496 ಸೋಂಕಿತರು ಪತ್ತೆಯಾಗಿದ್ದು, 964 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 69,06,152 ಹಾಗೂ ಮೃತರ ಸಂಖ್ಯೆ 1,06,490ಕ್ಕೆ ಏರಿಕೆಯಾಗಿದೆ.

ಶೇ.85ರಷ್ಟು ರೋಗಿಗಳು ಅಂದರೆ ಒಟ್ಟು ಸೋಂಕಿತರ ಪೈಕಿ 59,06,070 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಉಳಿದಂತೆ 8,93,592 ಕೇಸ್​​ಗಳು ಸಕ್ರಿಯವಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.