ETV Bharat / bharat

ದೇಶದಲ್ಲಿ ಒಂದೇ ದಿನ 90 ಸಾವಿರ ಸೋಂಕಿತರು ಪತ್ತೆ... ಮೃತರ ಸಂಖ್ಯೆ 70 ಸಾವಿರಕ್ಕೆ ಏರಿಕೆ!

ದೇಶದಲ್ಲಿ ನಿನ್ನೆ ಒಂದೇ ದಿನ 10,92,654 ಮಂದಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, 90 ಸಾವಿರ ಜನರ ವರದಿ ಪಾಸಿಟಿವ್​ ಬಂದಿದೆ.

Total number of corona cases in India
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​
author img

By

Published : Sep 6, 2020, 10:41 AM IST

Updated : Sep 6, 2020, 11:43 AM IST

ನವದೆಹಲಿ: ಭಾರತದಲ್ಲಿ ಕೊರೊನಾ ನಾಗಾಲೋಟ ಮುಂದುವರೆದಿದ್ದು, ಇಲ್ಲಿಯವರೆಗೆ 41 ಲಕ್ಷ ಜನರಿಗೆ ವೈರಸ್​ ಅಂಟಿದೆ. ಚೇತರಿಕೆಯ ಪ್ರಮಾಣದಲ್ಲೂ ಏರಿಕೆ ಕಂಡುಬಂದಿದ್ದು, ನಿನ್ನೆ ಒಂದೇ ದಿನ 70 ಸಾವಿರ ಸೋಂಕಿತರು ಗುಣಮುಖರಾಗಿದ್ದಾರೆ.

Total number of corona cases in India
ಗುಣಮುಖರ ಸಂಖ್ಯೆಯಲ್ಲಿ ಏರಿಕೆ

ಕಳೆದ 24 ಗಂಟೆಗಳಲ್ಲಿ ಈವರೆಗ ಅತಿ ಹೆಚ್ಚು ಕೇಸ್​ಗಳು ಎಂಬಂತೆ ಬರೋಬ್ಬರಿ 90,633 ಸೋಂಕಿತರು ಪತ್ತೆಯಾಗಿದ್ದು, 1,065 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 41,13,812 ಹಾಗೂ ಮೃತರ ಸಂಖ್ಯೆ 70,626ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ 31,80,866 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್​ ಆಗಿದ್ದಾರೆ. ಉಳಿದಂತೆ 8,62,320 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Total number of corona cases in India
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ಸೆಪ್ಟೆಂಬರ್ 5ರ ವರೆಗೆ 4,88,31,145 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 10,92,654 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

Last Updated : Sep 6, 2020, 11:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.