ನವದೆಹಲಿ: ಕೋವಿಡ್ ಹೋರಾಟದಲ್ಲಿ ಜಾಗತಿಕವಾಗಿ ಭಾರತವು ಪ್ರತಿ ಮಿಲಿಯನ್ ಜನಸಂಖ್ಯೆಗೆ ಅತಿ ಕಡಿಮೆ ಸಾವುಗಳನ್ನು ಹೊಂದಿದೆ. 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಿಲಿಯನ್ ಜನಸಂಖ್ಯೆಗೆ ದೇಶದ ಸರಾಸರಿ ಸಾವಿನ ಸಂಖ್ಯೆಗಿಂತ ಕಡಿಮೆ ಸಾವು ವರದಿಯಾಗಿದೆ.
ಕಳೆದ 24 ಗಂಟೆಗಳಲ್ಲಿ 63,371 ಸೋಂಕಿತರು ಪತ್ತೆಯಾಗಿದ್ದು, 895 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 73,70,469 ಹಾಗೂ ಮೃತರ ಸಂಖ್ಯೆ 1,12,161ಕ್ಕೆ ಏರಿಕೆಯಾಗಿದೆ. ಆದರೆ ದೇಶದಲ್ಲಿ ಕೋವಿಡ್ ಮೃತರ ಪ್ರಮಾಣ ಶೇ. 1.52ರಷ್ಟು ಕುಸಿದಿದ್ದು, ಚೇತರಿಕೆಯ ಪ್ರಮಾಣ ಶೇ. 87.4ಕ್ಕೆ ಹೆಚ್ಚಳವಾಗಿದೆ.
ಒಟ್ಟು ಸೋಂಕಿತರ ಪೈಕಿ 64,53,780 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 8,04,528 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಅಕ್ಟೋಬರ್ 15ರ ವರೆಗೆ 9,22,54,927 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 10,28,622 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.