ನವದೆಹಲಿ : ಜಾಗತಿಕ ಮಹಾಮಾರಿ ಕೊರೊನಾ ಭಾರತಕ್ಕೆ ಕಾಲಿಟ್ಟು 10 ತಿಂಗಳು ಕಳೆದಿದೆ. ಈವರೆಗೆ ಒಂದು ಕೋಟಿ ಜನರಿಗೆ ಸೋಂಕು ಅಂಟಿರುವುದು ದೃಢಪಟ್ಟಿದೆ. ಈ ಹಿಂದಿನ ಕೆಲ ತಿಂಗಳುಗಳಿಗೆ ಹೋಲಿಸಿದರೆ ಸಾವು-ನೋವಿನ ಪ್ರಮಾಣದಲ್ಲಿ ಚೇತರಿಕೆ ಕಂಡುಬಂದಿದ್ದು, ಕೋವಿಡ್ ವಿರುದ್ಧದ ದೇಶದ ಹೋರಾಟಕ್ಕೆ ಸಫಲತೆ ದೊರೆಯುತ್ತಿದೆ.
![India's COVID 19 case tally crosses the 1 crore mark](https://etvbharatimages.akamaized.net/etvbharat/prod-images/9930959_sgh.jpg)
ಕಳೆದ 24 ಗಂಟೆಗಳಲ್ಲಿ 25,153 ಸೋಂಕಿತರು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 1,00,04,599ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 1,45,136ಕ್ಕೆ ಹೆಚ್ಚಳವಾಗಿದ್ದರೂ ಮರಣ ಪ್ರಮಾಣ ಶೇ.1.45ಕ್ಕೆ ಇಳಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ ಶೇ.95.46ರಷ್ಟು ಅಂದ್ರೆ 95,50,712 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಶೇ.3.09ರಷ್ಟು (3,08,751) ಕೇಸ್ಗಳು ಮಾತ್ರ ಸಕ್ರಿಯವಾಗಿವೆ. ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
![India's COVID 19 case tally crosses the 1 crore mark](https://etvbharatimages.akamaized.net/etvbharat/prod-images/9930959_stfts.jpg)
ಡಿಸೆಂಬರ್ 18ರವರೆಗೆ 16 ಕೋಟಿಗೂ ಹೆಚ್ಚು (16,00,90,514) ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ನಿನ್ನೆ ಒಂದೇ ದಿನ 11,71,868 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.