ETV Bharat / bharat

ಅಮೆರಿಕ ಚುನಾವಣೆ: ಕರ್ನಾಟಕ ಮೂಲದ ಮಿಲಿಯನೇರ್ ಅಮೆರಿಕ ಸಂಸತ್​​​​​​​ಗೆ ಆಯ್ಕೆ! - ಮಿಚಿಗನ್‌ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ಗೆ ಆಯ್ಕೆಯಾಗಿರುವ ಭಾರತೀಯ ಮೂಲದ ಅಮೆರಿಕನ್ ಉದ್ಯಮಿ ಮತ್ತು ಡೆಮೋಕ್ರಾಟಿಕ್ ಪಕ್ಷದ ಮಿಲಿಯನೇರ್ ಶ್ರೀ ಥಾನೇದಾರ್

ಮಿಚಿಗನ್‌ನಿಂದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ಗೆ ಆಯ್ಕೆಯಾಗಿರುವ ಭಾರತೀಯ ಮೂಲದ ಅಮೆರಿಕನ್ ಉದ್ಯಮಿ ಮತ್ತು ಡೆಮಾಕ್ರಟಿಕ್ ಪಕ್ಷದ ಮಿಲಿಯನೇರ್ ಶ್ರೀ ಥಾನೇದಾರ್ ಹುಟ್ಟಿ ಬೆಳೆದದ್ದು ಬೆಳಗಾವಿ ಜಿಲ್ಲೆಯಲ್ಲಿ.

sri thanedar
sri thanedar
author img

By

Published : Nov 6, 2020, 2:51 PM IST

ನ್ಯೂಯಾರ್ಕ್​: ಶೇ 93ರಷ್ಟು ಮತಗಳೊಂದಿಗೆ ಮಿಚಿಗನ್‌ನಿಂದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ಗೆ ಕರ್ನಾಟಕ ಮೂಲದ ಶ್ರೀ ಥಾನೇದಾರ್ ಆಯ್ಕೆ ಆಗಿದ್ದಾರೆ. ಅಮೆರಿಕನ್ ಉದ್ಯಮಿ ಆಗಿರುವ ಇವರು ಡೆಮಾಕ್ರಟಿಕ್​ ಪಕ್ಷದಿಂದ ಆಯ್ಕೆ ಆಗಿದ್ದಾರೆ. ಇವರು ಮೂಲತಃ ಬೆಳಗಾವಿಯವರಾಗಿದ್ದು, ಕರ್ನಾಟಕ ವಿವಿಯಲ್ಲಿ ಬಿ.ಎಸ್​ ಪದವಿ ಪಡೆದಿದ್ದರು ಎಂಬುದು ಗಮನಾರ್ಹ.

ವ್ಯಾಪಾರ ವೃತ್ತಿ:

65 ವರ್ಷದ ವಿಜ್ಞಾನಿ ಮತ್ತು ಉದ್ಯಮಿ ಥಾನೆದಾರ್ ದಾಖಲೆಯ $4,38,620 ಹಣವನ್ನ ಸಂಗ್ರಹಿಸಿದ್ದಾರೆ. ಎರಡು ವರ್ಷಗಳ ಹಿಂದೆ ಅವರ ಅಭಿಯಾನವು ‘ಶ್ರೀ ಫಾರ್ ವಿ’ ದೂರದರ್ಶನ ಜಾಹೀರಾತುಗಳ ಮೂಲಕ ಆರಂಭವಾಗಿತ್ತು. ಅವರು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ (1982-1984) ಪೋಸ್ಟ್-ಡಾಕ್ಟರೇಟ್ ವಿದ್ವಾಂಸರಾಗಿ, ನಂತರ ಪಾಲಿಮರ್ ಸಂಶ್ಲೇಷಣೆ ರಸಾಯನಶಾಸ್ತ್ರಜ್ಞರಾಗಿ ಮತ್ತು ಮಿಸ್ಸೌರಿಯ ಸೇಂಟ್ ಲೂಯಿಸ್‌ನಲ್ಲಿರುವ ಪೆಟ್ರೋಲೈಟ್ ಕಾರ್ಪೊರೇಶನ್‌ನಲ್ಲಿ ಯೋಜನಾ ನಾಯಕರಾಗಿ ಕೆಲಸ ಮಾಡಿದ್ದಾರೆ (1984-1990).

1990 ರಲ್ಲಿ, ಅವರು ಚೆಮಿರ್ ಎಂಬ ಮೂರು ಉದ್ಯೋಗಿಗಳ ಸೇವಾ ಕಂಪನಿಯನ್ನು ಖರೀದಿಸಿದ್ದರು. ಶ್ರೀ ಅವರ ಮಾಲೀಕತ್ವದಲ್ಲಿ, ಕಂಪನಿ ವಾರ್ಷಿಕ 1,50,000 ಡಾಲರ್​ ಆದಾಯ ಗಳಿಸಿತ್ತು. ಮೂರು ಉದ್ಯೋಗಿಗಳಿಂದ ಆರಂಭವಾದ ಕಂಪನಿ ಬಳಿಕ 400ಕ್ಕೂ ಹೆಚ್ಚು ಉದ್ಯೋಗಿಗಳನ್ನ ಹೊಂದಿತು. ತಮ್ಮ ವೃತ್ತಿಜೀವನದ ಅವಧಿಯಲ್ಲಿ ಶ್ರೀ ಎಂಟು ವಿಭಿನ್ನ ಕಂಪನಿಗಳನ್ನ ಖರೀದಿಸಿದ್ದರು. ಮತ್ತು ಹಲವು ಕಂಪನಿಗಳನ್ನ ಮಾರಾಟ ಮಾಡಿ ಲಾಭ ಗಳಿಸಿದ್ದರು. ನಷ್ಟದಲ್ಲಿರುವ ಕಂಪನಿಗಳನ್ನ ಖರೀದಿಸಿ ಲಾಭದಾಯಕವಾಗಿಸುವುದಲ್ಲಿ ಅವರು ಸಿದ್ಧ ಹಸ್ತರಾಗಿದ್ದಾರೆ.

ಶ್ರೀ ಥನೇದಾರ್ ಯಾರು?

ಶ್ರೀ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಜನಿಸಿದರು. ಶ್ರೀ ಅವರು ಪಿಎಚ್‌ಡಿ ಮಾಡಿದ್ದು, ಲೇಖಕರೂ ಹೌದು. ಮಿಚಿಗನ್​ನ ಮಾಜಿ ಡೆಮಾಕ್ರಟಿಕ್ ಅಭ್ಯರ್ಥಿ, ನಿವೃತ್ತ ಸಣ್ಣ ವ್ಯಾಪಾರ ಮಾಲೀಕ ಮತ್ತು ಪ್ರಸ್ತುತ ಮಿಚಿಗನ್‌ನ ನಿವಾಸಿಯಾಗಿದ್ದಾರೆ.

24ನೇ ವಯಸ್ಸಿನಲ್ಲಿ ಕರ್ನಾಟಕ ವಿವಿಯಿಂದ ರಸಾಯನಶಾಸ್ತ್ರದಲ್ಲಿ ಬಿ.ಎಸ್ ಪದವಿ ಮತ್ತು ಬಾಂಬೆ ವಿವಿಯಿಂದ ರಸಾಯನಶಾಸ್ತ್ರದಲ್ಲಿ ಎಂ.ಎಸ್. ಪದವಿ ಪಡೆದಿದ್ದಾರೆ.

ಶ್ರೀ 1979ರಲ್ಲಿ ಅಮೆರಿಕಾಗೆ ಹೋದಾಗ ಅವರಲ್ಲಿ ಒಂದು ಸಣ್ಣ ನೀಲಿ ಸೂಟ್‌ಕೇಸ್ ಮತ್ತು ಜೇಬಿನಲ್ಲಿ ಕೇವಲ 20 ಡಾಲರ್​ ಹಣವಿತ್ತಷ್ಟೇ. ಬಳಿಕ ಅಲ್ಲಿ ವಿವಿಧ ಉದ್ಯಮಗಳಲ್ಲಿ ತೊಡಗಿಕೊಂಡು, ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡಿ ಜೀವನದಲ್ಲಿ ಹಂತ ಹಂತವಾಗಿ ಯಶಸ್ಸು ಗಳಿಸಿದ್ದಾರೆ.

ಶ್ರೀ 1988ರಲ್ಲಿ ಯುನೈಟೆಡ್ ಸ್ಟೇಟ್ಸ್​ನ ಹೆಮ್ಮೆಯ ಪ್ರಜೆಯಾದ ಶ್ರೀ, ಅವರ ಯಶಸ್ಸಿಗೆ ತಮ್ಮದೇ ಆದ ವೈಯಕ್ತಿಕ ಸೂತ್ರವನ್ನು ಅಭಿವೃದ್ಧಿಪಡಿಸಿಕೊಂಡರು. 1982ರಲ್ಲಿ ಅಕ್ರಾನ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದುಕೊಂಡರು. 1982 - 1984ರಲ್ಲಿ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ವಾಂಸರಾಗಿದ್ದ ಶ್ರೀ ಅವರು ಬಳಿಕ ನೂರಾರು ಉದ್ಯೋಗಗಳನ್ನು ಸೃಷ್ಟಿಸುವ ಸಣ್ಣ ಉದ್ಯಮಗಳನ್ನು ನಿರ್ಮಿಸಬೇಕು ಎಂಬ ಕನಸು ಕಂಡಿದ್ದರು.

1990ರಲ್ಲಿ ಅವರು ಮೂರು ಉದ್ಯೋಗಿಗಳನ್ನು ಹೊಂದಿರುವ ಹಾಗೂ ನಷ್ಟ ಅನುಭವಿಸುತ್ತಿದ್ದ ಸಣ್ಣ ವ್ಯವಹಾರದ ಉದ್ಯಮವೊಂದನ್ನ ಖರೀದಿಸಿದರು. ಹೀಗೆ ಸಣ್ಣದಾದ ಉದ್ಯಮ ಖರೀದಿಸಿ ಔನ್ನತ್ಯಕ್ಕೆ ತೆಗೆದುಕೊಂಡು ಹೋದ ಅವರು, ಉದ್ಯೋಗಿಗಳ ಸಂಖ್ಯೆಯನ್ನ 3ರರಿಂದ 450ಕ್ಕೆ ಹೆಚ್ಚಿಸಿದರು. ಈ ಕಂಪನಿ, ಅಂತಾರಾಷ್ಟ್ರೀಯ ಖ್ಯಾತಿಯ ಔಷಧೀಯ ಮತ್ತು ರಾಸಾಯನಿಕ ಸಂಶೋಧನಾ ಸೇವೆಗಳ ಸಂಸ್ಥೆಯಾಗಿ ಬೆಳೆದು ನಿಲ್ಲುವಂತೆ ಮಾಡಿದರು.

ಇದಾದ ಬಳಿಕ 2010ರಲ್ಲಿ, ಶ್ರೀ ಮಿಚಿಗನ್‌ನಲ್ಲಿ ಒಂದು ಸಣ್ಣ ರಾಸಾಯನಿಕ ಮತ್ತು ಔಷಧೀಯ ಸಂಶೋಧನಾ ಸೇವೆಗಳ ಕಂಪನಿಯನ್ನು ಪ್ರಾರಂಭಿಸಿದರು. ಅದು 2016 ರಲ್ಲಿ ಸುಮಾರು 50 ಉದ್ಯೋಗಿಗಳನ್ನು ಹೊಂದಿದ ಕಂನಿಯಾಗಿ ಬೆಳೆಯಿತು. ಶ್ರೀ ಉದ್ಯೋಗ ಸೃಷ್ಟಿಕರ್ತರಾಗಿದ್ದು, ಯಶಸ್ವಿ ವ್ಯವಹಾರಗಳನ್ನು ಮುನ್ನಡೆಸುತ್ತಿದ್ದಾರೆ.

ರಾಜಕೀಯ ವೃತ್ತಿ:

2018 ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಬಳಿಕ ಶೀ ಥಾನೆದಾರ್ ಹೆಸರು ಮಿಚಿಗನ್​ನಲ್ಲಿ ಚಿರಪರಿಚಿತವಾಯಿತು. ಎರಡು ವರ್ಷಗಳ ಹಿಂದೆ ಅವರು "ಶ್ರೀ ಫಾರ್ ವಿ" ಅಭಿಯಾನ ಪ್ರಾರಂಭಿಸಿ ದೂರದರ್ಶನ ಜಾಹೀರಾತುಗಳನ್ನು ನೀಡಿದರು. ಥಾನೇದಾರ್ ಈ ಬಾರಿ ಚುನಾವಣೆಯಲ್ಲಿ ಒಟ್ಟು ಶೇಕಡಾ 93ರಷ್ಟು ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ.

ಕೊರೊನಾ ಪ್ರಾರಂಭವಾಗುವ ಮುಂಚೆಯೇ ಅವರು ಪ್ರಚಾರ ಪ್ರಾರಂಭಿಸಿದ ಶ್ರೀ, ಕೊರೊನಾ ಸಮಯದಲ್ಲಿ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್​​ಗಳನ್ನು ನೀಡುವ ಮೂಲಕ ಸಮಾಜಮುಖಿ ಕೆಲಸ ಆರಂಭಿಸಿದ್ದರು.

ಪ್ರಶಸ್ತಿಗಳು:

2017 - ಕಾರ್ಪ್ ಮ್ಯಾಗಜಿನ್ ಉದ್ಯಮಿ ಪ್ರಶಸ್ತಿ

2016 - ವರ್ಷದ ಉದ್ಯಮಿ

ಪುಸ್ತಕಗಳು:

ಥಾನೇದಾರ್​​ ಅವರು 2004ರಲ್ಲಿ ಮರಾಠಿ ಭಾಷೆಯಲ್ಲಿ ತಮ್ಮ ಆತ್ಮಚರಿತ್ರೆ ಸಹ ಬರೆದಿದ್ದಾರೆ. ಅಂದಿನಿಂದ ಈ ಪುಸ್ತಕವು 45 ಬಾರಿ ಮರು ಮುದ್ರಣಗೊಂಡಿದ್ದು, 5,00,000 ಕ್ಕಿಂತ ಹೆಚ್ಚು ಓದುಗರನ್ನು ಹೊಂದಿದೆ.

2008 ರಲ್ಲಿ, ಶ್ರೀ ಯುನೈಟೆಡ್ ಸ್ಟೇಟ್ಸ್​​ನಲ್ಲಿನ ಅನುಭವದ ಆಧಾರದ ಮೇಲೆ "ದಿ ಬ್ಲೂ ಸೂಟ್ಕೇಸ್: ಟ್ರಾಜಿಡಿ ಅಂಡ್ ಟ್ರಯಂಫ್ ಇನ್ ಎ ಇಮಿಗ್ರಂಟ್ಸ್ ಲೈಫ್" ಎಂಬ ಪುಸ್ತಕವನ್ನು ಪ್ರಕಟಿಸಿ ಜನ ಮನ್ನಣೆ ಗಳಿಸಿದ್ದಾರೆ.

ಥನೇದಾರ್ ಏನು ಹೇಳುತ್ತಾರೆ?

ರೋಗ, ನೀರಿನ ಸಮಸ್ಯೆ, ಅಪರಾಧ ಮತ್ತು ನಿರುದ್ಯೋಗ ಸೇರಿದಂತೆ ತನ್ನ ಜಿಲ್ಲೆಯನ್ನು ಬಾಧಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ನಾನು ಹೆಚ್ಚು ಇಷ್ಟಪಡುತ್ತೇನೆ ಅಂತಾರೆ ಥಾನೇದಾರ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.