ನವದೆಹಲಿ: ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ ಜಾಧವ್ ಅವರ ಭೇಟಿಗೆ ಪಾಕ್ ಅನುಮತಿ ನೀಡಿದ್ದು, ಈ ನಿಟ್ಟಿನಲ್ಲಿ ಭಾರತ ಸರ್ಕಾರ ಕಾರ್ಯಗತವಾಗಿದೆ.
ಪಾಕಿಸ್ತಾನದಲ್ಲಿರುವ ಭಾರತದ ಉಪ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಇಂದು ಕುಲಭೂಷಣ್ ಜಾಧವ್ರನ್ನು ಭೇಟಿ ಮಾಡಲಿದ್ದಾರೆ. ಈ ಭೇಟಿ ಅತ್ಯಂತ ಸೌಹಾರ್ದಯುತವಾಗಿ ನಡೆಯಲು ಪಾಕಿಸ್ತಾನ ಸೂಕ್ತ ವಾತಾವರಣ ಕಲ್ಪಿಸುವ ಆಶಾವಾದವನ್ನು ಮೂಲಗಳು ವ್ಯಕ್ತಪಡಿಸಿದೆ.
-
Pakistan: India's Deputy High Commissioner to Pakistan, Gaurav Ahluwalia has reached Ministry of Foreign Affairs, to meet #KulbhushanJadhav pic.twitter.com/PaW7CyRZKV
— ANI (@ANI) September 2, 2019 " class="align-text-top noRightClick twitterSection" data="
">Pakistan: India's Deputy High Commissioner to Pakistan, Gaurav Ahluwalia has reached Ministry of Foreign Affairs, to meet #KulbhushanJadhav pic.twitter.com/PaW7CyRZKV
— ANI (@ANI) September 2, 2019Pakistan: India's Deputy High Commissioner to Pakistan, Gaurav Ahluwalia has reached Ministry of Foreign Affairs, to meet #KulbhushanJadhav pic.twitter.com/PaW7CyRZKV
— ANI (@ANI) September 2, 2019
ಕುಲಭೂಷಣ್ ಜಾಧವ್ ಭೇಟಿಗೂ ಮುನ್ನ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೊಹಮ್ಮದ್ ಫೈಸಲ್ ಜೊತೆಗೆ ಮಾತುಕತೆ ಆರಂಭವಾಗಿದೆ. ಜಾಧವ್ ಕುರಿತು ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಪಾಕ್, ಜಾಧವ್ ಭೇಟಿಗೆ ಭಾರತೀಯ ಅಧಿಕಾರಿಗಳಿಗೆ ಅನುಮತಿ ನೀಡಿ ಮಾತುಕತೆ ನಡೆಸಲು ಗ್ರೀನ್ ಸಿಗ್ನಲ್ ಕೊಟ್ಟಿತ್ತು.
-
#UPDATE: The meeting between India's Deputy High Commissioner to Pakistan, Gaurav Ahluwalia and Ministry of Foreign Affairs's (MoFA) Mohammad Faisal, begins. https://t.co/rGPaOo2jYu
— ANI (@ANI) September 2, 2019 " class="align-text-top noRightClick twitterSection" data="
">#UPDATE: The meeting between India's Deputy High Commissioner to Pakistan, Gaurav Ahluwalia and Ministry of Foreign Affairs's (MoFA) Mohammad Faisal, begins. https://t.co/rGPaOo2jYu
— ANI (@ANI) September 2, 2019#UPDATE: The meeting between India's Deputy High Commissioner to Pakistan, Gaurav Ahluwalia and Ministry of Foreign Affairs's (MoFA) Mohammad Faisal, begins. https://t.co/rGPaOo2jYu
— ANI (@ANI) September 2, 2019
ಜಾಧವ್ ಅವರ ಭೇಟಿಗೆ ಭಾರತೀಯ ರಾಯಭಾರಿಗಳಿಗೆ ಅವಕಾಶ ನೀಡುತ್ತಿದ್ದೇವೆ. ವಿಯೆನ್ನಾ ಒಪ್ಪಂದ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಮಾನದಂತೆ ಹಾಗೂ ಪಾಕ್ ನ್ಯಾಯಾಂಗದ ಅನ್ವಯ ಅನುಮತಿ ನೀಡಲಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರ ಫೈಸಲ್ ಹೇಳಿದ್ದರು.