ನವದೆಹಲಿ: ಭಾರತೀಯ ನೌಕಾಪಡೆ ಮಂಗಳವಾರ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಯ ಹಡಗು ವಿರೋಧಿ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದೆ. ಈ ಕ್ಷಿಪಣಿ ಭಾರತೀಯ ನೌಕಾ ಪಡೆಯ ಬಲ ಹೆಚ್ಚಿಸಲಿದೆ.
-
#Indian Navy hones its combat readiness.#BrahMos AShM launched by #INSRanvijay strikes target ship at max range with pinpoint accuracy in Bay of Bengal. #CombatReady #Cohesive #Credible#AtmaNirbharBharat @SpokespersonMoD pic.twitter.com/Q5FWHZK48g
— SpokespersonNavy (@indiannavy) December 1, 2020 " class="align-text-top noRightClick twitterSection" data="
">#Indian Navy hones its combat readiness.#BrahMos AShM launched by #INSRanvijay strikes target ship at max range with pinpoint accuracy in Bay of Bengal. #CombatReady #Cohesive #Credible#AtmaNirbharBharat @SpokespersonMoD pic.twitter.com/Q5FWHZK48g
— SpokespersonNavy (@indiannavy) December 1, 2020#Indian Navy hones its combat readiness.#BrahMos AShM launched by #INSRanvijay strikes target ship at max range with pinpoint accuracy in Bay of Bengal. #CombatReady #Cohesive #Credible#AtmaNirbharBharat @SpokespersonMoD pic.twitter.com/Q5FWHZK48g
— SpokespersonNavy (@indiannavy) December 1, 2020
ಅಂಡಮಾನ್ ಮತ್ತು ನಿಕೋಬರ್ ದ್ವೀಪ ಪ್ರದೇಶದಲ್ಲಿ ಐಎನ್ಎಸ್ ರಣವಿಜಯ್ ಮೂಲಕ ಬ್ರಹ್ಮೋಸ್ ಕ್ಷಿಪಣಿಯನ್ನು ಪರೀಕ್ಷೆ ಮಾಡಲಾಗಿದೆ. ಇದೇ ವಾರದ ಆರಂಭದಲ್ಲಿ ಭೂಮಿಯ ಮೇಲಿನ ಗುರಿಯ ಮೇಲೆ ದಾಳಿ ಮಾಡುವ ಬ್ರಹ್ಮೋಸ್ ಆವೃತ್ತಿಯನ್ನು ಅಂಡಮಾನ್ ಮತ್ತು ನಿಕೋಬರ್ನಲ್ಲಿ ಭಾರತೀಯ ನೌಕಾಪಡೆ ಪರೀಕ್ಷೆ ನಡೆಸಿತ್ತು.
ಓದಿ: ಬ್ರಹ್ಮೋಸ್ಗೆ ಭಾರೀ ಬೇಡಿಕೆ: ರಕ್ಷಣಾತ್ಮಕ ಆವೃತ್ತಿಯನ್ನು ಮಾತ್ರ ಮಾರಾಟಕ್ಕಿಟ್ಟ ಭಾರತ!
ಈಗ ಹಡಗು ವಿರೋಧಿ ಕ್ಷಿಪಣಿಯನ್ನು ಭಾರತೀಯ ನೌಕಾಪಡೆ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್ಡಿಒ) ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಸುಮಾರು 400 ಕಿಲೋಮೀಟರ್ ದೂರ ಗುರಿಯನ್ನು ಯಶಸ್ವಿಯಾಗಿ ತಲುಪುವ ಸಾಮರ್ಥ್ಯ ಈ ಕ್ಷಿಪಣಿಗಿದೆ.