ಗೋವಾ/ಮುಂಬೈ: ಮಿಗ್-29ಕೆ ಯುದ್ಧ ವಿಮಾನ ಪತನದಿಂದ ಮೃತಪಟ್ಟಿದ್ದ ಪೈಲಟ್ ನಿಶಾಂತ್ ಸಿಂಗ್ ಅವರಿಗೆ ಇಂದು ಭಾರತೀಯ ನೌಕಾದಳದಿಂದ ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ತ್ರಿವರ್ಣ ಧ್ವಜ ಹಾಗೂ ಸಿಂಗ್ ಅವರ ಸೇನಾ ಸಮವಸ್ತ್ರವನ್ನು ಅವರ ಪತ್ನಿ ನಯಾಬ್ ರಂದಾವಾ ಅವರಿಗೆ ಕಮಾಂಡಿಂಗ್ ಅಧಿಕಾರಿಗಳಿಂದ ಹಸ್ತಾಂತರಿಸಿಸಲಾಯಿತು.
ನೌಕಾದಳದ ಅಧಿಕಾರಿಯ ಪುತ್ರನಾಗಿದ್ದ ನಿಶಾಂಕ್ ಕಿರಾನ್, ಹವಾಕ್ ಹಾಗೂ ಮಿಗ್-29ಕೆ ವಿಮಾನಗಳ ಹಾರಾಟದ ಮಾರ್ಗ ಸೂಚಕರಾಗಿ ನೌಕಾದಳಕ್ಕೆ ಆಯ್ಕೆಯಾಗಿದ್ದರು. ಭಾರತೀಯ ನೌಕಾದಳ ಓರ್ವ ದಕ್ಷ ಸಲಹೆಗಾರನನ್ನು ಕಳೆದುಕೊಂಡಿದೆ. ಸಿಂಗ್ ಅಮೆರಿಕ ನೌಕಾದಳಲ್ಲಿ ಅತ್ಯಾಧುನಿಕ ದಾಳಿಯ ತರಬೇತಿ ಪಡೆದಿದ್ದರು ಎಂದು ಸೇನೆ ಹೇಳಿದೆ.
ತೀವ್ರ ಶೋಧ ಕಾರ್ಯ ನಂತರ ನಾಪತ್ತೆಯಾಗಿದ್ದ ಮಿಗ್-29 ಕೆ ಪೈಲೆಟ್ ಕಮಾಂಡರ್ ನಿಶಾಂತ್ ಸಿಂಗ್ ಅವರ ಮೃತದೇಹವು ಗೋವಾ ಕರಾವಳಿಯಿಂದ 30 ಮೈಲಿ ದೂರ ಮತ್ತು ಸಮುದ್ರದ 70 ಮೀಟರ್ ಆಳದಲ್ಲಿ ಪತ್ತೆಯಾಗಿತ್ತು. ನವೆಂಬರ್ 26ರಂದು ಅಪಘಾತ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಪೈಲೆಟ್ ತನ್ನ ಸಹ ಪೈಲೆಟ್ ಜೊತೆಗೆ ಸಮುದ್ರಕ್ಕೆ ಹಾರಿದ್ದರೆನ್ನಲಾಗಿತ್ತು. ಈ ವೇಳೆ ಸಹ ಪೈಲೆಟ್ ಬದುಕುಳಿದಿದ್ದು, ಅವರನ್ನು ನೌಕಾಪಡೆ ರಕ್ಷಣೆ ಮಾಡಿತ್ತು. ಆದರೆ ನಿಶಾಂತ್ ಸಿಂಗ್ ಅವರ ಬಗ್ಗೆ ಯಾವುದೇ ಸುಳಿವು ದೊರೆತಿರಲಿಲ್ಲ.