ಮೇಲ್ (ಮಾಲ್ಡೀವ್ಸ್): 580 ಟನ್ ಅಗತ್ಯ ಆಹಾರ ಪದಾರ್ಥಗಳನ್ನು ಹೊತ್ತ ಭಾರತೀಯ ನೌಕಾ ಹಡಗು ಕೇಸರಿ ಮಂಗಳವಾರ ಮಾಲ್ಡೀವ್ಸ್‌ನ ಮೇಲ್ ಬಂದರಿಗೆ ತಲುಪಿದ್ದು, ಸರ್ಕಾರದ ಮಿಷನ್ ಸಾಗರ್ ಉಪಕ್ರಮದ ಮೊದಲ ತಾಣವಾಗಿದೆ.
ಕೊರೊನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ಹಡಗು ಮಾಲ್ಡೀವ್ಸ್ ಜನರಿಗೆ ಉಡುಗೊರೆಯಾಗಿ ಅಗತ್ಯ ವಸ್ತುಗಳನ್ನು ಭಾರತೀಯ ನೌಕಾಪಡೆಯ ಹಡಗಿನಿಂದ ಬಿಡುಗಡೆ ಮಾಡಲಾಗುವುದು. ಮಿಷನ್ ಸಾಗರ್ನ ನಿಮಿತ್ತ ದಕ್ಷಿಣ ಹಿಂದೂ ಮಹಾಸಾಗರದ ದೇಶಗಳಿಗೆ ಎರಡು ವೈದ್ಯಕೀಯ ನೆರವಿನ ತಂಡಗಳು, ಔಷಧಗಳು ಮತ್ತು ಅಗತ್ಯ ಆಹಾರ ಪದಾರ್ಥಗಳನ್ನು ಹೊತ್ತ ಐಎನ್‌ಎಸ್ ಕೇಸರಿಯನ್ನು ಭಾರತ ಭಾನುವಾರ ರವಾನಿಸಿದೆ.
ಮಾಲ್ಡೀವ್ಸ್, ಮಾರಿಷಸ್, ಮಡಗಾಸ್ಕರ್, ಕೊಮೊರೊಸ್ ಮತ್ತು ಸೀಶೆಲ್ಸ್ ಸೇರಿದಂತೆ ಇತರ ದೇಶಗಳು, ಕೋವಿಡ್-19 ಸಾಂಕ್ರಾಮಿಕ ರೋಗ ಎದುರಿಸಲು ಭಾರತದ ಸಹಾಯಕ್ಕಾಗಿ ಮೊರೆ ಇಟ್ಟಿದ್ದವು. ಇನ್ನು ವೈದ್ಯಕೀಯ ಸಹಾಯ ತಂಡಗಳನ್ನು ಮಾರಿಷಸ್ ಮತ್ತು ಕೊಮೊರೊಸ್‌ನಲ್ಲಿ ನಿಯೋಜಿಸಲಾಗುವುದು. ಕೋವಿಡ್-19 ತುರ್ತು ಮತ್ತು ಡೆಂಘಿ ಜ್ವರವನ್ನು ಎದುರಿಸಲು ತಮ್ಮ ಸರ್ಕಾರಗಳಿಗೆ ಸಹಾಯ ಮಾಡುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮಾಲ್ಡೀವ್ಸ್ ನಂತರ, ಮಾರಿಷಸ್, ಮಡಗಾಸ್ಕರ್, ಕೊಮೊರೊಸ್ ಮತ್ತು ಸೀಶೆಲ್ಸ್ಗೆ ಕೋವಿಡ್-19 ಸಂಬಂಧಿತ ಅಗತ್ಯ ಔಷಧಗಳನ್ನು ಸಹ ಹಡಗು ತಲುಪಿಸುತ್ತದೆ. ಇದಲ್ಲದೇ, ಮಾರಿಷಸ್‌ನ ವಿಷಯದಲ್ಲಿ, ಆಯುರ್ವೇದ ಔಷಧಗಳ ವಿಶೇಷ ರವಾನೆಯನ್ನೂ ಕಳುಹಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಮಡಗಾಸ್ಕರ್ ಮತ್ತು ಕೊಮೊರೊಸ್‌ಗೆ ಸಂಬಂಧಿಸಿದ ಸರಕುಗಳಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಸಹ ಸೇರಿವೆ, ಇವುಗಳನ್ನು ಈಗಾಗಲೇ ಮಾರಿಷಸ್, ಮಾಲ್ಡೀವ್ಸ್ ಮತ್ತು ಸೀಶೆಲ್‌ಗಳಿಗೆ ಕಳುಹಿಸಲಾಗಿದೆ.
ಈ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಮಾಲ್ಡೀವ್ ಸರ್ಕಾರದ ಸನ್ನದ್ಧತೆಯನ್ನು ಹೆಚ್ಚಿಸಲು ಆಯ್ದ ವೈದ್ಯಕೀಯ ಸಿಬ್ಬಂದಿಯ ತಂಡವನ್ನು ಮಾಲ್ಡೀವ್ಸ್‌ಗೆ ರವಾನಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.