ETV Bharat / bharat

ರಾಯಭಾರಿ ವಿರುದ್ಧ ಸರ್ಕಾರಿ ಹಣ ದುರುಪಯೋಗ ಆರೋಪ:  ಸ್ವದೇಶಕ್ಕೆ ವಾಪಸ್​ ಕರೆಯಿಸಿದ ಸರ್ಕಾರ - ಭಾರತದ ಆಸ್ಟ್ರಿಯಾ ರಾಯಭಾರಿ ರೇಣು ಪಾಲ್

ಸರ್ಕಾರಿ ಹಣದ ದುರುಪಯೋಗ ಹಾಗೂ ಹಣಕಾಸು ಅಕ್ರಮಗಳ ಆರೋಪದ ಮೇಲೆ ಆಸ್ಟ್ರಿಯಾದಲ್ಲಿರುವ ಭಾರತೀಯ ರಾಯಭಾರಿಯನ್ನು ಭಾರತಕ್ಕೆ ಮರಳಿ ಕರೆಸಲಾಗಿದೆ.

ಭಾರತದ ಆಸ್ಟ್ರಿಯಾ ರಾಯಭಾರಿ ರೇಣು ಪಾಲ್, Indian envoy to Austria Renu Pall
ಭಾರತದ ಆಸ್ಟ್ರಿಯಾ ರಾಯಭಾರಿ ರೇಣು ಪಾಲ್
author img

By

Published : Dec 30, 2019, 7:24 PM IST

ನವದೆಹಲಿ: ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಆಸ್ಟ್ರಿಯಾದಲ್ಲಿರುವ ಭಾರತೀಯ ರಾಯಭಾರಿಯನ್ನು ಭಾರತಕ್ಕೆ ಮರಳಿ ಕರೆಯಿಸಲಾಗಿದೆ.

1988ರ ಬ್ಯಾಚ್​ನಲ್ಲಿ ಅಸ್ಟ್ರಿಯಾ ದೇಶಕ್ಕೆ ರಾಯಭಾರಿಯಾಗಿ ನೇಮಕಗೊಂಡಿರುವ ರೇಣು ಪಾಲ್​, ವಿಯೆಟ್ನಾಂನಲ್ಲಿರುವ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಭಾರತದಿಂದ ಖಾಯಂ ಪ್ರತಿನಿಧಿಯಾಗಿದ್ದಾರೆ. ಸದ್ಯ ಸರ್ಕಾರಿ ಹಣವನ್ನು ದುರುಪಯೋಗ ಹಾಗೂ ಹಣಕಾಸು ಅಕ್ರಮಗಳ ಆರೋಪದ ಮೇಲೆ ಅವರನ್ನು ಮರಳಿ ಕರೆಸಲಾಗಿದೆ ಎಂದು ಮೂಲಗಳು ತಿಳಿಸಿದೆ.

ರೇಣು ಪಾಲ್, 2020 ರ ಜನವರಿಯಲ್ಲಿ ವಿಯೆಟ್ನಾಂನಲ್ಲಿ ತಮ್ಮ ರಾಯಾಭಾರಿ ಹುದ್ದೆ ಅವಧಿಯನ್ನು ಪೂರ್ಣಗೊಳಿಸಬೇಕಾಗಿತ್ತು. ಆದರೆ, ಡಿಸೆಂಬರ್ 30ರ ಸೋಮವಾರದೊಳಗಾಗಿ ದೆಹಲಿಯ ರಾಯಭಾರಿ ಪ್ರಧಾನ ಕಚೇರಿಗೆ ವರದಿ ಸಲ್ಲಿಸುವಂತೆ ಕೇಳಿಕೊಳ್ಳಲಾಗಿದೆ. ಕೇಂದ್ರ ಜಾಗೃತ ಆಯೋಗ(ಸಿವಿಸಿ)ದ ಸೂಚನೆಯ ಮೇರೆಗೆ ವಿದೇಶಾಂಗ ಇಲಾಖೆಯು ರೇಣು ಪಾಲ್​ ವಿರುದ್ಧ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಬಗ್ಗೆ ತನಿಖೆ ನಡೆಸಿ ತನ್ನ ವರದಿಯನ್ನು ಕೇಂದ್ರ ಜಾಗೃತ ಆಯೋಗಕ್ಕೆ ಸಲ್ಲಿಸಿದೆ.

ವಿದೇಶಾಂಗ ಇಲಾಖೆಯ ಮುಖ್ಯ ಜಾಗೃತ ಅಧಿಕಾರಿಯು ಹಣಕಾಸಿನ ಅಕ್ರಮ, ಹಣದ ದುರುಪಯೋಗ ಮತ್ತು ನಡವಳಿಕೆ ನಿಯಮಗಳ ಉಲ್ಲಂಘನೆ ಆಗಿರುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ತನಿಖಾ ಅಧಿಕಾರಿ ವಿಯೆನ್ನಾದಲ್ಲಿರುವ ರಾಯಭಾರ ಕಚೇರಿಗೆ ಭೇಟಿ ಮಾಹಿತಿ ಕಲೆ ಹಾಕಿದ್ದಾರೆ.

ಪಾಲ್ ವಿರುದ್ಧ ಗಂಭೀರ ಆರೋಪಗಳಿದ್ದು, ಮಾಸಿಕ 15 ಲಕ್ಷ ರೂಪಾಯಿಗಳ ಬಾಡಿಗೆ ಮನೆ ಬಳಕೆ, ಸಾರಿಗೆ ಸೌಕರ್ಯ, ವ್ಯಾಟ್ ಮರುಪಾವತಿಯಲ್ಲಿ ಮೋಸ, ಪ್ರಧಾನ ಕಚೇರಿಯಿಂದ ಕೋರಿದ ವಿವಿಧ ಅನುಮತಿಗಳಲ್ಲಿ ಸತ್ಯವನ್ನು ತಪ್ಪಾಗಿ ನಿರೂಪಿಸಿರುವುದು ಮತ್ತು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿರುವುದು ಸೇರಿವೆ ಎಂದು ಮೂಲಗಳು ತಿಳಿಸಿವೆ.

Please Translate it & publish it

Dear Colleagues

Please find a revised copy on Renu Pall a diplomat charged of corruption by MEA and has been asked to report to Delhi headquarters. Pall is an Ambassador for India in Austria.
Best

Bilal

Hi Bilalption
Please find a slightly updated copy on Renu Pall which can now be used.

Thanks

Smita

ETV Bharat Logo

Copyright © 2025 Ushodaya Enterprises Pvt. Ltd., All Rights Reserved.