ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ ಜಾಧವ್ ಅವರನ್ನ ಭಾರತದ ಉಪ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
-
Sources: Meeting between India's Deputy High Commissioner to Pakistan, Gaurav Ahluwalia & #KulbhushanJadhav concludes. https://t.co/mStdusiRHE
— ANI (@ANI) September 2, 2019 " class="align-text-top noRightClick twitterSection" data="
">Sources: Meeting between India's Deputy High Commissioner to Pakistan, Gaurav Ahluwalia & #KulbhushanJadhav concludes. https://t.co/mStdusiRHE
— ANI (@ANI) September 2, 2019Sources: Meeting between India's Deputy High Commissioner to Pakistan, Gaurav Ahluwalia & #KulbhushanJadhav concludes. https://t.co/mStdusiRHE
— ANI (@ANI) September 2, 2019
ಇಸ್ಲಾಮಾಬಾದ್ನ ಜೈಲಿಗೆ ಭೇಟಿ ನೀಡಿದ ಗೌರವ್ ಅಹ್ಲುವಾಲಿಯಾ ಸುಮಾರು 2 ಗಂಟೆ 25 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಕುಲಭೂಷಣ್ ಜಾಧವ್ ಭೇಟಿಗೂ ಮುನ್ನ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿ ಮೊಹ್ಮದ್ ಫೈಸಲ್ ಜೊತೆಗೆ ಚರ್ಚೆ ನಡೆಸಿದ್ದರು. ವಿಯೆನ್ನಾ ಒಪ್ಪಂದ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಮಾನದಂತೆ ಹಾಗೂ ಪಾಕ್ ನ್ಯಾಯಾಂಗದ ಅನ್ವಯ ಕುಲಭೂಷಣ್ ಜಾಧವ್ ಅವರನ್ನ ಭೇಟಿ ಮಾಡಲು ಭಾರತೀಯ ಅಧಿಕಾರಿಗಳಿಗೆ ಅನುಮತಿ ನೀಡಲಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರ ಫೈಸಲ್ ಹೇಳಿದ್ದರು.