ನ್ಯೂಯಾರ್ಕ್: ಭಾರತೀಯ ಕಾಲ್ ಸೆಂಟರ್ ಆಪರೇಟರ್ರಾದ ಹಿತೇಶ್ ಮಧುಭಾಯ್ ಪಟೇಲ್, ಬಹು ಮಿಲಿಯನ್ ಯುಎಸ್ ಡಾಲರ್ ವಂಚನೆ ಮಾಡಿರುವುದಾಗಿ ಯುಎಸ್ ನ್ಯಾಯಾಲಯದಲ್ಲಿ ಸಾಬೀತಾಗಿದೆ.
ಕಾಲ್ ಸೆಂಟರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಭಾರತೀಯ ಮತ್ತು ಅಮೆರಿಕ ನಾಗರಿಕರನ್ನು ವಂಚಿಸಿದ್ರು. 43 ವರ್ಷದ ಹಿತೇಶ್ ಮಧುಭಾಯ್ ಪಟೇಲ್ ಮಾಡಿರುವ ವಂಚನೆ ಟೆಕ್ಸಾಸ್ನ ಹೂಸ್ಟನ್ನಲ್ಲಿರುವ ಫೆಡರಲ್ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ 20 ವರ್ಷಗಳ ಕಾಲ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನ್ಯಾಧೀಶರಾದ ಡೇವಿಡ್ ಹಿಟ್ನರ್ ಈ ಶಿಕ್ಷೆ ಪ್ರಕಟಿಸಿದ್ದಾರೆ.
ಸುಮಾರು 25 ರಿಂದ 65 ದಶಲಕ್ಷ ಮಿಲಿಯನ್ ನಷ್ಟು ಮಧುಭಾಯ್ ಪಟೇಲ್ ಅಮೆರಿಕಾ ಸರ್ಕಾರಕ್ಕೆ ವಂಚಿಸಿದ್ದಾರೆ. ಇಂತಹ ವಂಚನೆಗಳು ವ್ಯಾಪಕವಾಗಿ ಹರಡುತ್ತಿದ್ದು, ಇದರಿಂದ ಭಾರತೀಯ ಉದ್ಯಮದ ಮೇಲೆ ಪರಿಣಾಮ ಕೂಡ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ
ಪಟೇಲ್ ಅವರನ್ನು ಸಿಂಗಾಪುರ ಅಧಿಕಾರಿಗಳು ಬಂಧಿಸಿ, ಬಳಿಕ ಅಮೆರಿಕಾಕ್ಕೆ ಹಸ್ತಾಂತರಿಸಿದ್ದರು. ಮನಿ ಲಾಂಡರಿಂಗ್, ಪಿತೂರಿ, ಫೆಡರಲ್ ಅಧಿಕಾರಿಯಂತೆ ನಟಿಸುವುದು ಮತ್ತು ಅಕ್ರಮ ಎಲೆಕ್ಟ್ರಾನಿಕ್ ಹಣ ವರ್ಗಾವಣೆ ಸೇರಿದಂತೆ ಹಲವು ಆರೋಪಗಳನ್ನು ಪಟೇಲ್ ಹೊತ್ತುಕೊಂಡಿದ್ದರು. ಈ ಆರೋಪಗಳನ್ನ ಆತ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವಕೀಲರು ಹೇಳಿದ್ದಾರೆ.