ETV Bharat / bharat

ಯುಎಸ್​ನಿಂದ 72,000 ರೈಫಲ್‌ ತರಿಸಿಕೊಳ್ಳಲು ಆದೇಶ ನೀಡಲಿರುವ ಭಾರತೀಯ ಸೇನೆ

ಭಾರತೀಯ ಸೇನೆಯು ತನ್ನ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಹೆಚ್ಚಿಸಲು ಮೊದಲ ಬಾರಿಗೆ ಸಿಗ್‌ಸೌರ್ ದಾಳಿ ರೈಫಲ್‌ಗಳನ್ನು ಪಡೆದಿತ್ತು. ಫಾಸ್ಟ್ ಟ್ರ್ಯಾಕ್ ಪ್ರೊಕ್ಯೂರ್‌ಮೆಂಟ್ (ಎಫ್‌ಟಿಪಿ) ಕಾರ್ಯಕ್ರಮದಡಿ ಭಾರತ ರೈಫಲ್‌ಗಳನ್ನು ಸ್ವಾಧೀನಪಡಿಸಿಕೊಂಡಿತ್ತು..

ಯುಎಸ್​ನಿಂದ 72,000 ರೈಫಲ್
ಯುಎಸ್​ನಿಂದ 72,000 ರೈಫಲ್
author img

By

Published : Jul 12, 2020, 9:03 PM IST

ನವದೆಹಲಿ : ಗಡಿ ವಿಚಾರದಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ವಿವಾದದ ಮಧ್ಯೆಯೇ ಭಾರತೀಯ ಸೇನೆ ಅಮೆರಿಕದಿಂದ 72,000 ಸಿಗ್716 ಆಕ್ರಮಣಕಾರಿ ರೈಫಲ್‌ಗಳನ್ನು ತರಿಸಿಕೊಳ್ಳಲು ಮತ್ತೊಂದು ಆದೇಶ ನೀಡಲಿದೆ.

ಆಕ್ರಮಣಕಾರಿ ರೈಫಲ್‌ಗಳ 2ನೇ ಆದೇಶವು ಮೊದಲ 72,000 ರೈಫಲ್‌ಗಳ ನಂತರ ಬರಲಿದೆ. ಈಗಾಗಲೇ ಉತ್ತರ ಕಮಾಂಡ್ ಮತ್ತು ಇತರ ಕಾರ್ಯಾಚರಣೆಯ ಪ್ರದೇಶಗಳಲ್ಲಿನ ಸೈನಿಕರ ಬಳಕೆಗಾಗಿ ಸೈನ್ಯಕ್ಕೆ ತಲುಪಿಸಲಾಗಿದೆ. "ಸಶಸ್ತ್ರ ಪಡೆಗಳಿಗೆ ನೀಡಲಾದ ಆರ್ಥಿಕ ಅಧಿಕಾರಗಳ ಅಡಿಯಲ್ಲಿ ಈ 72,000 ಹೆಚ್ಚಿನ ರೈಫಲ್‌ಗಳಿಗೆ ನಾವು ಆದೇಶ ನೀಡಲಿದ್ದೇವೆ" ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಭಾರತೀಯ ಸೇನೆಯು ತನ್ನ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಹೆಚ್ಚಿಸಲು ಮೊದಲ ಬಾರಿಗೆ ಸಿಗ್‌ಸೌರ್ ದಾಳಿ ರೈಫಲ್‌ಗಳನ್ನು ಪಡೆದಿತ್ತು. ಫಾಸ್ಟ್ ಟ್ರ್ಯಾಕ್ ಪ್ರೊಕ್ಯೂರ್‌ಮೆಂಟ್ (ಎಫ್‌ಟಿಪಿ) ಕಾರ್ಯಕ್ರಮದಡಿ ಭಾರತ ರೈಫಲ್‌ಗಳನ್ನು ಸ್ವಾಧೀನಪಡಿಸಿಕೊಂಡಿತ್ತು. ಹೊಸ ರೈಫಲ್‌ಗಳು ಅಸ್ತಿತ್ವದಲ್ಲಿರುವ ಇಂಡಿಯನ್ ಸ್ಮಾಲ್ ಆರ್ಮ್ಸ್ ಸಿಸ್ಟಮ್ (ಇನ್ಸಾಸ್) 5.56x45 ಎಂಎಂ ರೈಫಲ್‌ಗಳನ್ನು ಪಡೆಗಳು ಬಳಸುತ್ತವೆ ಮತ್ತು ಸ್ಥಳೀಯವಾಗಿ ಆರ್ಡ್‌ನೆನ್ಸ್ ಫ್ಯಾಕ್ಟರೀಸ್ ಬೋರ್ಡ್ ತಯಾರಿಸುತ್ತವೆ.

ಯೋಜನೆಯ ಪ್ರಕಾರ, ಸುಮಾರು 1.5 ಲಕ್ಷ ಆಮದು ಮಾಡಿದ ರೈಫಲ್‌ಗಳನ್ನು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಮತ್ತು ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಸೈನಿಕರು ಬಳಸುತ್ತಿದ್ದಾರೆ. ಉಳಿದ ಪಡೆಗಳಿಗೆ ಎಕೆ -203 ರೈಫಲ್‌ ಒದಗಿಸಲಾಗುವುದು. ಅಮೇಥಿ ಆರ್ಡನೆನ್ಸ್ ಕಾರ್ಖಾನೆಯಲ್ಲಿ ಭಾರತ ಮತ್ತು ರಷ್ಯಾ ಜಂಟಿಯಾಗಿ ಉತ್ಪಾದಿಸಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.