ETV Bharat / bharat

ಪಾಕ್​​ನಿಂದ ನಿಲ್ಲದ ಉಪಟಳ: ಗುಂಡಿನ ಚಕಮಕಿ ವೇಳೆ ಯೋಧ ಹುತಾತ್ಮ

author img

By

Published : Aug 17, 2019, 4:06 PM IST

Updated : Aug 17, 2019, 10:26 PM IST

ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಯ ಬಳಿ ಪಾಕ್ ಸೇನೆ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ. ಇವತ್ತು ಉಭಯ ದೇಶಗಳ ಸೈನಿಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಯೋಧ ಹುತಾತ್ಮನಾಗಿದ್ದಾನೆ.

ಲ್ಯಾನ್ಸ್​ ನಾಯಕ ಸಂದೀಪ್​​ ಥಾಪಾ

ಶ್ರೀನಗರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಪಾಕ್​ ಉಪಟಳ ನಿಲ್ಲುವ ಸೂಚನೆ ಕಾಣುತ್ತಿಲ್ಲ. ಕಳೆದೆರಡು ದಿನಗಳಿಂದ ನಿರಂತರವಾಗಿ ಗುಂಡಿನ ಕಾಳಗ ನಡೆಯುತ್ತಿದೆ. ಪರಿಣಾಮ ಭಾರತೀಯ ಸೇನೆಯ ಯೋಧ ಲ್ಯಾನ್ಸ್​ ನಾಯಕ ಸಂದೀಪ್​​ ಥಾಪಾ(35) ಹುತಾತ್ಮರಾಗಿದ್ದಾರೆ.

  • Army Sources: A Pakistani post opposite the RAJOURI sector (J&K) has been hit in action by Indian Army today. The exchange of fire between the two sides is still on after Pakistan violated ceasefire. One Indian Army soldier lost his life this morning in Pakistani firing pic.twitter.com/ws4rnRQndr

    — ANI (@ANI) August 17, 2019 " class="align-text-top noRightClick twitterSection" data=" ">

ಭಯೋತ್ಪಾದಕ ಶಿಬಿರಗಳ ಮೇಲೂ​ ಭಾರತೀಯ ಸೇನೆ ದಾಳಿ:
ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಕ್ಯಾಂಪ್​ಗಳ ಮೇಲೂ ಭಾರತೀಯ ಸೇನೆ ಬಾಂಬ್​ ದಾಳಿ ನಡೆಸಿದೆ. ಜೊತೆಗೆ ರಜೌರಿ ಪ್ರದೇಶದಲ್ಲಿನ ಉಗ್ರರ ಅನೇಕ ಅಡಗುದಾಣಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

  • Picture of Indian Army Lance Naik Sandeep Thapa who lost his life in ceasefire violation by Pakistan in NOWSHERA Sector, RAJOURI, #JammuAndKashmir, earlier today. 35-yr-old Sandeep Thapa belonged to Rajawala village of Dehradun, Uttarakhand, & is survived by his wife, Nisha Thapa pic.twitter.com/DRac8PkZqf

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ವಿಧಿ 370 ರದ್ದು ವಿಚಾರ ಮುಂದಿಟ್ಟುಕೊಂಡಿರುವ ಪಾಕ್​, ಅಂತಾರಾಷ್ಟ್ರೀಯ ಮಟ್ಟದಲ್ಲೂ ಮುಖಭಂಗಕ್ಕೊಳಗಾಗಿದೆ. ಈ ಬಳಿಕ ಗಡಿಯಲ್ಲಿ ಪಾಕ್ ಯೋಧರು ನಿರಂತರ ಗುಂಡಿನ ದಾಳಿ ನಡೆಸುತ್ತಿದ್ದಾರೆ.

Intro:Body:

ಪಾಕ್​​ನಿಂದ ನಿಲ್ಲದ ಉಪಟಳ... ಗುಂಡಿನ ಚಕಮಕಿಯಲ್ಲಿ ಲ್ಯಾನ್ಸ್​ ನಾಯಕ ಸಂದೀಪ್​ ಹುತಾತ್ಮ! 

ಶ್ರೀನಗರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಪಾಕ್​ ಉಪಟಳ ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದೆರಡು ದಿನಗಳಿಂದ ನಿರಂತರವಾಗಿ ಗುಂಡಿನ ಚಕಮಕಿ ನಡೆಯುತ್ತಿದೆ. ಇದರ ಮಧ್ಯೆ ಇಂಡಿಯನ್​ ಆರ್ಮಿಯ ಲ್ಯಾನ್ಸ್​ ನಾಯಕ ಸಂದೀಪ್​​ ಥಾಪಾ(35) ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. 

ಇಂದು ಬೆಳಗ್ಗೆ 6.30ಕ್ಕೆ ಜಮ್ಮು-ಕಾಶ್ಮೀರದ ನೌಶೇರಾ ಸೆಕ್ಟರ್​​ನಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಭಯೋತ್ಪಾದಕರಿಗೆ ತಿರುಗೇಟು ನೀಡುತ್ತಿದ್ದ ವೇಳೆ ಲ್ಯಾನ್ಸ್​ ನಾಯಕ ಗುಂಡು ತಗುಲಿ ಹುತಾತ್ಮರಾಗಿದ್ದಾರೆ. ಕಳೆದ 15 ವರ್ಷಗಳಿಂದ ಇಂಡಿಯನ್​​ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದೀಪ್​ ಮೂಲತ ಡೆಹ್ರಾಡೂನ್​​ದವರಾಗಿದ್ದು, ಗುಂಡಿನ ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಇವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾಗಿದ್ದಾರೆ.

ಸ್ವತಂತ್ರ್ಯೋತ್ಸವದ ದಿನವೂ ಪಾಕ್​ ರಜೌರಿ ಹಾಗೂ ಉರಿ ಸೆಕ್ಟರ್​​ನಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ನಿರಂತರವಾಗಿ ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಭಾರತೀಯ ಯೋಧರು, ಪಾಕ್​ನ ಐವರು ಯೋಧರನ್ನ ಹೊಡೆದುರುಳಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಪಾಕ್​ ಇದೀಗ ಮತ್ತೆ ತನ್ನ ನರಿ ಬುದ್ದಿ ಮುಂದುವರಿಸಿದೆ. ಇನ್ನು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಆರ್ಟಿಕಲ್​ 370 ರದ್ದು ವಿಚಾರವನ್ನೆ ದೊಡ್ಡದಾಗಿ ಮಾಡಿಕೊಂಡಿರುವ ಪಾಕ್​, ಅಂತಾರಾಷ್ಟ್ರೀಯ ಮಟ್ಟದಲ್ಲೂ ಈಗಾಗಲೇ ಮುಖಭಂಗಕ್ಕೊಳಗಾಗಿದೆ. 

ಪಾಕ್​ ಕ್ಯಾಂಪ್​​​ಗಳ ಮೇಲೆ ಭಾರತದ ದಾಳಿ

ಇನ್ನು ಭಾರತೀಯ ಯೋಧರು ಪಾಕಿಸ್ತಾನದ ಕ್ಯಾಂಪ್​ಗಳ ಮೇಲೆ ಬಾಂಬ್​ ದಾಳಿ ನಡೆಸಿದ್ದು, ರ ಜೌರಿ ಪ್ರದೇಶದಲ್ಲಿನ ಅನೇಕ ಪಾಕ್​ ಅಡಗುದಾಣಗಳ ಮೇಲೆ ಆಕ್ರಮಣ ಮಾಡಿದೆ. ಈ ವೇಳೆ ಉಭಯ ಸೈನಿಕರ ನಡುವೆ ಗುಂಡಿನ ದಾಳಿ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ. 

Conclusion:
Last Updated : Aug 17, 2019, 10:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.