ETV Bharat / bharat

'ಮೂರು ವಾರಗಳಲ್ಲಿ ಆರು ಬೆಟ್ಟದ ಪ್ರದೇಶಗಳು ಭಾರತೀಯ ಸೇನೆ ವಶಕ್ಕೆ'

ಚೀನಾ ಹಾಗೂ ಭಾರತ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಶಾಂತಗೊಳಿಸುವ ಪ್ರಕ್ರಿಯೆಗಳು ನಡೆಯುತ್ತಿರುವ ಬೆನ್ನಲ್ಲೇ ಭಾರತೀಯ ಸೇನೆ ಎಲ್‌ಎಸಿ ಬಳಿಯ ಆರು ಬೆಟ್ಟ ಪ್ರದೇಶಗಳನ್ನು ವಶಕ್ಕೆ ಪಡೆದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

indo- china border issue
ಭಾರತ- ಚೀನಾ ಗಡಿ ವಿವಾದ
author img

By

Published : Sep 20, 2020, 4:38 PM IST

ನವದೆಹಲಿ: ಕಳೆದ ಮೂರು ವಾರಗಳಲ್ಲಿ ಭಾರತೀಯ ಸೇನೆ ಪೂರ್ವ ಲಡಾಖ್​ನ ಎಲ್‌ಎಸಿ ಬಳಿಯ ಆರು ಬೆಟ್ಟ ಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಆಗಸ್ಟ್ 29 ಮತ್ತು ಸೆಪ್ಟೆಂಬರ್ ಎರಡನೇ ವಾರದ ನಡುವೆ ಭಾರತೀಯ ಸೇನೆಯು ಮಾಗರ್ ಬೆಟ್ಟ, ಗುರುಂಗ್ ಹಿಲ್, ರೆಚೆನ್ ಲಾ, ರೆಜಾಂಗ್ ಲಾ, ಮೊಖ್ಪಾರಿ ಮತ್ತು ಫಿಂಗರ್ 4 ಬಳಿಯ ಪ್ರದೇಶಗಳನ್ನು ವಶಕ್ಕೆ ಪಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಈ ಮೊದಲು ಚೀನಾ ಸೇನೆ ಎತ್ತರದ ಪ್ರದೇಶಗಳನ್ನು ಆಯ್ದುಕೊಂಡು ಅಲ್ಲಿಂದ ಭಾರತೀಯ ಸೇನೆಯ ಮೇಲೆ ಕಣ್ಣಿಟ್ಟಿತ್ತು. ಈಗ ಅಂತಹ ಪ್ರದೇಶಗಳಲ್ಲಿ ಒಂದನ್ನು ಭಾರತೀಯ ಸೇನೆ ತನ್ನ ವಶವಾಗಿಸಿಕೊಂಡಿದೆ. ಇದರಿಂದಾಗೀ ಚೀನಾ ಸೇನೆಯ ಮೇಲೆ ನಿಗಾವಹಿಸಲು ಭಾರತೀಯ ಸೇನೆಗೆ ಸಹಕಾರಿಯಾಗಿದೆ.

ಈಗ ಸದ್ಯಕ್ಕೆ ಭಾರತ ವಶಕ್ಕೆ ಪಡೆದಿರುವ ಪ್ರದೇಶಗಳು ಎಲ್​ಎಸಿಯಿಂದ ಒಳಗೆ ಭಾರತದ ಗಡಿಯೊಳಗಿವೆ. ಈ ಹಿಂದೆ ಆಕ್ರಮಿಸಿಕೊಂಡಿದ್ದ ಬ್ಲ್ಯಾಕ್ ಟಾಪ್ ಹಾಗೂ ಹೆಲ್ಮೆಟ್ ಟಾಪ್​ಗಳು ಎಲ್​ಎಸಿ ಗಡಿಯಾಚೆಗಿನ ಚೀನಾದ ಭಾಗದಲ್ಲಿವೆ ಎಂದು ಮೂಲಗಳು ಸ್ಪಷ್ಟನೆ ನೀಡಿವೆ.

ಭಾರತೀಯ ಸೇನೆ ಈ ಕಾರ್ಯಾಚರಣೆಯನ್ನು ಪೂರ್ಣಗೊಳಿಸುತ್ತಿದ್ದಂತೆ ಚೀನಾ ಸೇನೆ ಸುಮಾರು 3 ಸಾವಿರಕ್ಕೂ ಹೆಚ್ಚು ಸೈನಿಕರನ್ನು ರೆಜಾಂಗ್ ಲಾ ಹಾಗೂ ರೆಚೆನ್ ಲಾ ಬಳಿ ನಿಯೋಜಿಸಿದೆ. ಕೆಲವು ವಾರಗಳಿಂದ ಈ ಸ್ಥಳದಲ್ಲಿ ಚೀನಾ ತನ್ನ ಸೇನೆಯನ್ನು ನಿಯೋಜಿಸುತ್ತಿದೆ.

ಮತ್ತೊಂದೆಡೆ ಚೀನಾ ಹಾಗೂ ಭಾರತದ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಶಾಂತಗೊಳಿಸುವ ಪ್ರಕ್ರಿಯೆಗಳು ಸಹ ನಡೆಯುತ್ತಿವೆ. ಈ ಕಾರ್ಯಕ್ಕೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ನಿಗಾ ವಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.