ETV Bharat / bharat

ಭಾರತ್ ಡ್ರೋನ್‌: ದೇಶದ ಗಡಿ ಪ್ರವೇಶಿಸಿದ ಹೊಸ ಸೈನಿಕ - ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ

ಪೂರ್ವ ಲಡಾಖ್ ಪ್ರದೇಶದಲ್ಲಿ ನಡೆಯುತ್ತಿರುವ ವಿವಾದದಲ್ಲಿ ನಿಖರವಾದ ಕಣ್ಗಾವಲಿಗಾಗಿ ಭಾರತೀಯ ಸೈನ್ಯಕ್ಕೆ ಡ್ರೋನ್‌ಗಳ ಅಗತ್ಯವಿದೆ. ಈ ಅವಶ್ಯಕತೆಗಾಗಿ ಡಿಆರ್‌ಡಿಒ ಭಾರತ್ ಡ್ರೋನ್‌ಗಳನ್ನು ಒದಗಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಭಾರತ್ ಡ್ರೋನ್‌ಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಚಂಡೀಗಢ ಮೂಲದ ಪ್ರಯೋಗಾಲಯ ಅಭಿವೃದ್ಧಿಪಡಿಸಿದೆ.

'ಭಾರತ್' ಡ್ರೋನ್‌
'ಭಾರತ್' ಡ್ರೋನ್‌
author img

By

Published : Jul 21, 2020, 6:12 PM IST

ನವದೆಹಲಿ: ಚೀನಾದೊಂದಿಗೆ ನಡೆಯುತ್ತಿರುವ ಗಡಿ ಉದ್ವಿಗ್ನತೆಯ ಮಧ್ಯೆ, ಪೂರ್ವ ಲಡಾಖ್​ನ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಎತ್ತರದ ಪ್ರದೇಶಗಳು ಮತ್ತು ಪರ್ವತ ಪ್ರದೇಶಗಳಲ್ಲಿ ನಿಖರ ಕಣ್ಗಾವಲು ನಡೆಸಲು ಡಿಆರ್‌ಡಿಒ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ‘ಭಾರತ್’ ಹೆಸರಿನ ಡ್ರೋನ್ ಅನ್ನು ಭಾರತೀಯ ಸೇನೆಗೆ ಒದಗಿಸಿದೆ.

ಪೂರ್ವ ಲಡಾಖ್ ಪ್ರದೇಶದಲ್ಲಿ ನಡೆಯುತ್ತಿರುವ ವಿವಾದದಲ್ಲಿ ನಿಖರವಾದ ಕಣ್ಗಾವಲಿಗಾಗಿ ಭಾರತೀಯ ಸೈನ್ಯಕ್ಕೆ ಡ್ರೋನ್‌ಗಳ ಅಗತ್ಯವಿದೆ. ಈ ಅವಶ್ಯಕತೆಗಾಗಿ ಡಿಆರ್‌ಡಿಒ ಭಾರತ್ ಡ್ರೋನ್‌ಗಳನ್ನು ಒದಗಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಭಾರತ್ ಡ್ರೋನ್‌ಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಚಂಡೀಗಢ ಮೂಲದ ಪ್ರಯೋಗಾಲಯ ಅಭಿವೃದ್ಧಿಪಡಿಸಿದೆ.

ಡಿಆರ್‌ಡಿಒ ಮೂಲಗಳು, ಸಣ್ಣ ಮತ್ತು ಶಕ್ತಿಯುತ ಡ್ರೋನ್ ಯಾವುದೇ ಸ್ಥಳದಲ್ಲಿ ಹೆಚ್ಚು ನಿಖರತೆಯೊಂದಿಗೆ ಸ್ವಾಯತ್ತವಾಗಿ ಕಾರ್ಯನಿರ್ವಹಿಸುತ್ತದೆ. ಮುಂಗಡ ಬಿಡುಗಡೆ ತಂತ್ರಜ್ಞಾನದೊಂದಿಗೆ ಯುನಿಬೊಡಿ ಬಯೋಮಿಮೆಟಿಕ್ ವಿನ್ಯಾಸ ಹೊಂದಿರುವ ಸಂಯೋಜನೆಯಾಗಿದೆ ಎಂದು ಹೇಳಿವೆ.

ಸ್ನೇಹಿತರು ಮತ್ತು ವೈರಿಗಳನ್ನು ಪತ್ತೆ ಹಚ್ಚಲು ಡ್ರೋನ್ ಕೃತಕ ಬುದ್ಧಿಮತ್ತೆಯನ್ನು ಹೊಂದಿದ್ದು, ಅದಕ್ಕೆ ತಕ್ಕಂತೆ ಕ್ರಮ ತೆಗೆದುಕೊಳ್ಳಬಹುದು. ತೀವ್ರ ಶೀತ ಹವಾಮಾನದಲ್ಲಿ ಡ್ರೋನ್ ಬದುಕುಳಿಯುವ ಸಾಮರ್ಥ್ಯವನ್ನು ಹೊಂದಿದೆ. ಕಠಿಣ ಹವಾಮಾನಕ್ಕಾಗಿ ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ.

ಡ್ರೋನ್ ಸಂಪೂರ್ಣ ಕಾರ್ಯಾಚರಣೆಯ ಸಮಯದಲ್ಲಿ ನೈಜ-ಸಮಯದ ವಿಡಿಯೋ ಪ್ರಸರಣವನ್ನು ಒದಗಿಸುತ್ತದೆ. ರಾತ್ರಿ ವೇಳೆ ಕಾರ್ಯಾಚರಣೆ ನಡೆಸಲು ಅತ್ಯಂತ ಸುಧಾರಿತ ದೃಷ್ಟಿ ಸಾಮರ್ಥ್ಯವನ್ನು ಹೊಂದಿದೆ. ಇದು ಆಳವಾದ ಕಾಡುಗಳಲ್ಲಿ ಅಡಗಿರುವ ಮನುಷ್ಯರನ್ನು ಪತ್ತೆ ಮಾಡುತ್ತದೆ. ಸಮೂಹ ಕಾರ್ಯಾಚರಣೆಯಲ್ಲಿ ಕಾರ್ಯನಿರ್ವಹಿಸಬಲ್ಲದ್ದರಿಂದ ಇದು ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದೆ. ರೇಡಾರ್‌ನಿಂದ ಪತ್ತೆಹಚ್ಚಲು ಅಸಾಧ್ಯವಾಗುವ ರೀತಿಯಲ್ಲಿ ಡ್ರೋನ್ ಅನ್ನು ನಿರ್ಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.