ETV Bharat / bharat

ಕೊರೊನಾ ಸೋಂಕಿತರ ಸ್ಥಳಾಂತರಕ್ಕೆ ಭಾರತೀಯ ವಾಯುಪಡೆಯಿಂದ ನೂತನ ವ್ಯವಸ್ಥೆ

ಕೊರೊನಾ ವೈರಸ್​ನಂತಹ ಸಾಂಕ್ರಾಮಿಕ ರೋಗಗಳಿಗೆ ತುತ್ತಾದವರು ಜನಸಂಪರ್ಕ ಸಾಧ್ಯವಾಗದ ಹಾಗೂ ಅತಿ ದೂರದ ಪ್ರದೇಶಗಳಲ್ಲಿ ಇದ್ದರೆ ಅಂತವರನ್ನು ಸ್ಥಳಾಂತರ ಮಾಡಲು ಭಾರತೀಯ ವಾಯುಪಡೆಯು ನೂತನ ರಕ್ಷಣಾ ಪಾಡ್​ ಸಿದ್ಧಪಡಿಸಿದೆ.

author img

By

Published : Jun 9, 2020, 4:00 AM IST

Updated : Jun 9, 2020, 5:11 AM IST

ಕೊರೊನಾ ಸೋಂಕಿತರ ಸ್ಥಳಾಂತರಕ್ಕೆ ಭಾರತೀಯ ವಾಯುಪಡೆಯಿಂದ ನೂತನ ವ್ಯವಸ್ಥೆ
ಕೊರೊನಾ ಸೋಂಕಿತರ ಸ್ಥಳಾಂತರಕ್ಕೆ ಭಾರತೀಯ ವಾಯುಪಡೆಯಿಂದ ನೂತನ ವ್ಯವಸ್ಥೆ

ನವದೆಹಲಿ: ಅತಿ ದೂರದ, ಜನಸಂಪರ್ಕ ಸಾಧ್ಯವಾಗದ ಪ್ರದೇಶಗಳಲ್ಲಿ ಕೊರೊನಾ ವೈರಸ್​ನಂತಹ ಸಾಂಕ್ರಾಮಿಕ ರೋಗಗಳಿಗೆ ತುತ್ತಾದವರು ಇದ್ದರೆ ಅಂತವರನ್ನು ಸ್ಥಳಾಂತರಕ್ಕೆ ಭಾರತೀಯ ವಾಯುಪಡೆಯು 'ಅರ್ಪಿತ್'​ (Airborne Rescue Pod for Isolated Transportation) ಎಂಬ ಪಾಡ್​ ಸಿದ್ಧಪಡಿಸಿದೆ.

  • Indian Air Force has designed, developed & inducted an indigenous Airborne Rescue POD for Isolated Transportation (ARPIT). This will be utilised for evacuation of critical patients with infectious diseases including #COVID-19 from high altitude area, isolated and remote places. pic.twitter.com/vMWgTkfQ1D

    — Indian Air Force (@IAF_MCC) June 8, 2020 " class="align-text-top noRightClick twitterSection" data=" ">

'ಅರ್ಪಿತ್'ನ್ನು ವಾಯುಪಡೆಯು ದೇಶೀಯವಾಗಿ ವಿನ್ಯಾಸಗೊಳಿಸಿದ್ದು, ಅದನ್ನು ವಿಮಾನ ಹಾಗೂ ಹೆಲಿಕಾಪ್ಟರ್‌ನಲ್ಲಿ ಪ್ರತ್ಯೇಕವಾಗಿ ಅಳವಡಿಕೆ ಮಾಡಬಹುದಾಗಿದೆ. ಕೊರೊನಾದಂತಹ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವಲ್ಲಿ ಅರ್ಪಿತ್ ಬಹಳ ಸಹಕಾರಿಯಾಗಲಿದೆ. ವಾಯುಯಾನ ಪ್ರಮಾಣೀಕೃತ ವಸ್ತುವಿನಿಂದ ಸಿದ್ಧಗೊಂಡ ಹಗುರವಾದ ಐಸೋಲೇಸನ್​ ವ್ಯವಸ್ಥೆಯನ್ನು ಹೊಂದಿದ್ದು, ಸದ್ಯ ಇರುವುದಕ್ಕಿಂತ ಹೆಚ್ಚು ವಿಶಾಲವಾಗಿ ಹಾಗೂ ರೋಗಿಗಳ ಗೋಚರತೆಗಾಗಿ ಪಾರದರ್ಶಕತೆ ಇರುವಂತೆ ಅರ್ಪಿತ್ ರೂಪುಗೊಂಡಿದೆ.

  • Supporting the “Atmanirbhar Bharat” call by Hon’ble PM, only indigenous materials have been used to fabricate this pod. This indigenously designed system has been developed at a cost of Rs60,000 only, which is very less as compared to the imported systems costing up to Rs 60 Lakh pic.twitter.com/qM27KyAWqI

ಅರ್ಪಿತ್​​ನ್ನು ದೇಶೀಯವಾಗಿ 60 ಸಾವಿರ ರೂ. ವೆಚ್ಚದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದೇ ಮಾದರಿಯ ಆಮದು ಉಪಕರಣಗಳಿಗೂ ಕೂಡ 60 ಲಕ್ಷ ರೂ. ವೆಚ್ಚ ತಗಲುತ್ತದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

  • Design requirements are based on the guidelines issued by @MoHFW_INDIA, National Accreditation Board for Hospitals & Healthcare Providers (NABH) & Centre for Disease Control (CDC), USA. The IAF is inducting a total of 7 ARPITS as of now.
    Read More on https://t.co/yUXMuzCZno pic.twitter.com/kDDJIGQByA

ವಾಯು ಮಾರ್ಗದ ಮೂಲಕ ಸೋಂಕಿತ (ರೋಗಿ)ನನ್ನು ಸಾಗಿಸುವಾಗ ವಾಯುಪಡೆ ಸಿಬ್ಬಂದಿ, ಭೂಸೇನಾ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ವೈರಸ್​​ ತಗುಲುವುದನ್ನು ತಡೆಯಬಹುದಾಗಿದೆ. ಅಲ್ಲದೆ ಎತ್ತರದ ಪ್ರದೇಶ, ದೂರ ಮತ್ತು ಜನಸಂಪರ್ಕ ಅಸಾಧ್ಯವಾದ ಸ್ಥಳಗಳಲ್ಲಿರುವ ರೋಗಿಗಳನ್ನು ಸ್ಥಳಾಂತರಿಸಲು ಅರ್ಪಿತ್ ನೆರವಾಗಲಿದೆ.

Last Updated : Jun 9, 2020, 5:11 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.