ETV Bharat / bharat

ನಾಲ್ಕನೇ ಟಿ-20 ಪಂದ್ಯವೂ ಡ್ರಾ... ಸೂಪರ್​ ಓವರ್​​ನಲ್ಲಿ ಯಾರಿಗೆ ಗೆಲುವು!? - newzland

ಸತತ ಮೂರು ಟಿ-20 ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ನ್ಯೂಜಿಲೆಂಡ್​ ಪಡೆ ನಾಲ್ಕನೇ ಪಂದ್ಯದಲ್ಲಿ ಗೆಲುವಿನ ನಗೆ ಕಾಣುವ ಉತ್ಸಾಹದಲ್ಲಿ ಎಡವಿದ್ದು, ಇದೀಗ ಸೂಪರ್​ ಓವರ್​ ನಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.

team india
ಟೀಂ ಇಂಡಿಯಾ
author img

By

Published : Jan 31, 2020, 4:27 PM IST

ಸ್ಕೈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ- ನ್ಯೂಜಿಲ್ಯಾಂಡ್​​ ನಡುವಣ ನಾಲ್ಕನೇ ಟಿ-20 ಪಂದ್ಯವೂ ಟೈ ಆಗಿದೆ. ಭಾರತ 20 ಓವರ್​ನಲ್ಲಿ 165 ರನ್ ಗಳಿಸಿದರೆ, ನ್ಯೂಜಿಲ್ಯಾಂಡ್​​ ಕೂಡ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಟೀಂ ಇಂಡಿಯಾ ಕೆಲವೊಂದು ಬದಲಾವಣೆಗಳೊಂದಿಗೆ ಕಣಕ್ಕಿಳಿದಿತ್ತು. ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಸ್ಥಾನದಲ್ಲಿ ಅವಕಾಶ ಪಡೆದ ಸಂಜು ಸ್ಯಾಮ್ಸನ್​​ ಕೇವಲ 8ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದ್ರು. ಇದಾದ ಬಳಿಕ ಬಂದ ಕ್ಯಾಪ್ಟನ್​ ಕೊಹ್ಲಿ ಕೂಡ 11ರನ್​​, ಅಯ್ಯರ್​​ 1ರನ್​​, ಶಿವಂ ದುಬೆ 12ರನ್​ಗಳಿಸಿ ವಿಕೆಟ್​​ ಒಪ್ಪಿಸಿದರು. 10 ಓವರ್​​ಗಳಲ್ಲಿ 6ವಿಕೆಟ್​​ ಕಳೆದುಕೊಂಡು 88ರನ್​​ಗಳಿಸಿದ್ದ ವೇಳೆ 39ರನ್​ಗಳಿಕೆ ಮಾಡಿದ್ದ ರಾಹುಲ್​ ಕೂಡ ವಿಕೆಟ್​​ ಒಪ್ಪಿಸಿದರು. ತಂಡಕ್ಕೆ ಮನೀಷ್​ ಪಾಂಡೆ ಹಾಗೂ ಶಾರ್ದೂಲ್​ ಠಾಕೂರ್​ ತಂಡಕ್ಕೆ ಆಸರೆಯಾದರು. ಈ ಜೋಡಿ ತಂಡದ ಮೊತ್ತ 130ರ ಗಡಿ ದಾಟುವಂತೆ ಮಾಡಿದರು. ಕೊನೆಯದಾಗಿ ತಂಡ 165ರನ್​ಗಳಿಕೆ ಮಾಡಿದ್ದು, ನ್ಯೂಜಿಲ್ಯಾಂಡ್​​​​​ಗೆ 166ರನ್​ ಟಾರ್ಗೆಟ್​ ನೀಡ್ತು.

ನ್ಯೂಜಿಲ್ಯಾಂಡ್​ ಕೂಡ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿದೆ.ಅಂತಿಮ ಹಂತದಲ್ಲಿ ಅರ್ಧಶತಕ ಸಿಡಿಸಿದ್ದ ಸೀಫರ್ಟ್​ ಕೂಡ ಔಟ್ ಆಗುವ ಮೂಲಕ ಕಿವೀಸ್​ಗೆ ಆಘಾತ ನೀಡಿದರು. ಕೊನೆಯ ಎಸೆತದಲ್ಲಿ ನ್ಯೂಜಿಲ್ಯಾಂಡ್​​ ಗೆಲುವಿಗೆ 2 ರನ್​ಗಳ ಅವಶ್ಯಕತೆಯಿತ್ತು. ಆದರೆ, ಒಂದೇ ರನ್​ಗಳಿಕೆ ಮಾಡಿದ್ದರಿಂದ ಪಂದ್ಯ ಡ್ರಾ ಆಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.