ಹೈದರಾಬಾದ್: ಟ್ರಂಪ್ ಭಾರತಕ್ಕೆ ಕಾಲಿಡಲು ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಟ್ರಂಪ್ ಭೇಟಿ ಕೇವಲ ಕುಶಲೋಪರಿಗೆ ಸೀಮಿತವಾಗದೆ ಹಲವು ಒಪ್ಪಂದಗಳಿಗೆ ಎರಡೂ ರಾಷ್ಟ್ರಗಳು ಸಹಿ ಹಾಕಲಿವೆ. ಅದರಲ್ಲೂ ಪ್ರಮುಖವಾಗಿ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಳ್ಳುವ ಸಾಧ್ಯತೆಯಿದೆ.
2.6 ಶತಕೋಟಿ ಡಾಲರ್ ವೆಚ್ಚದಲ್ಲಿ ಅಮೆರಿಕದ ರಕ್ಷಣಾ ಪಡೆಯಿಂದ ಹೆಲಿಕಾಪ್ಟರ್‌ಗಳನ್ನು ಭಾರತ ಖರೀದಿ ಮಾಡಲು ಮುಂದಾಗಿದೆ. ಸರ್ಕಾರ ಮತ್ತು ಕೈಗಾರಿಕಾ ಮೂಲಗಳ ಪ್ರಕಾರ ಎರಡೂ ಕಡೆಯಿಂದ 2.6 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ. ಅಮೆರಿಕ 24 ಮಲ್ಟಿ-ರೋಲ್ ಎಂಹೆಚ್ -60 ಆರ್ ಸೀಹಾಕ್ ಕಡಲ ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಪೂರೈಕೆ ಮಾಡಲಿದೆ.
ಕಳೆದ ವರ್ಷ ಏಪ್ರಿಲ್‌ನಲ್ಲೇ ಸೀಹಾಕ್ ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಅನುಮೋದನೆ ನೀಡಿದೆ. ಈ ಹೆಲಿಕಾಪ್ಟರ್‌ಗಳು ಭಾರತೀಯ ಯುದ್ಧ ಕಾರ್ಯಾಚರಣೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಅಲ್ಲದೆ, ಜಲಾಂತರ್ಗಾಮಿಗಳನ್ನು ಪತ್ತೆಹಚ್ಚುವ ಹಾಗೆ ಈ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ.
ವಾಯು ರಕ್ಷಣಾ ಶಸ್ತ್ರಾಸ್ತ್ರವನ್ನು ಭಾರತಕ್ಕೆ ಮಾರಾಟ ಮಾಡುವ ನಿರ್ಧಾರಕ್ಕೆ ಟ್ರಂಪ್ ಅಮೆರಿಕ ಕಾಂಗ್ರೆಸ್ ಕೂಡ ಅನುಮೋದನೆ ನೀಡಿದೆ. ಕಳೆದ ಆರು ವರ್ಷಗಳಿಂದ ಭಾರತ ಮತ್ತು ಯುಎಸ್ ನಡುವಿನ ರಕ್ಷಣಾ ಮತ್ತು ಭದ್ರತಾ ಸಂಬಂಧಗಳು ಭದ್ರಗೊಳ್ಳುತ್ತಿವೆ. ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ದ್ವಿ ಪಕ್ಷೀಯ ರಕ್ಷಣಾ ವ್ಯಾಪಾರವು 2019 ರಲ್ಲಿ 18 ಬಿಲಿಯನ್ ಡಾಲರ್‌ಗಳನ್ನು ಮುಟ್ಟಿತ್ತು.
ರಕ್ಷಣಾ ಉತ್ಪಾದನೆಯನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಉಭಯ ದೇಶಗಳ ಖಾಸಗಿ ವಲಯಗಳ ಸಹಕಾರಕ್ಕೆ ಈ ಎರಡು ರಾಷ್ಟ್ರಗಳು ಮುಂದಾಗಿವೆ. ಜೂನ್ 2016 ರಲ್ಲಿ, ಭಾರತವನ್ನು 'ಪ್ರಮುಖ ರಕ್ಷಣಾ ಪಾಲುದಾರ' ಎಂದು ಅಮೆರಿಕ ಕರೆದಿತ್ತು. ಇನ್ನು ಟ್ರಂಪ್ ನಾಳೆ ಭಾರತಕ್ಕೆ ಆಗಮಿಸಲಿದ್ದು, ಅವರನ್ನ ಸ್ವಾಗತಿಸಿಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ.