ETV Bharat / bharat

ಮತ್ತೆ ಮೋದಿ ಯುಗಾರಂಭ: ನೀತಿ ಆಯೋಗದಿಂದ ಭಾರಿ ಆರ್ಥಿಕ ಸುಧಾರಣೆಯ ವಿಶ್ವಾಸ - undefined

ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್​ ಅವರು, ಮುಂದಿನ 100 ದಿನಗಳಲ್ಲಿಯೇ ಭಾರತ ಆರ್ಥಿಕತೆಯಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ. ಈ ಮೂಲಕ ಭಾರತ ವಿದೇಶಿ ಉದ್ಯಮಿಗಳನ್ನು ಕೈಬೀಸಿ ಕರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೋದಿ
author img

By

Published : May 31, 2019, 4:41 PM IST

ನವದೆಹಲಿ: ಲೋಕಸಭೆಯಲ್ಲಿ ಇತಿಹಾಸ ನಿರ್ಮಿಸಿದ ಮೋದಿ ಟೀಂ, ಸರ್ಕಾರ ರಚನೆ ಪ್ರಕ್ರಿಯೆನ್ನೂ ಪೂರ್ಣಗೊಳಿಸಿದೆ. ಇದರ ಬೆನ್ನಲ್ಲೆ, ಭಾರತದ ಆರ್ಥಿಕತೆಯಲ್ಲಿ ಭಾರಿ ಸುಧಾರಣೆಯಾಗಲಿದೆ ಎಂಬ ವಿಶ್ವಾಸವನ್ನು ನೀತಿ ಆಯೋಗ ವ್ಯಕ್ತಪಡಿಸಿದೆ.

ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್​ ಅವರು, ಮುಂದಿನ 100 ದಿನಗಳಲ್ಲಿಯೇ ಭಾರತ ಆರ್ಥಿಕತೆಯಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ. ಈ ಮೂಲಕ ಭಾರತ ವಿದೇಶಿ ಉದ್ಯಮಿಗಳನ್ನು ಕೈಬೀಸಿ ಕರೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

NITI Aayog
ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್

ಕಾರ್ಮಿಕ ನೀತಿಗಳು, ಖಾಸಗೀಕರಣ ಚಟುವಟಿಕೆ, ಹೊಸ ಕೈಗಾರಿಕಾ ಅಭಿವೃದ್ಧಿಯಲ್ಲಿ ಸುಧಾರಣೆಯಾಗಲಿದೆ. ವಿದೇಶಿ ಬಂಡವಾಳ ಹೂಡಿಕೆದಾರರು ಇದರಿಂದ ಖುಷಿಯಾಗಿದ್ದಾರೆ. ಇದೆಲ್ಲವೂ ಭಾರತ ಮುನ್ನಡೆಗೆ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.

ಜುಲೈನಲ್ಲಿ ನಡೆಯುವ ಸಂಸತ್​ ಅಧಿವೇಶನದಲ್ಲಿ ಸುಧಾರಣಾ ನೀತಿಗಳಿಗೆ ಸರ್ಕಾರದ ಅಂಕಿತ ಬೀಳಲಿದೆ ಎಂದೂ ಅವರು ವಿಶ್ವಾಸದಿಂದ ನುಡಿದರು.

ಕಳೆದ ಅವಧಿಯಲ್ಲಿ ಭಾರತದ ಆರ್ಥಿಕತೆಯಲ್ಲಿ ಹಲವಾರು ಸುಧಾರಣಾ ನೀತಿಗಳನ್ನು ಪ್ರಧಾನಿ ಮೋದಿ ಜಾರಿಗೆ ತಂದಿದ್ದರು. ಇದೀಗ ಮತ್ತೊಂದು ಬಾರಿಗೆ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿರುವುದರಿಂದ, ಈ ಹಿಂದೆ ಸ್ಥಗಿತಗೊಂಡ ಯೋಜನೆಗಳು ಹಾಗೂ ಹೊಸ ಸುಧಾರಣಾ ನೀತಿಗಳಿಗೆ ಚಾಲನೆ ದೊರೆಯುವ ನಿರೀಕ್ಷೆಯಿದೆ.

Intro:Body:

 NITI Aayog

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.