ETV Bharat / bharat

ನಾಳೆ ವಾಘಾ ಗಡಿ ಮೂಲಕ ಪಾಕ್‌ಗೆ ಮರಳಲಿದ್ದಾರೆ 41 ಮಂದಿ ಪಾಕಿಸ್ತಾನೀಯರು! - ಪಾಕಿಸ್ತಾನೀಯರು

ಕೋವಿಡ್​-19 ಪರಿಸ್ಥಿತಿಯಿಂದಾಗಿ ಭಾರತದಲ್ಲಿ ಒಟ್ಟು 180 ಮಂದಿ ಪಾಕಿಸ್ತಾನೀಯರು ಸಿಲುಕಿಕೊಂಡಿದ್ದು, ಈ ಪೈಕಿ 41 ಮಂದಿ ನಾಳೆ ವಾಘಾ ಗಡಿಯ ಮೂಲಕ ಪಾಕ್‌ಗೆ ತೆರಳಲಿದ್ದಾರೆ.

Pakistani Nationals
ಪಾಕ್‌
author img

By

Published : Apr 15, 2020, 8:56 PM IST

ನವದೆಹಲಿ: ಪಾಕಿಸ್ತಾನದ 41 ಪ್ರಜೆಗಳು ಗುರುವಾರ ವಾಘಾ ಗಡಿಯ ಮೂಲಕ ಪಾಕ್‌ಗೆ ತೆರಳಲಿದ್ದಾರೆ. ಭಾರತದ ವಿವಿಧ ನಗರಗಳಲ್ಲಿರುವ ಸುಮಾರು 41ಕ್ಕೂ ಹೆಚ್ಚು ಪಾಕಿಸ್ತಾನೀಯರನ್ನು ತಮ್ಮ ದೇಶಕ್ಕೆ ಕರೆಸಿಕೊಳ್ಳಲು ಸಹಾಯ ಮಾಡುವಂತೆ ಪಾಕಿಸ್ತಾನ ಕೇಳಿಕೊಂಡಿದೆ. ಇದಕ್ಕೆ ಸಕಾರಾತ್ಮಕವಾಗಿ ಭಾರತ ಸ್ಪಂದಿಸಿದ ಪರಿಣಾಮ ನಾಳೆ ಅಟ್ಟಾರಿ ವಾಘಾ ಗಡಿಯ ಮೂಲಕ ಇವರು ಪಾಕಿಸ್ತಾನಕ್ಕೆ ವಾಪಸಾಗಲಿದ್ದಾರೆ.

ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿರುವ ಪಾಕಿಸ್ತಾನೀಯರನ್ನು ಸ್ವದೇಶಕ್ಕೆ ಕರೆಸಿಕೊಳ್ಳಲು ಸಹಾಯ ಮಾಡುವಂತೆ ಪಾಕ್ ಹೈಕಮಿಷನ್‌ ಆಗ್ರಹಿಸಿತ್ತು. ಇವರು ಈಗ ಗುರುವಾರ ಬೆಳಗ್ಗೆ 10 ಗಂಟೆಗೆ ವಾಘಾ ಗಡಿ ಮೂಲಕ ಪಾಕಿಸ್ತಾನದ ಅಟ್ಟಾರಿಗೆ ತೆರಳಲಿದ್ದಾರೆ. ಪಾಕಿಸ್ತಾನದ ಹೈಕಮಿಷನ್‌ನ ವಿನಂತಿಯ ಮೇರೆಗೆ ವಿದೇಶಾಂಗ ಸಚಿವಾಲಯದ ಕೋವಿಡ್ ತುರ್ತು ಪರಿಸ್ಥಿತಿ ವಿಭಾಗದ ಸಂಯೋಜಕ ಮತ್ತು ಅಪರ ಕಾರ್ಯದರ್ಶಿ ದಮ್ಮು ರವಿ, ಎಲ್ಲಾ ರಾಜ್ಯಗಳ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಏಪ್ರಿಲ್ 14ರಂದು ಬರೆದಿರುವ ಪತ್ರದಲ್ಲಿ ಪಾಕಿಸ್ತಾನೀಯರು ಇರುವ ವಾಹನಗಳ ಸಂಖ್ಯೆ ಸೇರಿದಂತೆ ಅವರಿಗೆ ಒದಗಿಸಬೇಕಾದ ನೆರವಿನ ವಿವರವನ್ನು ನೀಡಿದ್ದಾರೆ. ಭಾರತದಲ್ಲಿ ಸಿಲುಕಿಕೊಂಡಿರುವ 188 ಪಾಕಿಸ್ತಾನೀಯರ ಪೈಕಿ 40 ಜನರನ್ನು ವಾಪಾಸ್​​ ಕರೆಸಿಕೊಳ್ಳಲು ಪಾಕಿಸ್ತಾನದ ಹೈಕಮಿಷನ್ ಔಪಚಾರಿಕವಾಗಿ ಆಗ್ರಹಿಸಿದೆ. ಭಾರತದಲ್ಲಿರುವ ವಿದೇಶಿಗರನ್ನು ಕಳುಹಿಸಲು ವಿದೇಶಾಂಗ ಸಚಿವಾಲಯ ನೆರವು ನೀಡುತ್ತಿದೆ. ಇದರಲ್ಲಿ ಪಾಕಿಸ್ತಾನೀಯರೂ ಸೇರಿದ್ದಾರೆ. ಭಾರತದಲ್ಲಿರುವ 180 ಪಾಕಿಸ್ತಾನೀಯರು ತಮ್ಮ ದೇಶಕ್ಕೆ ವಾಪಸಾಗಲು ಬಯಸಿದ್ದಾರೆ ಎಂಬುದನ್ನು ಪಾಕಿಸ್ತಾನದ ಹೈಕಮಿಷನ್ ಮೂಲಕ ನಮಗೆ ತಿಳಿದುಬಂದಿದೆ. ಅವರ ವಾಪಸ್ ಪ್ರಯಾಣಕ್ಕೆ ನಾವು ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಸಹಭಾಗಿತ್ವ ಸಾಧಿಸುತ್ತಿದ್ದೇವೆ ಎಂದು ಭಾರತೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ 105 ಭಾರತೀಯ ವಿದ್ಯಾರ್ಥಿಗಳು ಮತ್ತು 100ಕ್ಕೂ ಹೆಚ್ಚು ಭಾರತೀಯ ಸಂದರ್ಶಕರು ಪಾಕಿಸ್ತಾನದಲ್ಲಿದ್ದಾರೆ. ಆದರೆ, ಭಾರತೀಯರು ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಅಲ್ಲೇ ಇರುವಂತೆ ಭಾರತ ಸರ್ಕಾರ ಸೂಚನೆ ನೀಡಿದೆ. ಸದ್ಯದ ಮಟ್ಟಿಗೆ ಸರ್ಕಾರ ಈ ನಿಲುವನ್ನು ಹೊಂದಿದೆ. ಆದರೆ, ಶೀಘ್ರದಲ್ಲೇ ಅವರನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.