ETV Bharat / bharat

ಜಮ್ಮು ಕಾಶ್ಮೀರ ನಕ್ಷೆ ತಪ್ಪಾಗಿ ಪ್ರಕಟಿಸಿದ ವಿಕಿಪೀಡಿಯಾಗೆ ಕೇಂದ್ರದಿಂದ ಎಚ್ಚರಿಕೆ - map of Jammu and Kashmir

ಭಾರತ-ಭೂತಾನ್​ ಗಡಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಭಾಗದವನ್ನು ತಪ್ಪಾಗಿ ತೋರಿಸಿರುವ ವಿಕಿಪೀಡಿಯಾಗೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದು, ಪ್ರಮಾದವನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದೆ. ಒಂದು ವೇಳೆ ಸರಿಪಡಿಸಿಕೊಳ್ಳದಿದ್ದರೆ ಕ್ರಮಕ್ಕೆ ಮುಂದಾಗುವುದಾಗಿಯೂ ಹೇಳಿದೆ.

Wikipedia
ವಿಕಿಪೀಡಿಯಾ
author img

By

Published : Dec 3, 2020, 6:55 AM IST

ನವದೆಹಲಿ: ಜಮ್ಮು ಕಾಶ್ಮೀರ ಮ್ಯಾಪ್​​​​ ಅನ್ನು ತಪ್ಪಾಗಿ ತೋರಿಸುತ್ತಿದ್ದ ಲಿಂಕ್​ ಅನ್ನು ತೆಗೆದುಹಾಕುವಂತೆ ವಿಕಿಪೀಡಿಯಾಗೆ ಸರ್ಕಾರ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಈ ಆದೇಶ ಹೊರಡಿಸಿದೆ ಎಂದು ಹೇಳಲಾಗಿದೆ. ಈ ಪ್ರಕರಣವು ಟ್ವಿಟ​ರ್​ ಬಳಕೆದಾರರೊಬ್ಬರು ಸರ್ಕಾರದ ಗಮನಕ್ಕೆ ತಂದಿದ್ದರು.

ಟ್ವಿಟರ್ ಬಳಕೆದಾರರಾದ ಚತ್ರಾಸಲ್ ಸಿಂಗ್ ಎಂಬುವರು ಭಾರತ-ಭೂತಾನ್ ಸಂಬಂಧಿಸಿದಂತೆ ಅಲ್ಲಿನ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಗಡಿಯನ್ನು ತಪ್ಪಾಗಿ ತೋರಿಸುತ್ತಿದ್ದ ವಿಕಿಪೀಡಿಯಾ ಪುಟವನ್ನು ಹೈಲೆಟ್ ಮಾಡಿ ಸರ್ಕಾರದ ಗಮನಕ್ಕೆ ತಂದಿದ್ದರು.

ಈ ಕುರಿತು ಗಮನ ಹರಿಸಿದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು ಇತ್ತೀಚೆಗೆ ವಿಕಿಪೀಡಿಯಾದಿಂದ ಭಾರತದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಉಲ್ಲಂಘನೆ ಮಾಡಿದಂತಾಗಿದೆ. ಆದ್ದರಿಂದ ತಪ್ಪಾದ ನಕ್ಷೆಯ ಲಿಂಕ್​​​ ತೆಗೆದುಹಾಕುವಂತೆ ವಿಕಿಪೀಡಿಯಾಗೆ ನಿರ್ದೇಶನ ನೀಡಿದ್ದರು.

ಮೂಲಗಳ ಪ್ರಕಾರ, ವಿಕಿಪೀಡಿಯಾ ಈ ಕುರಿತು ಯಾವುದೇ ಕ್ರಮಕ್ಕೆ ಮುಂದಾಗದಿದ್ದರೆ ಸರ್ಕಾರ ಗಂಭೀರ ಕಾನೂನು ಕ್ರಮ ಜರುಗಿಸಲು ಮುಂದಾಗಲಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69 ಎ ಪ್ರಕಾರ ವಿಕಿಪೀಡಿಯಾ ಬಳಕೆಯನ್ನೇ ನಿರ್ಬಂಧಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ವಿಕಿಪೀಡಿಯಾ ಕುರಿತ ಸಂಕ್ಷಿಪ್ತ ಮಾಹಿತಿ:

ವಿಕಿಪೀಡಿಯಾ ಬಹುಭಾಷಿಯ ವಿಶ್ವಕೋಶವಾಗಿರುವ ವೆಬ್​ಸೈಟ್​​​ ಮಾದರಿಯ ಮಾಹಿತಿ ಕೋಶವಾಗಿದೆ. ಲಾಭದ ಉದ್ದೇಶವಿರದಿದ್ದರು ವಿಶ್ವದ ಪ್ರತಿಯೊಂದು ಮಾಹಿತಿಯನ್ನು ಉಚಿತವಾಗಿ ಜನತೆಗೆ ಅಂತರ್ಜಾಲದಲ್ಲಿ ತಲುಪಿಸಲಿದೆ. ಪ್ರಸ್ತುತ ಇದರ ಕೇಂದ್ರ ಕಚೇರಿಯು ಅಮೆರಿಕದ ಸ್ಯಾನ್​​ಫ್ರಾನ್ಸಿಸ್ಕೊದಲ್ಲಿದ್ದು, ಇಂಟರ್​​​ನೆಟ್​ ಸೌಲಭ್ಯ ಹೊಂದಿರುವ ಯಾರು ಬೇಕಾದರೂ ಈ ವ್ಯವಸ್ಥೆ ಪಡೆದುಕೊಳ್ಳಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.