ನವದೆಹಲಿ : ವಿವಾದಿತ ಗಿಲ್ಗಿಟ್-ಬಾಲ್ಟಿಸ್ತಾನ್ ವಿಧಾನಸಭೆ ಚುನಾವಣೆಗೆ ಮುಂದಾಗಿರುವ ನೆರೆಯ ಪಾಕಿಸ್ತಾನದ ನಡೆಯನ್ನು ಭಾರತ ತೀವ್ರವಾಗಿ ಪ್ರತಿಭಟಿಸಿ ವಿರೋಧ ವ್ಯಕ್ತಪಡಿಸಿದೆ.
1947ರಲ್ಲಿ ಈಗಿನ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಹಾಗೂ ಗಿಲ್ಗಿಟ್, ಬಾಲ್ಟಿಸ್ತಾನ್ ಭಾರತದ ಅವಿಭಾಜ್ಯ ಅಂಗವಾಗಿತ್ತು. ಹೀಗಾಗಿ, ಈ ಎಲ್ಲಾ ಪ್ರದೇಶಗಳು ಭಾರತ ಪರ ಬಲವಾಗಿ ನಿಂತಿವೆ. ಅಕ್ರಮಿತ ಪ್ರದೇಶದಲ್ಲಿ ಪಾಕಿಸ್ತಾನ ಸರ್ಕಾರ ಕಾನೂನು ಬಾಹಿರ ನಡೆದುಕೊಳ್ಳುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿದೆ.
ಪಾಕ್ ಇತ್ತೀಚೆಗೆ ಜಾರಿಗೆ ಮಾಡಿರುವ ಗಿಲ್ಗಿಟ್-ಬಾಲ್ಟಿಸ್ತಾನ್(ಚುನಾವಣೆ ಮತ್ತು ಕೇರ್‌ಟೇಕರ್ ಗವರ್ನಮೆಂಟ್) ತಿದ್ದುಪಡಿ ಆದೇಶ 2020ವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಜೊತೆಗೆ ಅಕ್ರಮ ಪ್ರದೇಶದಲ್ಲಿ ಪಾಕಿಸ್ತಾನದ ಅಕ್ರಮಣಕಾರಿ ನೀತಿಗಳನ್ನು ತೀವ್ರ ವಿರೋಧಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಆಕ್ರಮಿತ ಪ್ರದೇಶ, ಲಡಾಖ್‌ನಲ್ಲಿ ಕಳೆದ 7 ದಶಕಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ, ಸ್ಫೋಟಗಳು ಮತ್ತು ನಿವಾಸಿಗಳಿಂದ ಸ್ವಾತಂತ್ರ್ಯವನ್ನು ಪಾಕಿಸ್ತಾನ ಕಸಿದುಕೊಂಡಿದೆ ಎಂದು ಭಾರತ ಸರ್ಕಾರ ದೂರಿದೆ.
ಅಕ್ರಮ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ನಡೆಸುತ್ತಿರುವ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಪಾಕಿಸ್ತಾನ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದೆ. ಗಿಲ್ಗಿಟ್ ಬಾಲ್ಟಿಸ್ತಾನ್ ಹಲವು ದಶಕಗಳ ಕಾಲ ಜಮ್ಮು ಮತ್ತು ಕಾಶ್ಮೀರದ ಭಾಗವಾಗಿಯೇ ಉಳಿದಿತ್ತು.