2019ರ ನವೆಂಬರ್ನಲ್ಲಿ ಸಂವಿಧಾನದ 370ನೇ ವಿಧಿ ಹಾಗೂ ಕಲಂ 35ಎ ರದ್ದುಗೊಳಿಸಿ, ಜಮ್ಮು ಕಾಶ್ಮೀರ ಹಾಗೂ ಲಡಾಖ್‍ಗಳನ್ನು ವಿಭಜಿಸಿ ಹೊಸದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ರೂಪಿಸಿದ ಬಳಿಕ, ಕೇಂದ್ರ ಗೃಹ ಸಚಿವಾಲಯ ದೇಶದ ಹೊಸ ರಾಜಕೀಯ ಭೂಪಟವನ್ನು ಬಿಡುಗಡೆಗೊಳಿಸಿತು. ನೇಪಾಳ ಈ ಭೂಪಟಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ದೇಶದ ಸುಂದರ ಪಶ್ಚಿಮ ಪ್ರಾಂತ್ಯದ ದರ್ಚುಲಾ ಜಿಲ್ಲೆಯ ವಿವಾದಾತ್ಮಕ ಕಾಲಾಪಾನಿ ಪ್ರದೇಶವನ್ನು ತಪ್ಪಾಗಿ ಉತ್ತರಖಂಡ ರಾಜ್ಯದ ದರ್ಚುಲಾ ಜಿಲ್ಲೆಯ ಭಾಗವಾಗಿ ಈ ಭೂಪಟದಲ್ಲಿ ತೋರಿಸಲಾಗಿದೆ ಎಂದು ನೇಪಾಳ ಆಕ್ಷೇಪ ವ್ಯಕ್ತಪಡಿಸಿತು. ಆದರೆ ಭಾರತ ಈ ಆಕ್ಷೇಪ ತಳ್ಳಿಹಾಕಿತು. ಈ ಭೂಪಟ ರಚನೆಯಲ್ಲಿ ಯಾವುದೇ ವೈಜ್ಞಾನಿಕ ತಪ್ಪುಗಳಿಲ್ಲ ಹಾಗೂ ಅದು ನಿಖರವಾಗಿದೆ. ಈ ಹಿಂದಿನ ಭೂಪಟಗಳಿಗೆ ಅನುಗುಣವಾಗಿಯಯೇ ಈ ಭೂಪಟ ಇದೆ ಎಂದು ಭಾರತ ಪ್ರಬಲವಾಗಿ ಪ್ರತಿಪಾದಿಸಿತು.
ಕಳೆದ ವಾರ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಕೈಲಾಶ-ಮಾನಸ ಸರೋವರ ಯಾತ್ರೆಯ ಅವಧಿಯನ್ನು ಕೆಲ ದಿನಗಳ ಕಾಲ ಕಡಿಮೆಗೊಳಿಸುವ ದರ್ಚುಲಾ ಹಾಗೂ ಚೀನಾ ಗಡಿ ಭಾಗಕ್ಕೆ ಹತ್ತಿರದಲ್ಲಿರುವ ಲಿಪು ಲೇಕ್ ನಡುವೆ ನಿರ್ಮಿಸಲಾಗಿರುವ ನೂತನ ಸಂಪರ್ಕ ರಸ್ತೆಯನ್ನು ಉದ್ಘಾಟಿಸಿದರು. ಆ ಬಳಿಕ ನವದೆಹಲಿ ಹಾಗೂ ಕಾಠ್ಮಂಡು ನಡುವಣ ಉದ್ವಿಘ್ನತೆ ಮತ್ತೆ ಹೆಚ್ಚಳವಾಗಿದೆ. ಅತ್ಯಂತ ಕಠಿಣ ಶಬ್ದಗಳ ಹೇಳಿಕೆಯಲ್ಲಿ ತನ್ನ ಗಡಿಯೊಳಗೆ ಯಾವುದೇ ಕಾಮಗಾರಿಯನ್ನು ಕೈಗೊಳ್ಳದಂತೆ ನೇಪಾಳದ ವಿದೇಶಾಂಗ ಸಚಿವಾಲಯ ಭಾರತವನ್ನು ಆಗ್ರಹಿಸಿದೆ. ಈ ಮೂಲಕ ಮಹಾಕಾಳಿ ಭಾಗದ ಎಲ್ಲಾ ಭೂ ಪ್ರದೇಶದ ಮೇಲೆ ಅದು ತನ್ನ ಹಕ್ಕನ್ನು ಪ್ರತಿಪಾದಿಸಿದೆ. 1816ರ ಸುಗೌಲಿ ಒಪ್ಪಂದದ ಪ್ರಕಾರ ಲಿಂಪಿಯಾಧುರ, ಕಾಲಾಪಾನಿ ಹಾಗೂ ಲಿಪು ಲೇಕ್ ಪ್ರದೇಶ ಇದರಲ್ಲಿ ಸೇರಿದೆ.
ಆದರೆ ನವದೆಹಲಿಯಲ್ಲಿ ಭಾರತದ ವಿದೇಶಾಂಗ ಸಚಿವಾಲಯ ನೇಪಾಳದ ಆರೋಪವನ್ನು ತಳ್ಳಿ ಹಾಕಿದೆ. "ಇತ್ತೀಚೆಗೆ, ಉತ್ತರಖಂಡ ರಾಜ್ಯದ ಪಿತಫರಾಗ್ರಹ್ ಜಿಲ್ಲೆಯಲ್ಲಿ ಉದ್ಘಾಟನೆಗೊಂಡ ರಸ್ತೆ, ಸಂಪೂರ್ಣವಾಗಿ ಭಾರತದ ಭೂ ಪ್ರದೇಶದಲ್ಲಿಯೆ ಇದೆ," ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಜೊತೆಗೆ ಬಹುಕಾಲದಿಂದ ನೆಗೆಗುದಿಗೆ ಬಿದ್ದಿರುವ ಭಾರತ-ನೇಪಾಳ ಗಡಿ ಗುರುತಿಸುವ ಪ್ರಕ್ರಿಯೆಯನ್ನು ಕೋವಿಡ್ 19 ಬಿಕ್ಕಟ್ಟು ಮುಗಿದ ಬಳಿಕ, ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ಮೂಲಕ ಪರಿಹರಿಸಲಾಗುವುದು," ಎಂದು ಸಚಿವಾಲಯ ತಿಳಿಸಿದೆ.
ದೇಶದ ಭಾರತದ ಜೊತೆಗಿನ ಪಶ್ಚಿಮ ಗಡಿಯಲ್ಲಿ ಹೆಚ್ಚಿನ ಶಾಶ್ವತ ಸಶಸ್ತ್ರ ಪಡೆಗಳ ನಿಯೋಜನೆಗೆ ನಿರ್ಧರಿಸಿದ್ದು, ಹಾಗೂ ನಿಶ್ಚಿತ ಗಡಿ ಗುರುತಿಸುವ ನಿಟ್ಟಿನಲ್ಲಿ ನೇಪಾಳ ಕೆಲಸ ಮಾಡಲಿದೆ ಎಂದು ಈ ವಾರ ಅಲ್ಲಿನ ವಿದೇಶಾಂಗ ಸಚಿವ ಪ್ರದೀಪ ಗ್ಯಾವಲಿ, ಅಲ್ಲಿನ ಸಂಸತ್‍ಗೆ ತಿಳಿಸಿದ್ದಾರೆ. ಇದೊಂದು ವಿವಾದಾತ್ಮಕ ವಿಷಯವಾಗಿದ್ದು, ಈ ಸಂಬಂಧ ತಜ್ಞರ ಉನ್ನತ ಮಟ್ಟದ ಸಮಿತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ ವರದಿ ಇನ್ನೂ ಯಾವುದೇ ನಿರ್ಧಾರವಿಲ್ಲದೆ ಕೊಳೆಯುತ್ತಿದೆ. ಉಭಯ ರಾಷ್ಟ್ರಗಳು ಒಪ್ಪಿಕೊಂಡ ಅಂಶಗಳನ್ನು ಹೊಂದಿರುವ ಈ ಸಮಿತಿಯ ಶಿಫಾರಸನ್ನು ಪ್ರಧಾನಿ ಇನ್ನೂ ಒಪ್ಪಿಕೊಂಡಿಲ್ಲ. ಈ ಎಲ್ಲದರ ನಡುವೆ ಸೋಮವಾರ ನೇಪಾಳದ ವಿದೇಶಾಂಗ ಸಚಿವರು ಕಾಠ್ಮಂಡುವಿನಲ್ಲಿರುವ ಭಾರತದ ರಾಯಭಾರಿ ವಿನಯ್ ಕವತ್ರಾ ಅವರಿಗೆ ಸಮನ್ಸ್ ಕಳುಹಿಸಿದ್ದರು ಎಂದು ವರದಿಯಾಗಿದೆ. ಆದರೆ ಭಾರತದ ವಿದೇಶಾಂಗ ಸಚಿವಾಲಯ ಇದನ್ನು ನಿರಾಕರಿಸಿದ್ದು, ಇದೊಂದು ಬರೀ ಸಭೆ ಎಂದು ಸ್ಪಷ್ಟನೆ ನೀಡಿದೆ.
ಭಾರತದ ವಿರುದ್ಧ ತನ್ನ ವಿರೋಧವನ್ನು ಕಾಠ್ಮಂಡು ಹೆಚ್ಚಿಸುತ್ತಿರುವುದೇಕೆ? ನೇಪಾಳದ ಮೇಲೆ ಹೆಚ್ಚುತ್ತಿರುವ ಚೀನಾದ ಕರಿನೆರಳು ಭಾರತಕ್ಕೆ ಎಷ್ಟು ತಲೆನೋವು? ನೇಪಾಳದ ಜತೆಗಿನ ಸಂಬಂಧ ಬಲಪಡಿಸಲು ಹಾಗೂ ವಿವಾದಗಳಿಗೆ ಅಂತ್ಯ ಹಾಡಲು ಭಾರತ ಏನು ಮಾಡಬೇಕಿದೆ? ಭಾರತದ ವಿರುದ್ಧ ನೇಪಾಳ ಮಾಡುತ್ತಿರುವ ಆರೋಪಗಳು ನಿಜವೇ? ಅಥವಾ ಇದು ಐತಿಹಾಸಿಕ ಅಪನಂಬಿಕೆಯ ಫಲಶ್ರುತಿಯೆ ಅಥವಾ ಆಂತರಿಕ ರಾಜಕೀಯದ ಭಾಗವೇ? ಇವೆಲ್ಲವೂ ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮ ಈ ಕಾರ್ಯಕ್ರಮದಲ್ಲಿ ಕಾಠ್ಮಂಡುವಿನಲ್ಲಿ ಸೇವೆ ಸಲ್ಲಿಸಿದ ಭಾರತದ ಮಾಜಿ ನೇಪಾಳ ರಾಯಭಾರಿ ರಂಜಿತ್ ರಾಯ್ ಹಾಗೂ ಬ್ರೂಕಿಂಗ್ ಭಾರತ ಫೆಲೋ ಕಾನ್ಟಾನ್‍ಟಿನೋ ಕ್ಸೇವಿಯರ್ ಜೊತೆಗೆ ಚರ್ಚಿಸಿದ್ದಾರೆ.
ಭಾರತ ಹಾಗೂ ನೇಪಾಳ ನಡುವಣ 98 ಶೇಕಡಾ ಗಡಿ ವಿವಾದಗಳು ಶಮನವಾಗಿವೆ. ಆದರೆ ಬಗೆಹರಿಯದ ವಿವಾದಗಳು ಅದರಲ್ಲೂ ಮುಖ್ಯವಾಗಿ ಕಾಲಾಪಾನಿ ಭಾಗದ ವಿವಾದಕ್ಕೆ ಪರಿಹಾರ ಕಂಡುಹಿಡಿಯದಿದ್ದಲ್ಲಿ, ಎರಡೂ ದೇಶಗಳ ನಡುವೆ ಶಾಶ್ವತ ಗಡಿ ಕಿರಿಕಿರಿ ತಲೆದೋರಬಹುದು ಎಂದು ಎಚ್ಚರಿಸುತ್ತಾರೆ ಕಾನ್ಟಾನ್‍ಟಿನೋ ಕ್ಸೇವಿಯರ್. ಕ್ಸೇವಿಯರ್ ಅವರು ಭೂತಾನ್‍ನ ತ್ರಿಕೋನ ಭೂಸ್ತರದದಲ್ಲಿ ಚೈನೀಸ್ ಪಿಎಲ್‍ಎ ಸಮೀಪ 73ದಿನಗಳ ಡೋಕ್ಲಾಮ್ ವಿವಾದದಂತೆ, ಭಾರತ ಈ ವಿವಾದ ತ್ರಿಪಕ್ಷೀಯ ವಿವಾದವಾಗಿ ಉಲ್ಬಣಗೊಳ್ಳುವುದನ್ನು ತಡೆಹಿಡಿಯಬೇಕು ಎಂಬ ಎಚ್ಚರಿಕೆಯ ಮಾತುಗಳನ್ನು ಹೇಳುತ್ತಾರೆ.
ರಾಯಭಾರಿ ರಾಯ್ ಅವರು ನೇಪಾಳದಲ್ಲಿ ಆರ್ಥಿಕವಾಗಿ ಸಕ್ರಿಯವಾಗಿರುವ ಚೀನಾ ಈ ಅಂಶವನ್ನು ರಾಜಕೀಯ ಬಲವರ್ಧನೆಗೆ ಬಳಸಿಕೊಳ್ಳುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು. ಭಾರತ-ನೇಪಾಳದ ನಡುವಣ ಈ ವಿವಾದದಲ್ಲಿ ಮೂಗು ತೂರಿಸಿ, ಲಾಭ ಪಡೆದುಕೊಳ್ಳಲು ಚೀನಾ ಯತ್ನಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ರೋಟಿ-ಮಗಳು ಭಾವನಾತ್ಮಕ ಸಂಬಂಧವನ್ನು ಬಳಸಿಕೊಂಡು, ಭಾರತ, ನೇಪಾಳದ ಎಲ್ಲಾ ರಾಜಕೀಯ ಪಕ್ಷಗಳು, ಶಕ್ತಿಗಳ ನಡುವೆ ಸದಾ ಉನ್ನತ ಸಂಬಂಧ ಹೊಂದಿರಲು ಪ್ರಯತ್ನಿಸಬೇಕು ಹಾಗೂ ಉಭಯ ದೇಶಗಳ ನಡುವಣ ವಿವಾದವನ್ನು ಉದ್ವೇಗವಿಲ್ಲದೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು ಎಂಬ ಕಿವಿ ಮಾತು ಹೇಳಿದರು. ನೇಪಾಳ ಜೊತೆಗಿನ ಐತಿಹಾಸಿಕ ಸಂಬಂಧವನ್ನು ಬಳಸಿಕೊಂಡು ವಿವಾದಕ್ಕೆ ಮಂಗಳ ಹಾಡಬೇಕು ಎಂದು ಅವರು ಸಲಹೆ ನೀಡುತ್ತಾರೆ.