ETV Bharat / bharat

ಕೊರೊನಾ ಆರ್ಥಿಕ ಸಂಕಷ್ಟದಿಂದ ಹೊರಬರಲು 50-60 ಲಕ್ಷ ಕೋಟಿ ರೂ. ವಿದೇಶಿ ಬಂಡವಾಳ ಅಗತ್ಯ: ಗಡ್ಕರಿ - ಕೊರೊನಾ ಆರ್ಥಿಕ ಸಂಕಷ್ಟ

ಕೊರೊನಾ ವೈರಸ್​ನಿಂದಾಗಿ ದೇಶದ ಆರ್ಥಿಕತೆ ಮತ್ತಷ್ಟು ಕೆಳಮಟ್ಟಕ್ಕೆ ತಲುಪಿದ್ದು, ಈ ವೇಳೆ 50-60 ಲಕ್ಷ ಕೋಟಿ ರೂ ವಿದೇಶಿ ಬಂಡವಾಳ ಅಗತ್ಯತೆ ಇದೆ ಎಂದು ನಿತಿನ್​ ಗಡ್ಕರಿ ತಿಳಿಸಿದ್ದಾರೆ.

Gadkari
Gadkari
author img

By

Published : Jul 2, 2020, 4:47 PM IST

ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ಹಾವಳಿ ಎಲ್ಲ ವಲಯಗಳ ಮೇಲೂ ಕರಿನೆರಳು ಚೆಲ್ಲಿದ್ದು, ಇದರಿಂದ ದೇಶದ ಆರ್ಥಿಕತೆ ಸಂಪೂರ್ಣವಾಗಿ ನೆಲಕಚ್ಚಿದೆ. ಇದರಿಂದ ಹೊರಬರಬೇಕಾದರೆ ನಮಗೆ ಸುಮಾರು 50-60 ಲಕ್ಷ ಕೋಟಿ ವಿದೇಶಿ ಬಂಡವಾಳ ಅಗತ್ಯ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತನ್​ ಗಡ್ಕರಿ ತಿಳಿಸಿದ್ದಾರೆ.

ಎಂಎಸ್​ಎಂಇ ವಲಯ ಸೇರಿದಂತೆ ವಿವಿಧ ಯೋಜನೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಅಗತ್ಯವಾಗಿದ್ದು, ಇದರಿಂದ ಮಾತ್ರ ದೇಶದ ಆರ್ಥಿಕತೆ ಚೇತರಿಕೆ ಕಾಣಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಭಾರತಕ್ಕೆ ವಿದೇಶಿ ಬಂಡವಾಳ ಅಗತ್ಯವಾಗಿದ್ದು, ವಿವಿಧ ವಲಯಗಳ ಅಭಿವೃದ್ಧಿ ಕೂಡ ಇದರಲ್ಲಿದೆ ಎಂದಿದ್ದಾರೆ.

ಎಂಎಸ್​ಎಂಇ, ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಂದ ಚೀನಾ ಔಟ್​: ಕೇಂದ್ರದ ಮಹತ್ವದ ನಿರ್ಧಾರ

ರಸ್ತೆ ಕಾಮಗಾರಿ, ಏರ್​ಪೋರ್ಟ್​, ವಿಮಾನ ನಿಲ್ದಾಣ, ಜಲಮಾರ್ಗಗಳು, ರೈಲ್ವೆಗಳು, ಲಾಜಿಸ್ಟಿಕ್​, ಬ್ರಾಡ್​ ಗೇಜ್​ ಮತ್ತು ಮೆಟ್ರೋ ಸೇರಿದಂತೆ ಮೂಲಸೌಕರ್ಯ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ವಿದೇಶಿ ಹೂಡಿಕೆ ಮಾಡಲು ಭಾರತ ನಿರ್ಧರಿಸಿದ್ದು, ಅದಕ್ಕಾಗಿ ನಾವು ಕಾತುರರಾಗಿದ್ದೇವೆ ಎಂದು ತಿಳಿಸಿದ್ದಾರೆ. ಇದೇ ವಿಚಾರವಾಗಿ ಈಗಾಗಲೇ ದುಬೈ, ಯುಎಸ್​​​ ಮೂಲಕ ಕಂಪನಿಗಳೊಂದಿಗೆ ಮಾತುಕತೆ ಸಹ ನಡೆದಿದೆ ಎಂದು ಮಾಹಿತಿ ನೀಡಿದರು.

ಕೊರೊನಾದಿಂದ ಭಾರತ ಮಾತ್ರವಲ್ಲ ಎಲ್ಲ ದೇಶಗಳು ತೊಂದರೆ ಅನುಭವಿಸುತ್ತಿದ್ದು, ಈ ಸಂದರ್ಭದಲ್ಲಿ ತಂತ್ರಜ್ಞಾನ ಮತ್ತಷ್ಟು ಉನ್ನತೀಕರಣ ಮಾಡುವ ಅವಶ್ಯಕತೆ ಇದೆ ಎಂದಿರುವ ಅವರು, ಚೀನಾದೊಂದಿಗಿನ ಎಲ್ಲ ರಸ್ತೆ ಹೆದ್ದಾರಿ ಒಪ್ಪಂದ ಮುರಿದುಕೊಳ್ಳಲಾಗಿದೆ ಎಂದು ತಿಳಿಸಿದರು.

ನಿನ್ನೆ ಮಾತನಾಡಿದ್ದ ನಿತಿನ್ ಗಡ್ಕರಿ, ಜಂಟಿ ಉದ್ಯಮ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ಚೀನಾ ಕಂಪೆನಿಗಳಿಗೆ ನಾವು ಅವಕಾಶ ನೀಡುವುದಿಲ್ಲ ಎಂದಿದ್ದರು. ಜತೆಗೆ ಎಂಎಸ್​ಎಂಇ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳಲ್ಲಿ ಚೀನಾ ಹೂಡಿಕೆ ಮಾಡಲು ಯಾವುದೇ ರೀತಿಯ ಪ್ರೋತ್ಸಾಹ ಇರುವುದಿಲ್ಲ ಎಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.