ನವದೆಹಲಿ: ಮಣಿಪುರ, ನಾಗಾಲ್ಯಾಂಡ್ ಹಾಗೂ ಅಸ್ಸೋಂಗಳಲ್ಲಿ ಸಕ್ರಿಯವಾಗಿರುವ ಉಗ್ರರ ಗುಂಪುಗಳನ್ನು ಗುರಿಯಾಗಿಸಿಕೊಂಡು ಭಾರತ ಹಾಗೂ ಮಯಾನ್ಮಾರ್ ಸೇನೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ.
ಮೇ 16ರಂದು 'ಆಪರೇಷನ್ ಸನ್ರೈಸ್' ಹೆಸರಿನಲ್ಲಿ ಎರಡೂ ಸೇನೆಗಳು ಕಾರ್ಯಾಚರಣೆ ಆರಂಭಿಸಿವೆ. ಈಶಾನ್ಯ ಭಾಗದಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ಮುಂದುವರೆದಿದೆ.
ಭಾರತದೊಂದಿಗೆ 1,640 ಕಿ.ಮೀ ಉದ್ದದಷ್ಟು ಗಡಿಪ್ರದೇಶ ಹಂಚಿಕೊಂಡಿರುವ ಮಯಾನ್ಮಾರ್ ಈ ಕಾರ್ಯಾಚರಣೆಗೆ ಕೈ ಜೋಡಿಸಿದೆ. ಈಗಾಗಲೇ 'ಆಪರೇಷನ್ ಸನ್ರೈಸ್-2' ನಡೆಸಲು ಯೋಜನೆ ರೂಪಸಿಲಾಗಿದೆ. ಕಮ್ತಾಪುರ್ ಲಿಬರೇಷನ್ ಆರ್ಗನೈಸೇಷನ್(KLO), ಎನ್ಎಸ್ಸಿಎನ್, ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸೋಂ(ಐ) ಹಾಗೂ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡಾಲ್ಯಾಂಡ್ (NDFB) ಸಂಘಟನೆಗಳ ನೆಲೆಗಳನ್ನು ಧ್ವಂಸ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ 6 ಡಜನ್ಗೂ ಹೆಚ್ಚು ಉಗ್ರರನ್ನು ಬಂಧಿಸಲಾಗಿದ್ದು, ಹಲವು ನೆಲೆಗಳನ್ನು ಧ್ವಂಸ ಮಾಡಲಾಗಿದೆ. ಸದ್ಯ 3ನೇ ಹಂತದ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸೇೆನಾ ಮೂಲಗಳು ಮಾಹಿತಿ ನೀಡಿವೆ.