ನವದೆಹಲಿ: ಯುದ್ಧ ಪೀಡಿತ ಅಫ್ಘಾನಿಸ್ತಾನದ ಆಂತರಿಕ ರಾಜಕೀಯ ಪ್ರಕ್ರಿಯೆಯಲ್ಲಿ ಭಾರತವು ದೊಡ್ಡ ಪಾತ್ರವನ್ನು ವಹಿಸಲು ಅಮೆರಿಕ ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಅಫ್ಘಾನಿಸ್ತಾನದ ಯುಎಸ್ ವಿಶೇಷ ರಾಯಭಾರಿ ಜಲ್ಮೇ ಖಲೀಲ್ಜಾದ್, ನವದೆಹಲಿಗೆ ಒಂದು ದಿನದ ತುರ್ತು ಭೇಟಿ ನೀಡಿದ್ದರು. ಇದಾದ ಒಂದು ದಿನದ ಬಳಿಕ, ಯುದ್ಧ ಹಾನಿಗೊಳಗಾದ ಅಫ್ಘಾನ್ ದೇಶದ ಆಂತರಿಕ ರಾಜಕೀಯ ಪ್ರಕ್ರಿಯೆಯಲ್ಲಿ ಭಾರತವು ದೊಡ್ಡ ಪಾತ್ರವನ್ನು ವಹಿಸಲು ಅಮೆರಿಕದ ಕಡೆಯವರು ಉತ್ಸುಕರಾಗಿದ್ದಾರೆ ಎಂಬ ಅಂಶವನ್ನು ಮೂಲಗಳು ತಿಳಿಸಿವೆ.
-
Lengthy meeting overnight with Mullah Baradar & his team in Doha. We sought progress on a range of topics: a reduction in violence, humanitarian ceasefire as demanded by the international community to allow for better cooperation on managing COVID-19 pandemic in Afghanistan,...
— U.S. Special Representative Zalmay Khalilzad (@US4AfghanPeace) May 7, 2020 " class="align-text-top noRightClick twitterSection" data="
">Lengthy meeting overnight with Mullah Baradar & his team in Doha. We sought progress on a range of topics: a reduction in violence, humanitarian ceasefire as demanded by the international community to allow for better cooperation on managing COVID-19 pandemic in Afghanistan,...
— U.S. Special Representative Zalmay Khalilzad (@US4AfghanPeace) May 7, 2020Lengthy meeting overnight with Mullah Baradar & his team in Doha. We sought progress on a range of topics: a reduction in violence, humanitarian ceasefire as demanded by the international community to allow for better cooperation on managing COVID-19 pandemic in Afghanistan,...
— U.S. Special Representative Zalmay Khalilzad (@US4AfghanPeace) May 7, 2020
ಭಾರತದೊಂದಿಗಿನ ಮಾತುಕತೆಗೆ ತುರ್ತು ಅವಶ್ಯಕತೆ ಇತ್ತು. ಖಲೀಲ್ಜಾದ್ ಅವರು ತಡವಾಗಿ ಭಾರತಕ್ಕೆ ಬರಬಹುದಿತ್ತು. ಆದರೆ ಅವರು ಒಂದೆರಡು ಗಂಟೆಗಳ ಮಾತುಕತೆಗಾಗಿ ತುರ್ತು ಭಾರತಕ್ಕೆ ಬರಲು ನಿರ್ಧರಿಸಿದರು ಎಂದು ಖಲೀಲ್ಜಾದ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ಹರ್ಷ್ ಶ್ರೀಂಗ್ಲಾ ಅವರೊಂದಿಗೆ ನಡೆಸಿದ ಸಭೆಗಳ ಬಗ್ಗೆ ಉನ್ನತ ಮೂಲಗಳು ತಿಳಿಸಿದೆ.
ಭಾರತವು ಇಲ್ಲಿಯವರೆಗೆ ತಾಲಿಬಾನ್ ಮತ್ತು ಪಾಕಿಸ್ತಾನದೊಂದಿಗಿನ ಸಮಾಲೋಚನೆಗೆ ಇಚ್ಛೆಪಡದ ರಾಷ್ಟ್ರ. ಒಳ್ಳೆಯ ಮತ್ತು ಕೆಟ್ಟ ತಾಲಿಬಾನ್ ನಡುವೆ ಯಾವುದೇ ಭಿನ್ನತೆ ಇರಬಾರದು ಎಂದು ಭಾರತ ಅಧಿಕೃತವಾಗಿ ಹೇಳುತ್ತಾ ಬರುತ್ತಿದೆ. ಈಗ ಮಹತ್ವದ ಬದಲಾವಣೆಯ ಸೂಚನೆಯಾಗಿ, ತಾಲಿಬಾನ್ ಸೇರಿದಂತೆ ಆಂತರಿಕ ರಾಜಕೀಯ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸಬೇಕು ಎಂದು ಅಮೆರಿಕ ಬಯಸಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
-
. #Diplomacy must go on, even with masks on! Delighted to have a very good conversation with Ambassador Liu Jian on a subject of great importance to both our countries. https://t.co/VToOnM0HOo
— Vikram Misri (@VikramMisri) May 8, 2020 " class="align-text-top noRightClick twitterSection" data="
">. #Diplomacy must go on, even with masks on! Delighted to have a very good conversation with Ambassador Liu Jian on a subject of great importance to both our countries. https://t.co/VToOnM0HOo
— Vikram Misri (@VikramMisri) May 8, 2020. #Diplomacy must go on, even with masks on! Delighted to have a very good conversation with Ambassador Liu Jian on a subject of great importance to both our countries. https://t.co/VToOnM0HOo
— Vikram Misri (@VikramMisri) May 8, 2020
ಅಫ್ಘಾನಿಸ್ತಾನದಲ್ಲಿ ರಕ್ಷಣಾ ಮತ್ತು ಸರ್ಕಾರಿ ಪಡೆಗಳ ವಿರುದ್ಧ ಹೆಚ್ಚುತ್ತಿರುವ ಆಕ್ರಮಣಕಾರಿ ದಾಳಿಯ ನಡುವೆ, ತಾಲಿಬಾನ್ ಜೊತೆಗಿನ ಮಾತುಕತೆಗಳು ಮುಂದುವರೆದಿವೆ, ಅಫ್ಘಾನಿಸ್ತಾನದೊಂದಿಗೆ ಮಾತುಕತೆ ಪುನಾರಾರಂಭಿಸಲು ಟ್ರಂಪ್ ಸರ್ಕಾರ ಉತ್ಸುಕವಾಗಿದೆ. ಮೂಲಗಳ ಪ್ರಕಾರ, ಖಲೀಲ್ಜಾದ್ ಅವರು ‘ಭಯೋತ್ಪಾದಕರಿಂದ ಅಫ್ಘಾನಿಸ್ತಾನಕ್ಕೆ ಬೆದರಿಕೆ, ರಕ್ಷಣಾ ಪಡೆಗಳ ಮೇಲೆ ತಾಲಿಬಾನ್‌ನಿಂದ ಹೆಚ್ಚಿದ ದಾಳಿಗಳು, ಅಫ್ಘಾನ್ ಸಾಂವಿಧಾನಿಕ ಅಂಶಗಳು, ಸರ್ಕಾರ, ಭದ್ರತಾ ಪಡೆಗಳು ಮತ್ತು ಸಮಾಜದ ಮೇಲೆ ಇದರ ಪ್ರಭಾವಕ್ಕೆ ಸಂಬಂಧಿಸಿದ ಆತಂಕಗಳ ಕುರಿತು ಭಾರತೀಯ ನಾಯಕರ ಜೊತೆಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.