ETV Bharat / bharat

N-95 ಮಾಸ್ಕ್​ಗಳ ರಫ್ತು ಮೇಲಿನ ನಿರ್ಬಂಧ ತೆರವುಗೊಳಿಸಿದ ಕೇಂದ್ರ

ಕೇಂದ್ರ ವಾಣಿಜ್ಯ ಸಚಿವಾಲಯವು N-95, FFP -2 ಮಾಸ್ಕ್​ಗಳ ರಫ್ತು ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದ್ದು, ಎಲ್ಲಾ ರೀತಿಯ ಮಾಸ್ಕ್​ಗಳನ್ನು ಮುಕ್ತವಾಗಿ ರಫ್ತು ಮಾಡಬಹುದಾಗಿದೆ.

author img

By

Published : Oct 7, 2020, 6:47 AM IST

India lifts curbs on export of N95 masks
N-95 ಮಾಸ್ಕ್​ಗಳ ರಫ್ತು ಮೇಲಿನ ನಿರ್ಬಂಧ ತೆಗೆದುಹಾಕಿದ ಕೇಂದ್ರ

ನವದೆಹಲಿ: ಕೇಂದ್ರ ವಾಣಿಜ್ಯ ಸಚಿವಾಲಯವು N-95 ಮಾಸ್ಕ್​ಗಳ ರಫ್ತು ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದ್ದು, ಎಲ್ಲಾ ವರ್ಗಗಳ ಮಾಸ್ಕ್​​ಗಳನ್ನು ಭಾರತದಿಂದ ರಫ್ತು ಮಾಡಬಹುದಾಗಿದೆ.

'N-95 ಮತ್ತು FFP-2 ಅಥವಾ ಅದರ ಸಮಾನತೆಯ ಮಾಸ್ಕ್​ಗಳ ರಫ್ತು ನೀತಿಯನ್ನು 'ನಿರ್ಬಂಧಿತ'ದಿಂದ 'ಮುಕ್ತ' ವರ್ಗಕ್ಕೆ ತಿದ್ದುಪಡಿ ಮಾಡಲಾಗಿದ್ದು, ಎಲ್ಲಾ ರೀತಿಯ ಮಾಸ್ಕ್​ಗಳನ್ನು ಮುಕ್ತವಾಗಿ ರಫ್ತು ಮಾಡಬಹುದಾಗಿದೆ' ಎಂದು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯದ ಅಧಿಸೂಚನೆ ತಿಳಿಸಿದೆ.

ಈ ಮೊದಲು, ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ದೇಶೀಯ ಬೇಡಿಕೆಯನ್ನು ಪೂರೈಸಲು ರಫ್ತು ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು.

ಮಾಸ್ಕ್​ಗಳು ಮತ್ತು ಪಿಪಿಇ ಮೇಲುಡುಪುಗಳ ದೇಶೀಯ ಉತ್ಪಾದನೆಯು ಕಳೆದ ಆರು ತಿಂಗಳಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ. ಹೀಗಾಗಿ ರಫ್ತು ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಉತ್ಪಾದಕರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದರು.

ಈ ನಿರ್ಧಾರದ ಬಗ್ಗೆ ಕೇಂದ್ರ ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದು, N-95 ಮತ್ತು FFP-2 ಮಾಸ್ಕ್​ಗಳನ್ನು ಈಗ ವಿಶ್ವದಾದ್ಯಂತ ಮುಕ್ತವಾಗಿ ರಫ್ತು ಮಾಡಬಹುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.