ನವದೆಹಲಿ: ಕೆಲವೇ ದಿನಗಳಲ್ಲಿ ಜಾಗತಿಕಮಟ್ಟದಲ್ಲಿ ಕೋವಿಡ್‌ಗೆ ಲಸಿಕೆ ಲಭ್ಯವಾಗಲಿದೆ. ಪ್ರತಿಯೊಬ್ಬ ಸೋಂಕಿತ ವ್ಯಕ್ತಿಗೂ ವ್ಯಾಸಿನ್ ಸಿಗಲಿದೆ ಎಂದು ನಿರೀಕ್ಷಿಸುತ್ತಿರುವಾಗಲೇ ಜಾಗತಿಕ ವೈದ್ಯಕೀಯ ಜರ್ನಲ್ ಬಿಎಂಜೆನ ವರದಿಯೊಂದು ಅಚ್ಚರಿ ಮೂಡಿಸಿದೆ. ವಿಶ್ವದ ಸುಮಾರು ಕಾಲು ಭಾಗದಷ್ಟು ಜನರು 2022ರ ಜನವರಿಗೆ ವರಿಗೂ ಲಸಿಕೆ ಪಡೆಯದಿರಬಹುದು ಎಂಬ ವರದಿಯನ್ನು ಬಿಡುಗಡೆ ಮಾಡಿದೆ.
ಇದೇ ವಿಚಾರ ಸಂಬಂಧ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ಮಹಾನಿರ್ದೇಶಕಿ ಡಾ.ಸುಶೀಲಾ ಗರ್ಗ್ ಈಟಿವಿ ಭಾರತಕ್ಕೆ ವಿಶೇಷ ಸಂದರ್ಶನ ನೀಡಿದ್ದು, ನಾಗರಿಕರಿಗೆ ಕೋವಿಡ್-19 ಲಸಿಕೆ ಲಭ್ಯತೆಯನ್ನು ಖಾತ್ರಿಪಡಿಸುವ ಮಟ್ಟಿಗೆ ಭಾರತ ಸುರಕ್ಷಿತ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.
ಸಮುದಾಯ ಔಷಧ ಮುಖ್ಯಸ್ಥರೂ ಆಗಿರುವ ಗರ್ಗ್, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಫಿಜರ್ ಲಸಿಕೆ ದೊರೆತಿದೆ ಮತ್ತು ಅವುಗಳಲ್ಲಿ ಕೆಲವು ಚೀನಿ ಲಸಿಕೆಗಳನ್ನು ಪಡೆಯುತ್ತಿವೆ ಎಂದು ಹೇಳಿದ್ದಾರೆ. ಭಾರತದ ಹಲವು ವ್ಯಾಕ್ಸಿನ್‌ಗಳು ಮುಂಚೂಣಿ ಹಂತದಲ್ಲಿವೆ.
ಅತಿ ಶೀಘ್ರದಲ್ಲೇ ತುರ್ತು ಸಂದರ್ಭದಲ್ಲಿ ಬಳಕೆಗಾಗಿ ಸೀರಮ್ ಸಂಸ್ಥೆ ಕೋವಿಶೀಲ್ಡ್ ಬಳಕೆಗೆ ಲಭ್ಯವಾಗಲಿದೆ. ವಿದೇಶದಲ್ಲಿ ವಿದ್ಯಕೀಯ ಪ್ರಯೋಗವನ್ನು ಈ ಲಸಿಕೆ ಮುಗಿಸಿದೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಕೂಡ 3ನೇ ಹಂತದ ಪ್ರಯೋಗದಲ್ಲಿದೆ. ಇದರ ಮೊದಲ ಹಾಗೂ ಎರಡನೇ ಹಂತಗಳು ತುಂಬಾ ಸಕಾರಾತ್ಮಕವಾದ ಫಲಿತಾಂಶವನ್ನು ನೀಡಿವೆ ಎಂದು ಗರ್ಗ್ ಮಾಹಿತಿ ನೀಡಿದ್ದಾರೆ.
ಭಾರತ್ ಬಯೋಟೆಕ್ ಲಸಿಕೆಯನ್ನು ವ್ಯಕ್ತಿಯ ಮೇಲೆ ಪ್ರಯೋಗಿಸಿದಾಗ ಆಹಾರ ಇಮ್ಯುನೊಜೆನೆಸಿಟಿಯನ್ನು ಹೆಚ್ಚಿಸಿರುವ ಫಲಿತಾಂಶವನ್ನು ತೋರಿಸಿದೆ ಮತ್ತು ಈ ಲಸಿಕೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ- ಐಸಿಎಂಆರ್ ಬೆಂಬಲ ನೀಡಿದೆ. ನಮ್ಮಲ್ಲಿ ಜೈಡಸ್ ಕ್ಯಾಡಿಲಾ ಲಸಿಕೆಯೂ ಲಭ್ಯವಿದೆ. ವಾಸ್ತವವಾಗಿ ಭಾರತವೂ ಇತರ ದೇಶಗಳಿಗೂ ರೋಗನಿರೋಧಕತೆಗೆ ಸಂಬಂಧಿಸಿದ ಔಷಧವನ್ನು ಪೂರೈಸುತ್ತಿದೆ. ಹೀಗಾಗಿ ನಮ್ಮ ದೇಶದಲ್ಲಿ ಕೋವಿಡ್-19 ಒಂದು ಸಮಸ್ಯೆಯೇ ಅಲ್ಲ ಎಂದಿದ್ದಾರೆ.
ಮುಂಬೈ, ದೆಹಲಿ ಸೇರಿದಂತೆ ದೇಶದ ಹಲವು ನಗರಗಳಲ್ಲಿನ ಜನರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ದೇಶದಲ್ಲಿ ಕೋವಿಡ್‌ಅನ್ನು ತುಂಬಾ ಚೆನ್ನಾಗಿಯೇ ನಿರ್ವಹಣೆ ಮಾಡಲಾಗುತ್ತಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಉತ್ತಮವಾಗಿ ನಡೆಯುತ್ತಿದ್ದು, 48 ಮಂದಿಯ ಮೇಲೆ ಪ್ರಸ್ತುತ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಕನಿಷ್ಟ 164 ಅಭ್ಯರ್ಥಿಗಳ ಪ್ರಿಕ್ಲಿನಿಕಲ್ ಸ್ಟೇಜ್‌ನಲ್ಲಿದ್ದಾರೆ. ಮಾರುಕಟ್ಟೆಗೆ ವ್ಯಾಕ್ಸಿನ್‌ಗಳನ್ನು ತರಲು ಸರ್ಕಾರ ಕೂಡ ಹೆಚ್ಚಿನ ಹಣಕಾಸು ನೆರವನ್ನು ಒದಿಸುತ್ತಿದೆ ಎಂದು ಹೇಳಿದ್ದಾರೆ.
ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ಅಭ್ಯರ್ಥಿಗಳ ಮೇಲೆ ಪ್ರಯೋಗ ಮತ್ತು ಯಾವ ದೇಶಗಳು ಶೀಘ್ರವಾಗಿ ಜನಸಂಖ್ಯೆಗೆ ಲಸಿಕೆಯನ್ನು ನೀಡುತ್ತವೆ ಎಂಬುದರ ಮೇಲೆ ತೀವ್ರ ಆಸಕ್ತಿ ಕೇಂದ್ರೀಕರಿಸಿದೆ ಎಂದು ಬಿಎಂಜೆ ಹೇಳಿದೆ. ಈಗಾಗಲೇ 13 ಉತ್ಪಾದನಾ ಕಂಪನಿಗಳು 7.48 ಬಿಲಿಯನ್ ಡೋಸ್ ಉತ್ಪಾದನೆಗೆ ಮುಂದಾಗಿವೆ. ಅತಿ ಹೆಚ್ಚು ಆದಾಯ ಹೊಂದಿರುವ ದೇಶಗಳ ಪಟ್ಟಿಯಲ್ಲಿರುವ ಯೂರೋಪಿಯನ್ ಒಕ್ಕೂಟ ಈಗಾಗಲೇ ಶೇಕಡಾ 51 ರಷ್ಟು ಅಥವಾ 3.85 ಬಿಲಿಯನ್ ಡೋಸ್‌ಗಳನ್ನು ಕಾಯ್ದಿರಿಸಿದೆ. ಇದು ವಿಶ್ವ ಜನಸಂಖ್ಯೆ ಶೇಕಡಾ 13.7 ರಷ್ಟಿದೆ ಎಂದು ತಿಳಿಸಿದೆ.
ಇನ್ನು, 13 ಉತ್ಪಾದನಾ ಕಂಪನಿಗಳು ಪೈಕಿ ಕೇವಲ 6 ಸಂಸ್ಥೆಗಳು ಮಾತ್ರ ಕಡಿಮೆ ಆದಾಯ ಇರುವ ಹಾಗೂ ಮಧ್ಯಮ ಆದಾಯ ಹೊಂದಿರುವ ದೇಶಗಳಿಗೆ ಲಸಿಕೆ ಮಾರಾಟ ಮಾಡುತ್ತಿವೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಆಸ್ಟ್ರಾ ಜೆನಿಕಾ (2.03 ಬಿಲಿಯನ್ ಡೋಸ್), ನೊವಾವ್ಯಾಕ್ಸ್ (1.1 ಬಿಲಿಯನ್ ಡೋಸ್), ರಷ್ಯಾದ ಗಮಲಿಯಾ ರಾಷ್ಟ್ರೀಯ ಸಂಶೋಧನಾ ಸಂಸ್ಥೆ (349 ಬಿಲಿಯನ್ ಡೋಸ್), ಚೀನಾದ ಸಿನೊ ವ್ಯಾಕ್ ಮತ್ತು ಕ್ಯಾನ್‌ಸಿನೊ 135 ಮಿಲಿಯನ್ ಡೋಸ್‌ಗಳನ್ನು ಪೂರೈಕೆ ಮಾಡಲಿವೆ.
ವಿಶೇಷ ಎಂದರೆ ಅಮೆರಿಕಾ, ಯುಕೆ, ಯೂರೋಪಿಯನ್ ಒಕ್ಕೂಟ ಹಾಗೂ ಕೆನಡಾ ದೇಶಗಳು ಕನಿಷ್ಟ 6 ಬಗೆಯ ವ್ಯಾಕ್ಸಿನ್‌ಗಳನ್ನು ಆರ್ಡರ್ ಮಾಡಿವೆ. ಜಪಾನ್ 4, ಬ್ರೆಜಿಲ್ 3 ಉತ್ಪಾದನಾ ಸಂಸ್ಥೆಗಳಲ್ಲಿ ವ್ಯಾಕ್ಸಿನ್ ಕಾಯ್ದಿರಿಸಿವೆ.