ಹಲವು ತಿಂಗಳುಗಳಿಂದ ಸಂಘರ್ಷದ ವಾತಾವರಣವಿರುವ ಪೂರ್ವ ಲಡಾಕ್‌ನ ಗಡಿ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾದ ಆಕ್ರಮಣಗಳ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ಹಿಂಜರಿಯುತ್ತಿರುವುದು ಕಂಡುಬರುತ್ತದೆ, ದಕ್ಷಿಣ ಏಷ್ಯಾದ ದೇಶದ ಸಂಕಟವನ್ನು ಅರಿತ ಬಳಿಕ ಏಷ್ಯನ್ ಡ್ರ್ಯಾಗನ್ ಚೀನಾ ಮತ್ತಷ್ಟು ಆಕ್ರಮಣಕಾರಿಯಾಗಿದೆ ಎಂದು ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಅಭಿಪ್ರಾಯಪಟ್ಟಿದ್ದಾರೆ.
"ಭಾರತವು ಆಕ್ರಮಣಕಾರಿಯಾಗಿ ತಿರುಗಿ ಬೀಳಲು ಮತ್ತು ಯಾವುದೆ ಕ್ರಮ ಜರುಗಿಸಲು ಹಿಂಜರಿಯುತ್ತಿದೆ ಎಂದು ಚೀನಾ ಅರಿತುಕೊಂಡಿದೆ. ಸರ್ಕಾರ ಏಕೆ ಕಾರ್ಯನಿರ್ವಹಿಸಲು ಹಿಂಜರಿಯುತ್ತಿದೆ ಎಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ, ”ಎಂದು ಎ.ಕೆ. ಆಂಟನಿ ಈಟಿವಿ ಭಾರತ್‌ಗೆ ತಿಳಿಸಿದರು. ನಿನ್ನೆ ಪಾಂಗೊಂಗ್ ತ್ಸೋ ಸರೋವರ ಪ್ರದೇಶದಲ್ಲಿ ಎಲ್‌ಎಸಿ ಗಡಿ ರೇಖೆಯನ್ನು ಉಲ್ಲಂಘಿಸಿ ಗಡಿ ಅತಿಕ್ರಮಿಸುವ ಕಪಟಿ ಚೀನಾ ದೇಶದ ಪ್ರಯತ್ನವನ್ನು ಭಾರತೀಯ ಸೇನೆಪಡೆ ತಡೆದಿದೆ. ಈ ಬಗ್ಗೆ ಪ್ರಶ್ನಿದಾಗ ಆಂಟನಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಜೂನ್ 15 ರಂದು ಗಾಲ್ವಾನ್ ವ್ಯಾಲಿ ಪ್ರದೇಶದಲ್ಲಿ ಪಿಎಲ್‌ಎ ಪಡೆಗಳೊಂದಿಗಿನ ಭೀಕರ ಘರ್ಷಣೆಯಲ್ಲಿ ಭಾರತ 20 ಸೈನಿಕರನ್ನು ಕಳೆದುಕೊಂಡ ಬಳಿಕ ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿ ಪಡೆಗಳು ಪೂರ್ವ ಲಡಾಕ್‌ನಲ್ಲಿ ಸತತ ಎಲ್‌ಎಸಿ ಉಲ್ಲಂಘನೆ ಮಾಡುತ್ತಿರುವ ಅವಧಿಯೂ ಈಗ ಸರಿ ಸುಮಾರು ನಾಲ್ಕು ತಿಂಗಳ ಕಾಲದಿಂದ ಮುಂದುವರೆದಿದೆ ಎಂದು ಭಾರತದ ಮಾಜಿ ರಕ್ಷಣಾ ಸಚಿವರು ಒತ್ತಿ ಹೇಳಿದ್ದಾರೆ. ಅಭಿಪ್ರಾಯಪಟ್ಟಿದ್ದಾರೆ. ಅದೇ ಸಂಘರ್ಷದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ 40 ಸೈನಿಕರು ಮೃತಪಟ್ಟಿರುವುದು ಧೃಡೀರಿಸದ ವರದಿಗಳ ಮೂಲಕ ತಿಳಿದು ಬಂದಿದೆ. ಆದರೂ ಚೀನಾ ಈ ಅಂಕಿ ಅಂಶಗಳ ಬಗ್ಗೆ ಗಪ್ ಚುಪ್ ಆಗಿದೆ.
"ನಾಲ್ಕು ತಿಂಗಳಿನಿಂದ ಗಡಿ ಆಕ್ರಮಣಗಳು ನಡೆಯುತ್ತಿವೆ. ಚೀನಾ ತನ್ನ ಸೈನ್ಯವನ್ನು ಸಜ್ಜುಗೊಳಿಸುತ್ತಿರುವಾಗ ಇಲ್ಲಿಯವರೆಗೆ ಭಾರತ ಸರ್ಕಾರ ಕೇವಲ ಹೇಳಿಕೆಗಳನ್ನು ನೀಡುವ ಮೂಲಕ ಕಾಲ ಕಳೆಯುತ್ತಿದೆ, ”ಎಂದು ಆಂಟನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಿಎಲ್‌ಎ ಸೈನ್ಯದ ಸಜ್ಜುಗೊಳಿಸುವಿಕೆಯು ಪೂರ್ವ ಲಡಾಖ್‌ನಲ್ಲಿ ಮಾತ್ರವಲ್ಲ, ಚೀನಾ ಜೊತೆ ಭಾರತ ಹಂಚಿಕೊಂಡಿರುವ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಗಡಿಯುದ್ದಕ್ಕೂ ಸೈನ್ಯ ನಿಯೋಜನೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
"ಪಿಎಲ್‌ಎ ಪಡೆಗಳು ಭಾರತೀಯ ಗಸ್ತು ಪಡೆಗಳನ್ನು ಈ ಹಿಂದೆ ಗಸ್ತು ತಿರುಗುತ್ತಿದ್ದ ಪ್ರದೇಶಗಳಲ್ಲಿ ಗಸ್ತು ತಿರುಗಲು ಅನುಮತಿ ನೀಡುತ್ತಿಲ್ಲʼ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಿಎಲ್‌ಎ ಪಡೆಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಭಾರತದ ಹಿಂಜರಿಕೆ ತೋರುತ್ತಿರುವುದು "ಚೀನಾದ ಆಕ್ರಮಣವನ್ನು ಎದುರಿಸುವ ಶಕ್ತಿಯನ್ನು ನಾವು ತೋರಿಸುತ್ತಿಲ್ಲ” ಎಂಬ ಅಭಿಪ್ರಾಯವನ್ನು ನೀಡುತ್ತಿದೆ ಎಂದು ಮಾಜಿ ರಕ್ಷಣಾ ಸಚಿವರು ಹೇಳಿದರು. ಆದರೆ, ಅಂತಹ ಯಾವುದೇ ಆಕ್ರಮಣವನ್ನು ಎದುರಿಸಲು ಭಾರತೀಯ ಸೇನೆ ಸಿದ್ಧವಾಗಿರಬೇಕು ಎಂದು ಮಾಜಿ ರಕ್ಷಣಾ ಸಚಿವರು ಹೇಳಿದ್ದಾರೆ.
"2013 ರಲ್ಲಿ, ಇದೇ ರೀತಿಯ ಘಟನೆ ಡೆಪ್ಸಾಂಗ್ ಕಣಿವೆಯಲ್ಲಿ ಸಂಭವಿಸಿತು, ಅಲ್ಲಿ ಚೀನಾದ ಪಡೆಗಳು ಅಂತಿಮವಾಗಿ ತಮ್ಮ ಆಕ್ರಮಣವನ್ನು ತ್ಯಜಿಸಿದವು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲಾಯಿತು" ಎಂದು ಆಂಟನಿ ನೆನಪಿಸಿಕೊಂಡರು.
ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಆಂಟನಿ ಏಳು ವರ್ಷಗಳಿಗೂ ಹೆಚ್ಚು ಕಾಲ ರಕ್ಷಣಾ ಸಚಿವರಾಗಿ, ಅಧಿಕ ಕಾಲ ಈ ಹುದ್ದೆ ಅಲಂಕರಿಸಿದ ಸಚಿವರಾಗಿದ್ದರು.
ಭಾರತದ ರಕ್ಷಣಾ ಸನ್ನದ್ಧತೆಯ ಬಗ್ಗೆ ಸಂಸತ್ತಿನಲ್ಲಿ ವಿವರವಾದ ಹೇಳಿಕೆಯನ್ನು ನೀಡಿದ ಆಂಟನಿ, ಸೇನೆ, ವಾಯುಪಡೆ ಮತ್ತು ನೌಕಾ ಸಾಮರ್ಥ್ಯಗಳನ್ನು ಹೆಚ್ಚಿಸಲು ರಕ್ಷಣಾ ಬಜೆಟ್ ಹೆಚ್ಚಿಸುವ ಅಗತ್ಯವನ್ನು ಒಪ್ಪಿಕೊಂಡಿದ್ದರು.
ಭಾರತ-ಚೀನಾ ಲಡಾಖ್ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ-ಚೀನಾ ಎರಡೂ ಕಡೆ ಸೇನೆ ನಿಯೋಜನೆ ಮತ್ತು ಸಂಘರ್ಷದ ಬಳಿಕ ಉಭಯ ರಾಷ್ಟ್ರಗಳ ಸಂಬಂಧ ಐತಿಹಾಸಿಕ ಅಧಃಪತನದತ್ತ ಸಾಗಿದ್ದು,ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡಿರುವ ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಯವರ ಹೇಳಿಕೆಗೆ ಆಂಟನಿ ಹೇಳಿಕೆಗಳು ಅನುಗುಣವಾಗಿವೆ.
-ಅಮಿತ್ ಅಗ್ನಿಹೋತ್ರಿ
ಲಡಾಖ್ ಗಡಿ ಸಂಘರ್ಷದಲ್ಲಿ ಚೀನಾ ವಿರುದ್ಧ ಕ್ರಮ ಜರುಗಿಸಲು ಭಾರತ ಹಿಂಜರಿಯುತ್ತಿದೆ: ಆಂಟನಿ - Ladakh border issue
"ನಾಲ್ಕು ತಿಂಗಳಿನಿಂದ ಗಡಿ ಆಕ್ರಮಣಗಳು ನಡೆಯುತ್ತಿವೆ. ಚೀನಾ ತನ್ನ ಸೈನ್ಯವನ್ನು ಸಜ್ಜುಗೊಳಿಸುತ್ತಿರುವಾಗ ಇಲ್ಲಿಯವರೆಗೆ ಭಾರತ ಸರ್ಕಾರ ಕೇವಲ ಹೇಳಿಕೆಗಳನ್ನು ನೀಡುವ ಮೂಲಕ ಕಾಲ ಕಳೆಯುತ್ತಿದೆ, ”ಎಂದು ಮಾಜಿ ರಕ್ಷಣಾ ಸಚಿವ ಆಂಟನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.