ETV Bharat / bharat

ಭಾರತದ ಮುಷ್ಟಿಯಲ್ಲಿದೆ ಕೊರೊನಾ... ರ್‍ಯಾಪಿಡ್‌​ ಸ್ಪೀಡ್​ನಲ್ಲಿ ಗುಣಮುಖವಾಗುತ್ತಿವೆ ಆ ರಾಷ್ಟ್ರಗಳು! - ಕೊರೊನಾ ವೈರಸ್​ ವಿರುದ್ಧ ಭಾರತ ಹೋರಾಟ ಸುದ್ದಿ

ಇಂದಿನ ಜಗತ್ತಿನಲ್ಲಿ ಕೊರೊನಾ ರೌದ್ರ ನರ್ತನ ತೋರುತ್ತಿದೆ. ಈ ವೈರಸ್​ಗೆ ವಿಶ್ವಕ್ಕೆ ವಿಶ್ವವೇ ತತ್ತರಿಸುತ್ತಿದೆ. ಕಡಿಮೆ ಜನ ಸಂಖ್ಯೆಯುಳ್ಳ, ವೈದ್ಯಲೋಕದ ಅಧಿಪತಿಗಳಾದ ದೊಡ್ಡ ದೊಡ್ಡ ರಾಷ್ಟ್ರಗಳೇ ಕೊರೊನಾಗೆ ಹೆದರುತ್ತಿವೆ. ಕೊರೊನಾ ಕೈಯಲ್ಲಿ ಜಗತ್ತಿದ್ರೇ, ಭಾರತದ ಕಪಿಮುಷ್ಟಿಯಲ್ಲಿ ಕೊರೊನಾ ಇದೆ!!! ಅದು ಹೇಗೆ ಅನ್ನೋದೇ ಈಗ ಇಂಟ್ರಸ್ಟಿಂಗ್​​

India fight, India fight against coronvirus, India fight against coronvirus news, ಭಾರತ ಹೋರಾಟ, ಕೊರೊನಾ ವೈರಸ್​ ವಿರುದ್ಧ ಭಾರತ ಹೋರಾಟ, ಕೊರೊನಾ ವೈರಸ್​ ವಿರುದ್ಧ ಭಾರತ ಹೋರಾಟ ಸುದ್ದಿ,
ಸಂಗ್ರಹ ಚಿತ್ರ
author img

By

Published : Apr 10, 2020, 4:42 PM IST

ಹೈದರಾಬಾದ್​: ಹೌದು, ವರ್ಲ್ಡೋಮೀಟರ್​ ಪ್ರಕಾರ 10 ಏಪ್ರಿಲ್​ 2020 ಮಧ್ಯಾಹ್ನದ ಹೊತ್ತಿಗೆ ವಿಶ್ವದ್ಯಾದಂತ ಇಲ್ಲಿಯವರೆಗೆ 16,07,745 ಕೊರೊನಾ ಸೋಂಕಿತರ ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ 95,812 ಜನರು ಕೊರೊನಾ ವೈರಸ್​ಗೆ ತುತ್ತಾಗಿದ್ದು, 3,57,180 ಜನ ಗುಣಮುಖರಾಗಿದ್ದಾರೆ. ಈಗ ಚಾಲ್ತಿಯಲ್ಲಿರುವ ಕೊರೊನಾ ಪ್ರಕರಣಗಳು ಕೇವಲ 11,54,753.

ವಿಶ್ವದ ದೊಡ್ಡಣ್ಣನಿಗೆ ಕೊರೊನಾ ಸಂಕಷ್ಟ!

ಕೊರೊನಾ ವೈರಸ್​ಗೆ ದೊಡ್ಡ, ದೊಡ್ಡ ರಾಷ್ಟ್ರಗಳೇ ತತ್ತರಿಸುತ್ತವೆ. ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದಿರುವ ಅಮೆರಿಕದಲ್ಲಿ ಒಟ್ಟು 4,68,895 ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ 16,697 ಸಾವನ್ನಪ್ಪಿದ್ರೇ, 25,928 ಜನ ಗುಣಮುಖರಾಗಿ ಮನೆ ಸೇರಿಸಿದ್ದಾರೆ. ಈಗ ಸದ್ಯ 4,26,270 ಪ್ರಕರಣಗಳು ಚಾಲ್ತಿಯಲ್ಲಿವೆ. ಅದರಂತೆ ಇಟಲಿ, ಫ್ರಾನ್ಸ್​, ಯುಕೆ, ಟರ್ಕಿ, ಬೆಲ್ಜಿಯಂ, ನೆದರ್​ಲ್ಯಾಂಡ್​ ಸೇರಿದಂತೆ ಕೆಲ ರಾಷ್ಟ್ರಗಳು ತತ್ತರಿಸುತ್ತಿವೆ.

ರ್‍ಯಾಪಿಡ್‌​ ವೇಗದಲ್ಲಿ ಗುಣಮುಖವಾಗುತ್ತಿರುವ ರಾಷ್ಟ್ರಗಳು!

ಕೆಲ ರಾಷ್ಟ್ರಗಳು ಮೊದಲು ಕೊರೊನಾ ವೈರಸ್​ಗೆ ತತ್ತರಿಸಿದ್ದವು. ಈಗ ಅದರ ವಿರುದ್ಧ ಹೋರಾಟ ನಡೆಸಿ ರ್‍ಯಾಪಿಡ್‌​ ವೇಗದಲ್ಲಿ ಗುಣಮುಖವಾಗುತ್ತಿದ್ದಾವೆ. ಅಂತಹ ಸಾಲಿನಲ್ಲಿ ಮೊದಲು ಬರುವುದೇ ಸ್ಪೇನ್​. ಹೌದು, ಸ್ಪೇನ್​ ಕೊರೊನಾ ವೈರಸ್​ನಿಂದ ಅಕ್ಷರಶಃ ತತ್ತರಿಸಿದಂತಹ ರಾಷ್ಟ್ರ. ಅಮೆರಿಕದ ನಂತರ ಅತೀ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದು ಮತ್ತು ಕೊರೊನಾ ವೈರಸ್​ನಿಂದ ಹೆಚ್ಚು ಜನರು ಸಾವನ್ನಪ್ಪಿರುವ ದೇಶವೂ ಸಹ ಹೌದು.

ಇಲ್ಲಿ ಒಟ್ಟು 1,57,022 ಪ್ರಕರಣಗಳು ಕಂಡು ಬಂದಿವೆ. ಆದ್ರೆ ಇದರಲ್ಲಿ 15,843 ಜನರು ಸಾವನ್ನಪ್ಪಿದ್ರೇ ಬರೋಬ್ಬರಿ 55,668 ಜನ ಗುಣ ಮುಖರಾಗಿದ್ದಾರೆ. ಈಗ ಅಲ್ಲಿ ಕೇವಲ 85,511 ಪ್ರಕರಣಗಳು ಮಾತ್ರ ಉಳಿದಿದ್ದಾವೆ.

ಜರ್ಮಿನಿಯಲ್ಲಿ ಒಟ್ಟು 1,18,235 ಪ್ರಕರಣಗಳು ಕಂಡು ಬಂದಿದ್ದೇವೆ. ಇಲ್ಲಿಯವರೆಗೆ 2,607 ಜನ ಮಾತ್ರ ಸಾವನ್ನಪ್ಪಿದ್ದಾರೆ. ಆದ್ರೆ ಇಲ್ಲಿ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಒಟ್ಟು 52,407 ಜನ ಗುಣಮುಖರಾಗಿದ್ದು, 63,221 ಪ್ರಕರಣಗಳು ಚಾಲ್ತಿಯಲ್ಲಿವೆ.

ಇರಾನ್​ ದೇಶದಲ್ಲಿ ಶೇ. 50ಕ್ಕಿಂತ ಹೆಚ್ಚು ಜನರು ಇಲ್ಲಿ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಅಲ್ಲಿ 66,220 ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ 4,110 ಜನ ಸಾವನ್ನಪ್ಪಿದ್ದಾರೆ. ಆದ್ರೆ 32,309 ಜನ ಗುಣಮುಖರಾಗಿದ್ದು, 29,801 ಪ್ರಕರಣಗಳು ಚಾಲ್ತಿಯಲ್ಲಿವೆ. ಹೀಗೆ ಫ್ರಾನ್ಸ್​, ಸ್ವಿಟ್ಜರ್​​ಲ್ಯಾಂಡ್, ದಕ್ಷಿಣ​ ಕೊರಿಯಾ, ಆಸ್ಟ್ರೀಯಾ ಸೇರಿದಂತೆ ಕೆಲ ರಾಷ್ಟ್ರಗಳು ರ್‍ಯಾಪಿಡ್‌ ಸ್ಫೀಡ್​ನಲ್ಲಿ ಕೊರೊನಾ ವಿರುದ್ಧ ಹೋರಾಡಿ ಗುಣಮುಖವಾಗುತ್ತಿವೆ.

ಈ ರಾಷ್ಟ್ರಗಳ ಸ್ಥಿತಿ ಕಠಿಣ...

ಕೆಲ ರಾಷ್ಟ್ರಗಳ ಸ್ಥಿತಿ ಕಠಿಣವಾಗಿದೆ. ಅದರಲ್ಲಿ ಮೊದಲು ಬರುವುದೇ ಯುಕೆ. ಇಲ್ಲಿ ಒಟ್ಟು 65,077 ಪ್ರಕರಣಗಳು ಕಂಡು ಬಂದಿವೆ. ಆದ್ರೆ ಸಾವಿನ ಸಂಖ್ಯೆ ಹೆಚ್ಚು, ಗುಣಮುಖರಾದವರ ಸಂಖ್ಯೆ ತೀರಾ ಕಡಿಮೆಯಾಗಿದೆ. 7,978 ಜನ ಕೊರೊನಾ ವಿರುದ್ಧ ಹೋರಾಡಿ ಸಾವನ್ನಪ್ಪಿದ್ದಾರೆ. ಆದ್ರೆ ಕೊರೊನಾ ವಿರುದ್ಧ ಗೆದ್ದವರು ಮಾತ್ರ ಕೇವಲ 135 ಜನ ಮಾತ್ರ. ಅದರಂತೆ ನೆದರ್​ಲ್ಯಾಂಡ್​, ಟರ್ಕಿ, ಪೋರ್ಚುಗಲ್​, ರಷ್ಯಾ, ಇಸ್ರೇಲ್​ ಅಂತಾ ರಾಷ್ಟ್ರಗಳು ಕೊರೊನಾ ವಿರುದ್ಧ ತತ್ತರಿಸುತ್ತಿವೆ.

ಭಾರತದ ಕಪಿಮುಷ್ಟಿಯಲ್ಲಿ ಕೊರೊನಾ!

ವಿಶ್ವದಾದ್ಯಂತ ಅತೀ ಹೆಚ್ಚು ಜನಸಂಖ್ಯೆಯುಳ್ಳ ಎರಡನೇ ರಾಷ್ಟ್ರ ಅಂದ್ರೆ ಭಾರತ. ಇಲ್ಲಿ ಜನ ಸಂದಣಿ ಹೆಚ್ಚಾಗಿರುವ ಪ್ರದೇಶಗಳೇ ಹೆಚ್ಚು. ಇಲ್ಲಿ ಅತೀ ಹೆಚ್ಚಾಗಿ ವೈರಸ್​ ಹರಡಬಹುದಾಗಿತ್ತು. ವಿಶ್ವದ ದೊಡ್ಡಣ್ಣನಂತೆ ಭಾರತವೂ ಸಹ ಕೊರೊನಾ ವಿರುದ್ಧ ಸತತ ಹೋರಾಟ ನಡೆಸಬೇಕಾದ ಸ್ಥಿತಿ ಉಂಟಾಗುತ್ತಿತ್ತು. ಆದ್ರೆ ಕೇಂದ್ರ ಸರ್ಕಾರ ಇದಕ್ಕೆ ಅನುವು ಮಾಡಿಕೊಡಲಿಲ್ಲ. ಆದಷ್ಟು ಆ ವೈರಸ್​ನ್ನು ಹತ್ತಿಕ್ಕಲು ಎಲ್ಲ ಕ್ರಮಗಳನ್ನ ಕೈಗೊಂಡಿದೆ. ವೈರಸ್​ ವಿರುದ್ಧ ಹೋರಾಡಲು ತನ್ನನ್ನೇ ಲಾಕ್​ ಮಾಡಿಕೊಂಡಿತು ಭಾರತ. ಇದುವರೆಗೆ ಭಾರತದಲ್ಲಿ 6,771 ಪ್ರಕರಣಗಳು ಬೆಳಕಿಗೆ ಬಂದಿದ್ದು, 228 ಜನ ಸಾವನ್ನಪ್ಪಿದ್ದಾರೆ. ಒಟ್ಟು 635 ಜನ ಗುಣಮುಖರಾಗಿದ್ದು, 5,908 ಪ್ರಕರಣಗಳು ಚಾಲ್ತಿಯಲ್ಲಿವೆ.

ಚೀನಾದಲ್ಲಿ ಉಳಿದ ಪ್ರಕರಣಗಳೆಷ್ಟು!?

ಚೀನಾದಲ್ಲಿ ಬೆರಳಣಿಕೆ ಪ್ರಕರಣಗಳು ಮಾತ್ರ ಉಳಿದಿವೆ. ಇಲ್ಲಿಯವರೆಗೆ ಚೀನಾದಲ್ಲಿ 81,907 ಪ್ರಕರಣಗಳು ಕಂಡು ಬಂದಿದ್ದವು. ಇದರಲ್ಲಿ 3,336 ಜನ ಸಾವನ್ನಪ್ಪಿದ್ದಾರೆ. ಒಟ್ಟು 77,455 ಜನ ಗುಣಮುಖರಾಗಿದ್ದು, ಕೇವಲ 1,116 ಪ್ರಕರಣಗಳು ಮಾತ್ರ ಚಾಲ್ತಿಯಲ್ಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.