ನವದೆಹಲಿ: ಗೌತಮ ಬುದ್ಧನ ಜನ್ಮಸ್ಥಳ ಕುರಿತಾದ ವಿವಾದವನ್ನು ಭಾರತ ಭಾನುವಾರ ತಳ್ಳಿಹಾಕಿದ್ದು, ಬೌದ್ಧ ಧರ್ಮದ ಸ್ಥಾಪಕರು ನೇಪಾಳದ ಲುಂಬಿನಿಯಲ್ಲಿ ಜನಿಸಿದರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದಿದೆ.
ಶನಿವಾರ ನಡೆದ ವೆಬ್‌ನಾರ್ ಸಂದರ್ಭದಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಅವರು ಭಾರತದ ನೈತಿಕ ನಾಯಕತ್ವ ಮತ್ತು ಬುದ್ಧ ಮತ್ತು ಮಹಾತ್ಮ ಗಾಂಧಿಯವರ ಬೋಧನೆಗಳು ಇನ್ನೂ ಹೇಗೆ ಪ್ರಸ್ತುತವಾಗಿವೆ ಎಂಬುದರ ಕುರಿತು ಪ್ರಸ್ತಾಪಿಸಿದ್ದಾರೆ. ಈ ವೇಳೆ ಬುದ್ಧನ್ನನು ಭಾರತೀಯ ಎಂದು ಕರೆದಿದ್ದರು. ಇದಕ್ಕೆ ನೇಪಾಳ ಮಾಧ್ಯಮಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.
ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ವಿವಾದಕ್ಕೆ ತೆರೆ ಎಳೆಯುವ ಹೇಳಿಕೆ ನೀಡಿದ್ದಾರೆ. "ಗೌತಮ ಬುದ್ಧ ನೇಪಾಳದ ಲುಂಬಿನಿಯಲ್ಲಿ ಜನಿಸಿದನೆಂಬುದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಶ್ರೀವಾಸ್ತವ ಹೇಳಿದರು. ಭಾನುವಾರ ನವದೆಹಲಿಯಲ್ಲಿ "ನಮ್ಮ ಹಂಚಿಕೆಯ ಬೌದ್ಧ ಪರಂಪರೆ" ಕಾರ್ಯಕ್ರಮದಲ್ಲಿ ಜೈಶಂಕರ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿದರು.
ನೇಪಾಳದ ವಿದೇಶಾಂಗ ಸಚಿವಾಲಯವು ನೇಪಾಳ ಮಾಧ್ಯಮದಲ್ಲಿ ಉಲ್ಲೇಖಿಸಿದ ಜೈಶಂಕರ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿತ್ತು " ಬುದ್ಧನು ನೇಪಾಳದ ಲುಂಬಿನಿಯಲ್ಲಿ ಜನಿಸಿದನೆಂಬುದಕ್ಕೆ ಐತಿಹಾಸಿಕ ಪುರಾವೆಗಳಿಂದ ಸಾಬೀತಾಗಿರುವ ಒಂದು ಸುಸ್ಥಾಪಿತ ಮತ್ತು ನಿರಾಕರಿಸಲಾಗದ ಸಂಗತಿಯಾಗಿದೆ" ಎಂದು ಹೇಳಿದ್ದರು.