ನವದೆಹಲಿ : ಭಾರತ-ಚೀನಾ ಗಡಿ ವಿವಾದ ನಡುವೆ, ಪೂರ್ವ ಲಡಾಖ್ನ ಪಾಂಗಾಂಗ್ ಸರೋವರ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ಮೆರೈನ್ ಕಮಾಂಡೋಗಳನ್ನು (ಮಾರ್ಕೋಸ್) ನಿಯೋಜಿಸಲಾಗಿದೆ.
ಈ ವರ್ಷದ ಏಪ್ರಿಲ್-ಮೇಯಿಂದ ಭಾರತೀಯ ಮತ್ತು ಚೀನಾದ ಪಡೆಗಳು ಸಂಘರ್ಷದಲ್ಲಿ ತೊಡಗಿದ್ದ ಪಾಂಗಾಂಗ್ ಸರೋವರ ಪ್ರದೇಶದಲ್ಲಿ ಮಾರ್ಕೋಸ್ ಅನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನೌಕಾಪಡೆಯ ಕಮಾಂಡೋಗಳು ಶೀಘ್ರದಲ್ಲೇ ಸರೋವರದಲ್ಲಿ ಕಾರ್ಯಾಚರಣೆಗಾಗಿ ಹೊಸ ದೋಣಿಗಳನ್ನು ಪಡೆಯಲಿದ್ದಾರೆ. ಪ್ಯಾರಾ ಸ್ಪೆಶಲ್ ಫೋರ್ಸ್ ಮತ್ತು ಕ್ಯಾಬಿನೆಟ್ ಸೆಕ್ರೆಟರಿಯೇಟ್ನ ಸ್ಪೆಷಲ್ ಫ್ರಾಂಟಿಯರ್ ಫೋರ್ಸ್ ಸೇರಿದಂತೆ ಭಾರತೀಯ ಸೇನೆಯ ವಿಶೇಷ ಪಡೆಗಳು ಪೂರ್ವ ಲಡಾಖ್ನಲ್ಲಿ ವಿಶೇಷ ಕಾರ್ಯಾಚರಣೆಗಾಗಿ ದೀರ್ಘಕಾಲ ಕಾರ್ಯನಿರ್ವಹಿಸುತ್ತಿವೆ.