ನವದೆಹಲಿ: ದೇಶದಲ್ಲಿ ಲಾಕ್‌ಡೌನ್ ಜಾರಿಗೆ ತಂದು ಒಂದೂವರೆ ತಿಂಗಳು ಕಳೆಯುತ್ತಿದೆ. ಇಂದಿನಿಂದ ಮೂರನೇ ಹಂತದ ಜನತಾ ಕರ್ಫ್ಯೂ ಜಾರಿಗೆ ಬರುತ್ತಿದೆ. ಈ ಮಧ್ಯೆಯೂ ಕೊರೊನಾ ಅಟ್ಟಹಾಸಕ್ಕೆ ಕಡಿವಾಣ ಬೀಳುತ್ತಿಲ್ಲ.
ಕಳೆದ 24 ಗಂಟೆಯಲ್ಲಿ 2,553 ಹೊಸ ಪ್ರಕರಣಗಳು ಕಾಣಿಸಿಕೊಂಡಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 42,553 ತಲುಪಿದೆ. ಕಳೆದೊಂದು ದಿನದಲ್ಲಿ 72 ಜನರು ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 1,373 ಆಗಿದೆ.
ಸದ್ಯ ದೇಶದಲ್ಲಿ 29,453 ಸಕ್ರೀಯ ಸೋಂಕಿತ ಕೇಸ್ಗಳಿವೆ. ಇವರನ್ನು 11,706 ಜನರು ಗುಣಮುಖರಾಗಿದ್ದಾರೆ. ಆದ್ರೆ, ಕೇವಲ ಒಂದೇ ವಾರದಲ್ಲಿ 10 ಸಾವಿರ ಸೋಂಕಿತರು ಕಂಡುಬಂದಿದ್ದು ಜನಾತಂಕಕ್ಕೆ ಕಾರಣ.
ಯಾವ ರಾಜ್ಯದಲ್ಲಿ ಎಷ್ಟು ಸೋಂಕಿತರು?
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 12,974, ಗುಜರಾತ್ನಲ್ಲಿ 5,428, ದೆಹಲಿಯಲ್ಲಿ 4,549, ತಮಿಳುನಾಡು 3,023, ರಾಜಸ್ಥಾನದಲ್ಲಿ 2,886, ಮಧ್ಯಪ್ರದೇಶದಲ್ಲಿ 2,846 ಜನರಿಗೆ ಸೋಂಕು ಬಾಧಿಸಿದೆ.
ಇಂದಿನಿಂದ ಲಾಕ್‌ಡೌನ್ 3.0 ಅಗ್ನಿಪರೀಕ್ಷೆ:
ಇಂದಿನಿಂದ ಲಾಕ್‌ಡೌನ್ 3.0 ಅಗ್ನಿಪರೀಕ್ಷೆ ಶುರುವಾಗಿದೆ. ಈ ಮೂಲಕ ಹೊಸ ಕಾರ್ಯಸೂಚಿಗಳೊಂದಿಗೆ ಕೋವಿಡ್ ವಿರುದ್ಧದ ಹೋರಾಟ ಮುಂದುವರಿಯಲಿದೆ.