ETV Bharat / bharat

ಹಿಂಸಾತ್ಮಕ ರೂಪ ಪಡೆದ ಭಾರತ-ಚೀನಾ ಸಂಘರ್ಷ: ಮೂವರು ಯೋಧರು ಹುತಾತ್ಮ, ಸೇನಾಧಿಕಾರಿಗಳ ಸಭೆ

author img

By

Published : Jun 16, 2020, 1:29 PM IST

1962 ಯುದ್ಧದ ಬಳಿಕ ಭಾರತ-ಚೀನಾ ಗಡಿ ವಿವಾದ ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಓರ್ವ ಸೇನಾಧಿಕಾರಿ ಸೇರಿ ಮೂವರು ಭಾರತೀಯ ಯೋಧರನ್ನು ಚೀನಾ ಹತ್ಯೆಗೈದಿದೆ. ಈ ಘಟನೆ ಕಳೆದ ರಾತ್ರಿ ನಡೆದಿದೆ.

India-China standoff
ಭಾರತ-ಚೀನಾ ಗಡಿಯಲ್ಲಿ ಸಂಘರ್ಷ

ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಓರ್ವ ಸೇನಾಧಿಕಾರಿ ಸೇರಿ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.

ಸೋಮವಾರ ರಾತ್ರಿ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷ ಉಂಟಾಗಿದ್ದು, ಈ ವೇಳೆ ಭಾರತೀಯ ಯೋಧರನ್ನು ಚೀನಾ ಹತ್ಯೆಗೈದಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಗಡಿಯಲ್ಲಿ ಉಭಯ ದೇಶಗಳ ಸೇನಾಧಿಕಾರಿಗಳಿಂದ ಸಭೆ:

ಪರಿಸ್ಥಿತಿಯನ್ನು ನಿಯಂತ್ರಿಸಲು ಎರಡೂ ದೇಶದ ಹಿರಿಯ ಮಿಲಿಟರಿ ಅಧಿಕಾರಿಗಳು ಗಡಿಯಲ್ಲಿ ಸಭೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.